ಬೆಂಗಳೂರು
ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಕೊಂಡು ಹೋಗುತ್ತಿದ್ದ ನಿವೃತ್ತ ಗ್ರಂಥಪಾಲಕರೊಬ್ಬರ 4 ಲಕ್ಷ ರೂಗಳನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದೋಚಿ ಪರಾರಿಯಾಗಿರುವ ಘಟನೆ ಕನಕಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿವೃತ್ತ ಗ್ರಂಥಪಾಲಕ ತಿಮ್ಮಗೌಡ ಅವರು ಕನಕಪುರದ ಎಕ್ಸ್ ಮುನಿಸಿಪಲ್ ಸ್ಕೂಲ್ ರಸ್ತೆಯ ಎಸ್‌ಬಿಎಂ ಬ್ಯಾಂಕಿನ ಶಾಖೆಯಿಂದ ಹಣ ಡ್ರಾ ಮಾಡಿಕೊಂಡು ಬ್ಯಾಗ್‌ನಲ್ಲಿಟ್ಟುಕೊಂಡು ಹೋಗುವಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಣ ದೋಚಿ ಪರಾರಿಯಾಗಿದ್ದಾರೆ.
ಕಳೆದ ಮೂರು ತಿಂಗಳಿನಿಂದ ರೂರಲ್ ಪದವಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿಗೆ ವೇತನ ನೀಡಿರಲಿಲ್ಲ.ಎರಡು ದಿನಗಳ ಹಿಂದೆ ಕಾಲೇಜು ಆಡಳಿತ ಮಂಡಳಿ ಎಲ್ಲರ ಬ್ಯಾಂಕ್ ಖಾತೆಗೆ ವೇತನ ಹಾಕಿತ್ತು. ಮಂಜುನಾಥ್ ಹಾಗೂ ನಾಗಮ್ಮ ಅವರು ಹಣ ಡ್ರಾ ಮಾಡಿಕೊಳ್ಳಲು ಬುಧವಾರ ಎಸ್‌ಬಿಎಂ ಬ್ಯಾಂಕ್‌ಗೆ ಹೋಗಿದ್ದರು.ನಿವೃತ್ತ ಗ್ರಂಥಪಾಲಕ ತಿಮ್ಮಗೌಡ ಅವರು ಕೂಡ ಬ್ಯಾಂಕ್‌ಗೆ ಹೋಗಿದ್ದರು.
ನಿಮ್ಮ ಹಣವನ್ನು ಡ್ರಾ ಮಾಡಿಕೊಂಡು ತರುತ್ತೇನೆ. ನೀವು ಕಾಲೇಜಿಗೆ ಹೋಗಿ ಎಂದು ತಿಮ್ಮಗೌಡ ಅವರು ನಾಗಮ್ಮ ಹಾಗೂ ಮಂಜುನಾಥ್ ಅವರಿಂದ ಚೆಕ್ ಪಡೆದಿದ್ದರು. ಈ ಮೂಲಕ ಮಂಜುನಾಥ್ ಅವರ 3.58 ಲಕ್ಷ ರೂ. ಹಾಗೂ ನಾಗಮ್ಮ ಅವರ 42 ಸಾವಿರ ರೂ. ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂಪಾಯಿಗಳನ್ನು ತಿಮ್ಮೇಗೌಡ ಬ್ಯಾಗ್‌ನಲ್ಲಿ ಹಣ ತರುತ್ತಿದ್ದರು. ನಗರಸಭೆ ದಾಟಿ ಕಾಲೇಜು ಆವರಣ ಪ್ರವೇಶಿಸುವುದಕ್ಕೂ ಮುನ್ನ ಬೈಕ್‌ನಲ್ಲಿ ಬಂದ ಕಳ್ಳರು, ಹಣ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.ಈ ಸಂಬಂಧ ಕನಕಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








