ಹೈದರಾಬಾದ್: 
ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದು 6 ವರ್ಷದ ಬಾಲಕ ಮೃತಪಟ್ಟ ಘಟನೆ ಬುಧವಾರ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಪನ್ಯಂನಲ್ಲಿ ನಡೆದಿದೆ.
ಪುರುಷೋತ್ತಮ್ ರೆಡ್ಡಿ(6) ಮೃತಪಟ್ಟ ಬಾಲಕ. ಕರ್ನೂಲ್ ಜಿಲ್ಲೆಯ ಪಣ್ಯಂ ಎಂಬಲ್ಲಿರುವ ವಿದ್ಯಾನಿಕೇತನ ಖಾಸಗಿ ವಸತಿ ಶಾಲೆಯಲ್ಲಿ ಯುಕೆಜಿ ಕಲಿಯುತಿದ್ದ ಬಾಲಕ ಮಧ್ಯಾಹ್ನದ ಊಟದ ವೇಳೆ ಈತ ಸಾಂಬಾರ್ ತುಂಬಿದ್ದ ಪಾತ್ರೆಯೊಳಗೆ ಬಿದ್ದಿದ್ದಾನೆ. ತಕ್ಷಣವೇ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದರೂ, ಪುರುಷೋತ್ತಮ್ ದೇಹ ಸಾಕಷ್ಟು ಸುಟ್ಟು ಹೋಗಿದ್ದು, ಚರ್ಮದ ಮೇಲೆ ಗುಳ್ಳೆಗಳು ಬಂದಿತ್ತು. ಅಷ್ಟರಲ್ಲಿ ಬಾಲಕ ಮೃತನಾಗಿದ್ದಾನೆ.
ಊಟದ ವೇಳೆ ಈತ ಸರದಿಯಲ್ಲಿ ಬರದೆ ಓಡಿ ಬಂದು ಪಾತ್ರೆಯೊಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಪೊಲೀಸರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








