
ತುಮಕೂರು: ನಮ್ಮನ್ನು ಯಾರು ಬೆಳೆಸಲಿಲ್ಲವೆಂದು ಯುವ ಉದ್ಯಮಿಗಳು ವ್ಯಥೆ ಪಡದೆ ಸ್ವಯಂ ಪ್ರಯತ್ನದಿಂದ ಉದ್ಯಮಿಗಳಾಗಿ ಸಾಧನೆ ಮಾಡಿ ತೋರಿಸಬೇಕೆಂದು ಪ್ರಜಾಪ್ರಗತಿ ಸಂಪಾದಕ ಡಾ.ಎಸ್.ನಾಗಣ್ಣ ಕರೆ ನೀಡಿದರು.
ಅವರು ನಗರದ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶನಿವಾರ ಹಾಲುಮತ ಉದ್ಯಮಿಗಳ ಸಂಘದ ಕನಕೋದ್ಯಮಿ ತುಮಕೂರು ಅಧ್ಯಾಯ ವಿಭಾಗದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ಕ್ಷೇತ್ರವಿರಲಿ ಸಾಧನೆ ಮಾಡುವ ಛಲವಿರಬೇಕು. ನಾವು ಬೆಳೆದು ಸಾಧಕರಾದಾಗ ಎಲ್ಲರೂ ನಮ್ಮ ಬೆಂಬಲಕ್ಕೆ ಬರುತ್ತಾರೆ. ವಿವಿಧ ರಂಗಗಳಲ್ಲಿ ಬೃಹತ್ ಸಂಸ್ಥೆಗಳನ್ನು ಕಟ್ಟಿರುವ ಡಾ.ಎಂ.ಆರ್.ಹುಲಿನಾಯ್ಕರ್, ನಾಗರಾಜು, ಜಿ.ಬಿ. ವಿನಯ್‌ಕುಮಾರ್, ಸುನೀಲ್ ಜಯರಾಜ್ ಅವರ ಸಾಧನೆಗಳು ನವ್ಯೋದ್ಯಮಿಗಳಿಗೆ ಸ್ಪೂರ್ತಿಯಾಗಲಿ ಎಂದು ಆಶಿಸಿದರು.
ಮಾಜಿ ಸಂಸದ ಸಿ.ಎನ್. ಭಾಸ್ಕರಪ್ಪ ಅವರು ಪುರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ನಿಸ್ಪೃಹ ಜನ ಸೇವಾ ಕಾರ್ಯಗಳನ್ನು ಕೈಗೊಂಡರೂ ಪತ್ರಿಕೆಗಳಲ್ಲಿ ಹೆಸರು ಪ್ರಕಟಿಸಲು ಮಡಿವಂತಿಕೆ ಪ್ರದರ್ಶಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಅವರೇ ದಿನಪತ್ರಿಕೆ ಆರಂಭಿಸಿದ್ದು, ಧ್ವನಿಯಿಲ್ಲದ ಸಮುದಾಯಕ್ಕೂ ಪ್ರಾತಿನಿಧ್ಯ ಕೊಡಲು ಸಾಧ್ಯವಾಯಿತು. ಪಜಾಪ್ರಗತಿ ದಿನಪತ್ರಿಕೆ ಜಿಲ್ಲಾಮಟ್ಟದಿಂದ ರಾಜ್ಯಪತ್ರಿಕೆಯಾಗಿ ಬೆಳೆದಿರುವುದದರ ಹಿಂದೆ ನಾಲ್ಕು ದಶಕದ ಪ್ರಯತ್ನ ಅಡಗಿದೆ. ಹಂತಹAತವಾಗಿ ಸಾಧನೆ ಮಾಡಬೇಕು. ನಿಮ್ಮ ಸಾಧನೆಗೆ ಪೂರಕ ನೆರವಾಗಲು ಪೂಜ್ಯ ಸ್ವಾಮಿ ಯೋಗೀಶ್ವರನಂದಜೀ ಅವರ ಮಾರ್ಗದರ್ಶನದಲ್ಲಿ ಕನಕೋದ್ಯಮಿ ಸಂಘಟನೆ ಸ್ಥಾಪಿತಗೊಂಡಿದೆ. ತುಮಕೂರಿಗೂ ವಿಸ್ತರಣೆಯಾಗಿರುವುದು ಒಳ್ಳೆಯ ಬೆಳವಣಿಗೆ. ಸಂಘಟನೆಗೆ ಪೂರಕ ಸಹಕಾರ ನೀಡುವುದಾಗಿ ಘೋಷಿಸಿದರು.
ಕನಕೋದ್ಯಮಿತುಮಕೂರು ಅಧ್ಯಾಯದ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಸುನೀಲ್ ಜಯರಾಜ್ ಅವರು ಕನಕೋದ್ಯಮಿಯೆಂಬುದು ಕೇವಲ ಹಾಲುಮತ ಸಮುದಾಯದ ಉದ್ದಿಮೆದಾರರ ಸಂಘಟನೆಯ ವೇದಿಕೆಯಲ್ಲ. ಉದ್ದಿಮೆದಾರರು ಹಾಗೂ ಗ್ರಾಹಕರ ನಡುವಿನ ಸೇತುವೆ ಯಾಗಲು ಸ್ಥಾಪಿಸಿರುವ ಸಂಘಟನೆ. ರಾಜಕೀಯ ರಹಿತವಾದ ಉದ್ದೇಶದೊಂದಿಗೆ ಸಮುದಾಯದ ಉದ್ಯಮಿಗಳು ಪರಸ್ಪರ ನೆರವಾಗಲು ಆ ಮೂಲಕ ಗ್ರಾಹಕರನ್ನು ವೃದ್ಧಿಸಿಕೊಂಡು ವ್ಯವಹಾರ ವಿಸ್ತರಿಸಿಕೊಳ್ಳಲು ಸ್ವಾಮಿ ಯೋಗೀಶ್ವರ ನಂದಜೀ ಅವರ ಮಾರ್ಗದರ್ಶನದಲ್ಲಿ ನೆರವಾಗಲು ಶುರು ಮಾಡಿದ್ದು ಇಂದು ಸಾವಿರಕ್ಕೂ ಅಧಿಕಉದ್ದಿಮೆದಾರರು ಸದಸ್ಯರಾಗಿದ್ದಾರೆ. ಪ್ರಸಕ್ತ ರಾಜಧಾನಿ ಹೊರತಾಗಿ ಸಂಘಟನೆ ವಿಸ್ತರಣೆ ಯಾಗಿದ್ದರೆ ಅದು ತುಮಕೂರಿನಲ್ಲಿ. ಇಂದು ತುಮಕೂರಲ್ಲಿ ಕನಕೋದ್ಯಮ ಹೊಸ ಅಧ್ಯಾಯ ಶುರುವಾಗಿದ್ದು ರಾಜ್ಯಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ. ಮುಂದಿನ ವರ್ಷ ಜನವರಿಯಲ್ಲಿ ಬೆಂಗಳೂರಲ್ಲಿ ೫೦೦೦ ಉದ್ಯಮಿಗಳ ಬೃಹತ್ ಸಮಾವೇಶ ಏರ್ಪಡಿಸಿ ಸಂಘಟನೆಯನ್ನು ಮತ್ತಷ್ಟು ಸದೃಢಪಡಿಸಲಾಗುವುದು ಎಂದು ಹೇಳಿ ಸಾಮಾನ್ಯ ನೌಕರನ ಮಗನಾಗಿ ಉದ್ಯೋಗಿಯಾಗಿದ್ದ ತಾವೂ ಉದ್ಯಮಿಯಾಗಿ ೫೦೦ ಜನರಿಗೆ ಉದ್ಯೋಗ ನೀಡುವ ಸಂಸ್ಥೆ ಕಟ್ಟಿರುವ ಯಶೋಗಾಥೆಯನ್ನು ವಿವರಿಸಿದರು.
ಕಾರ್ಮಿಕ ಇಲಾಖೆ ನಿವೃತ್ತ ಜಂಟಿ ಕಾರ್ಯದರ್ಶಿ ವಸಂತ್‌ಕುಮಾರ್ ಇಟ್ಟಣಗಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಸಮುದಾಯದ ಉದ್ಯಮಿಗಳ ಸಂಖ್ಯೆ ಬೆರಳಣಿಕೆಯಷ್ಟಿದ್ದು ಉದ್ಯಮಶೀಲತಾ ಮನೋಭಾವವನ್ನು ವೃದ್ಧಿಸಲು ಕನಕೋದ್ಯಮಿ ಸಂಘಟನೆ ದೃವತಾರೆಯಂದೆ ಗೋಚರಿಸಿದೆ. ಲಕ್ಷ, ಕೋಟಿಗಟ್ಟಲೇ ಹಣ ಕೊಟ್ಟು ಸರ್ಕಾರಿ ನೌಕರಿ ಹಿಡಿಯುವುದಕ್ಕಿಂತ ಸ್ವಾವಲಂಬಿ ಯಾಗಿ ಸ್ವಂತ ಉದ್ಯಮಿಗಳಾಗುವುದು ಮುಖ್ಯ ಎಂದರು.
ರಾಜಕೀಯ ಅಧಿಕಾರವೂ ಮುಖ್ಯ: ಇನ್ಸೆ0ಟ್ಸ್ ಐಎಎಸ್ ಅಕಾಡೆಮಿ ಮುಖ್ಯಸ್ಥರಾದ ಜಿ. ಬಿ. ವಿನಯ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ರಾಜಕೀಯ ಅಧಿಕಾರ ಇಂದು ಎಲ್ಲಾ ಅವಕಾಶಗಳಿಗೂ ಪ್ರಮುಖಾಸ್ತçವಾಗಿದ್ದು, ಉದ್ಯಮಿಗಳಾದವರು ರಾಜಕೀಯ ನಾಯಕತ್ವ ವನ್ನು ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ಹೇಳಿ ಇನ್ಸೆ0ಟ್ಸ್ ಸ್ಥಾಪನೆ ಹಿಂದಿನ ವೃತ್ತಾಂತವನ್ನು ವಿವರಿಸಿದರು. ಉದ್ಯಮಿ ಮಂಜು ಪ್ರಸಾದ್, ಪಿಎನ್‌ಸಿ ಕಾಂಗ್‌ನಿಟಿಯೋ ಗ್ರೂಪ್‌ನ ಮುಖ್ಯಸ್ಥ ರಾಮಾಂಜಿನಯ್ಯ, ತುಮಕೂರು ವಿವಿ ಸಮಾಜಕಾರ್ಯ ವಿಭಾಗದ ಡೀನ್ ಪ್ರೊ. ಕೆ. ಜಿ. ಪರಶುರಾಮ್ ತಮ್ಮ ಅನಿಸಿಕೆ ಹಂಚಿಕೊAಡರು. ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಜಾಪ್ರಗತಿ ಸಹ ಸಂಪಾದಕ ಟಿ. ಎನ್. ಮಧುಕರ್ ಆಶಯ ನುಡಿಗಳನ್ನಾಡಿ ಸ್ವಾಗತಿಸಿದರು. ಕನಕೋದ್ಯಮಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆರ್. ಸುದರ್ಶನ್ ವಂದಿಸಿದರು. ಅಭಿಲಾಷ್ ನಿರ್ವಹಿಸಿದರು. ಸಮಾರಂಭದಲ್ಲಿ ಡಾ. ರಮಣ್ ಹುಲಿನಾಯ್ಕರ್. ಕವಿರತ್ನ ಕಾಳಿದಾಸ ಸಹಕಾರ ಸಂಘದ ಅಧ್ಯಕ್ಷ ಧರ್ಮರಾಜ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ. ಆರ್. ಸುರೇಶ್, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ, ಅನಿಲ್‌ಕುಮಾರ್, ನರಸಿಂಹಮೂರ್ತಿ, ಡಾ.ಶಶಿಧರ್, ಮಹಾಲಿಂಗಯ್ಯ, ಮಾಜಿ ಕಾರ್ಪೋರೇಟರ್‌ಗಳಾದ ಲಕ್ಷಿನರಸಿಂಹರಾಜು, ಇಂದ್ರಕುಮಾರ್, ಹೆಬ್ಬಾಕ ಮಲ್ಲಿಕಾರ್ಜುನ್ ಸೇರಿದಂತೆ ಸಮುದಾಯದ ಉದ್ಯಮಿಗಳು, ಗಣ್ಯರು, ಜನಪ್ರತಿನಿಧಿಗಳು ಹಾಜರಿದ್ದರು.
ಕನಕೋದ್ಯಮಿ ಸಂಘಟನೆ ಸಮುದಾಯದ ಯುವಜನರು ಉದ್ಯಮಿಯಾಗಿ ಬೆಳೆಯಲು ಪೂರಕವಾಗಿದೆ .ಉದ್ಯಮ ಶೀಲತೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಬಲಾಢ್ಯರಾಗಬೇಕು. ಆರ್ಥಿಕ ಸಶಕ್ತರಾದ ಸಮಾಜಕ್ಕೆ ಪೂರಕವಾಗಿ ಕೆಲಸಮಾಡಿದಾಗ ಎಲ್ಲರಿಂದಲೂ ಗೌರವಿಸಲ್ಪಡುತ್ತೇವೆ, ಕನಕೋದ್ಯಮಿ ತುಮಕೂರು ಅಧ್ಯಾಯ ಬದಲಾವಣೆಯ ಕ್ರಾಂತಿಗೆ ನಾಂದಿ ಹಾಡಲಿ.
-ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ಶಿಕ್ಷಣ ಸಮೂಹದ ಅಧ್ಯಕ್ಷ
ಹಣವಷ್ಟೇ ಅಲ್ಲ ಪರಿಶ್ರಮ ಜ್ಞಾನವೂ ಬಂಡವಾಳವೇ
ಬಿಎ0ಟಿಸಿ ಉಪಾಧ್ಯಕ್ಷ ನಿಖೇತ್ ರಾಜ್ ಮೌರ್ಯ ಮುಖ್ಯ ಅತಿಥಿಯಾಗಿ ಮಾತನಾಡಿ, ಉದ್ಯಮಯೆಂದರೆ ಹೆದರುವ ಸ್ಥಿತಿಯಿದೆ. ಕಾರಣ ಅದಕ್ಕೆ ಬಂಡವಾಳಬೇಕು. ಆದರೆ ಹಣವೊಂದೆ ಉದ್ಯಮ ಕ್ಷೇತ್ರದ ಸಾಧನೆಗೆ ಅಸ್ತçವಲ್ಲ. ನಮ್ಮ ಪರಿಶ್ರಮ ಜ್ಞಾನವನ್ನು ಬಂಡವಾಳವಾಗಿಸಿಕೊAಡು ಯಶಸ್ವಿಯಾಗಬಹುದು. ಯಾವುದೇ ಅಧಿಕಾರ, ಅವಕಾಶ ಸಿಗಲಿ. ತಮ್ಮ ಕೈಲಾದಷ್ಟು ಸಮಾಜ ಬಾಂಧವರಿಗೆ ಅನುಕೂಲ ಕಲ್ಪಿಸಬೇಕು. ಉದ್ಯಮಿಗಳು ಹಾಗೂ ಗ್ರಾಹಕರ ನಡುವಿನ ಸಂಪರ್ಕ ಕೊಂಡಿಯಾದ ಸುನೀಲ್ ಜಯರಾಜ್ ಅವರ ಸಾರಥ್ಯದ ಕನಕೋದ್ಯಮಿ ಸಂಘಟನೆ ಸ್ಥಾಪನೆ ಚಿಂತನೆಯೇ ಒಂದು ಅದ್ಬುತ ಪರಿಕಲ್ಪನೆ. ಇದನ್ನು ತುಮಕೂರಿಗೂ ತಂದಿರುವ ಟಿ.ಎನ್. ಮಧುಕರ್, ಧರ್ಮರಾಜ್ ಪ್ರೊ. ಕೆ. ಜಿ. ಪರಶುರಾಮ್ ಮತ್ತಿತರÀರ ಕಾರ್ಯ ಶ್ಲಾಘನೀಯವೆಂದರು.
ನಮ್ಮನ್ನು ಯಾರೋ ಉದ್ದಾರ ಮಾಡುವುದಿಲ್ಲವೆಂದು ಬೇರೆಯವರ ಮೇಲೆ ಗೂಬೆಕೂರಿಸುತ್ತಾ ಕಾಲ ಹರಣ ಮಾಡದೆ, ಚಿಂತನೆ ಮಾಡಬೇಕು. ಕುರಿ ಸಾಕುತ್ತೇವೆಂದರೆ ಕುರಿಗಳಂತೆ ಬದುಕಬೇಕೆ? ಛಲ ಮತ್ತು ಚಿಂತನೆಯಿAದ ಸಾಧನೆ ಮಾಡಬೇಕು. ತಾನೊಬ್ಬರೆ ಬೆಳೆಯದೆ ಬೇರೆಯವರನ್ನು ಬೆಳೆಸಿ. ಸಂಸ್ಕೃತಿ ಸಂಸ್ಕಾರ ಇಲ್ಲದಿದ್ದರೆ ಎಷ್ಟೆ ಸಿರಿವಂತರಾದರೂ ಪ್ರಯೋಜನವಿಲ್ಲ. ದಾನ, ಸೇವೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ ದ್ವೇಷ ಅಸೂಹೆ ಅಹಂಕಾರ ಬಿಟ್ಟಾಗ ವ್ಯಕ್ತಿ ಬೆಳವಣಿಗೆ ಸಾಧ್ಯ. ಕನಕೋದ್ಯಮಿ ಸಂಘಟನೆ ಉದ್ಯಮಿಗಳಾದವರು, ಉದ್ಯಮಿಗಳಾಗುವವರಿಗೆ ಪರಸ್ಪರ ಸಹಕಾರದಿಂದ ಬೆಳೆಯಲು ಸೂಕ್ತ ವೇದಿಕೆಯಾಗಿದೆ.
–ಸ್ವಾಮಿ ಯೋಗೀಶ್ವರನಂದಜೀ, ರಾಮಕೃಷ್ಣ, ಯೋಗಾಶ್ರಮ ಹಾರೋಹಳ್ಳಿ.








