ಕೆಪಿಎಲ್ ಫಿಕ್ಸಿಂಗ್ : ಮ್ಯಾಚ್ ಫಿಕ್ಸಿಂಗ್ ಗೆ ಚಿಯರ್ ಗಲ್ರ್ಯ್ ಬಳಸಿಕೊಂಡ ಬುಕ್ಕಿಗಳು..!

ಬೆಂಗಳೂರು

    ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದ ಬುಕ್ಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಸಿಸಿಬಿ ಪೊಲೀಸರಿಗೆ ಮ್ಯಾಚ್ ಫಿಕ್ಸಿಂಗ್ ನಡೆಸಲು ಚಿಯರ್ ಗಲ್ರ್ಸ್ ಗಳನ್ನು ಬಳಸಿಕೊಂಡಿರುವುದು ಪತ್ತೆಯಾಗಿದೆ ಕಿಗೆ ಬೆಳಕಿಗೆ ಬಂದಿದೆ.

     ಕೆಪಿಎಲ್ ಫಿಕ್ಸ್ ಮಾಡಲು ಚಿಯರ್ ಗಲ್ರ್ಸ್ ಮೂಲಕ ಬ್ಯಾಟ್ಸ್‍ಮನ್ ಮತ್ತು ಬೌಲರ್ ಫಿಕ್ಸ್ ಮಾಡುತ್ತಾ ಇದ್ದರು. ಒಟ್ಟಿನಲ್ಲಿ ಹನಿಟ್ರ್ಯಾಪ್ ಮಾಡೋ ಮೂಲಕ ಬುಕ್ಕಿಗಳು ಆಟಗಾರರನ್ನು ಸೆಳೆದ ಆರೋಪವೂ ಇದೆ. ಸದ್ಯಕ್ಕೆ ಆ ಮಾಹಿತಿ ಆಧರಿ ಸಿಸಿಬಿ ಪೊಲೀಸರು ತನಿಖೆಗೆ ಇಳಿದಿದ್ದಾರೆ.

   ಕಳೆದ ಸೋಮವಾರ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಹರ್ಯಾಣ ಮೂಲದ ಪಿ ಸಯ್ಯಮ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬವೇಶ್ ಬಪ್ನಾ ನೆರವಿನಿಂದ ಸಯ್ಯಮ್ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.ಆತ ವಿಚಾರಣೆಯಲ್ಲಿ ಫಿಕ್ಸಿಂಗ್ ಗೆ ಚಿಯರ್ ಗಲ್ರ್ಸ್ ಗಳನ್ನು ಬಳಸುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link