ತಿಪಟೂರು :
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಗುತ್ತಿದ್ದ ಬಸ್ನಲ್ಲಿದ್ದ ವ್ಯಕ್ತಿಯನ್ನು ಬಂದಿಸಿ ಸುಮಾರು 15.430 ಕೆ.ಜಿಯಷ್ಟು ಒಣಗಿದ ಗಾಂಜವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಡಿವೈಎಸ್ಪಿ ನಾರಾಯಣನಾಯ್ಕ ತಿಳಿಸಿದರು.
ಇಂದು ತಿಪಟೂರು ಅಬಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು ಶುಕ್ರವಾರ ಸಂಜೆ ಬೆಂಗಳೂರು ನಿಂದ ಶಿವಮೊಗ್ಗ ತರಳುತ್ತಿದ್ದ ಬಸ್ ನಂ ಕೆ.ಎ.17 ಎಫ್ 1529 ಬಸ್ನಲ್ಲಿ ಗಾಂಜ ಬರುತ್ತಿರುವ ಖಚಿತ ಮಾಹಿತಿ ತಿಳಿದು ಬಸ್ನಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದ ವ್ಯಕ್ತಿ ಆಂದ್ರಪ್ರದೇಶದ ವಾರಂಗಲ್ ಜಿಲ್ಲೆಯ ಆತ್ಮಕೂರು ಮಂಡಲ್ನ ಪುಕೊರ್ತಿ ಗ್ರಾಮದ ದುಪ್ಪಟ್ಟಿ ಮಲ್ಲಯ್ಯ ಬಿನ್ ದುಪ್ಪಟ್ಟಿ ಕಲ್ಲಯ್ಯ ಎಂಬುವವನ್ನು ಬಂಧಿಸಿ ಆತನಿಂದ 15.430ಕೆ.ಜಿ ಗಾಂಜವನ್ನು ವಶಪಡಿಸಿಕೊಳ್ಳಲಾಗಿದೆ.
ಇವನು ತಿಪಟೂರಿಗೆ ಬಂದು ಇಲ್ಲಿಂದ ಅರಸೀಕೆರೆ, ಚನ್ನರಾಯಪಟ್ಟಣ ಮುಂತಾದ ಸ್ಥಳಗಳಿಗೆ ಮಾರುತ್ತಿದ್ದನೆಂದು ತಿಳಿದು ಬಂದಿದ್ದು ಶೀಘ್ರದಲ್ಲಿಯೇ ಈತನು ಯಾರು ಯಾರಿಗೆ ಸರಬರಾಜುಮಾಡುತ್ತಿದ್ದನೆಂದು ತಿಳಿಯಲು ತನಿಖೆ ಪ್ರಗತಿಯಲ್ಲಿದ್ದು ಅವರುಗಳನ್ನು ಬಂಧಿಸಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಬಕಾರಿ ನಿರೀಕ್ಷಕ ಕೆ.ಟಿ.ವಿಜಯ್ಕುಮಾರ್ ಮಾತನಾಡಿ ಕಳೆದ ತಿಂಗಳಲ್ಲಿ ನಾವು 8 ಪ್ರಕರಣಗಳನ್ನು ಬೇದಿಸಿದ್ದು ಅದರ ಫಲವಾಗಿ ಇಂದು ಮಾರಾಟಗಾರಿಗೆ ಸರಬರಾಜು ಮಾಡುತ್ತಿದ್ದವನ್ನು ಹಿಡಿಯಲು ಸಹಾಯವಾಯಿತು.
ನಾವು ತಾಲ್ಲೂಕುನ್ನು ಮಾದಕ ವಸ್ತುಗಳ ಮುಕ್ತ ವಲಯವನ್ನು ಮಾಡುವ ಸಲುವಾಗಿ ನಮ್ಮ ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ಪ್ರಕರಣಗಳಿಂದ ಜಪ್ತಿಪಡಿಸಿದ ವಸ್ತುಗಳ ಅಂದಾಜು ಮೌಲ್ಯ ಸುಮಾರು 2,10,000/- ರೂ ಗಳಾಗಿದ್ದು ಈ ಹಿಂದೆಯೂ ಸಹ ತಾಲ್ಲೂಕಿನಲ್ಲಿ ಸಾಕಷ್ಟು ದಾಳಿಗಳನ್ನು ನಡೆಸಿ 18 ಜನ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರು ಗಾಂಜ ಹಾಗೂ ಇತರೆ ಮಾದಕ ವಸ್ತುಗಳನ್ನು ಮಾರುವವರ ಬಗ್ಗೆ ಮಾಹಿತಿ ನೀಡಿ ತಿಪಟೂರನ್ನು ಗಾಂಜಾ ಮತ್ತು ಮಾದಕ ವಸ್ತು ರಹಿತ ತಾಲ್ಲೂಕನ್ನು ಮಾಡಲು ಸಹಕರಿಸಬೇಕೆಂದು ಕೋರಿದರು.
ಸುದ್ಧಿಗೋಷ್ಠಿಯಲ್ಲಿ ಅರುಣಕುಮಾರ್.ಎಂ.ಜೆ., ಅಬಕಾರಿ ಉಪನಿರೀಕ್ಷಕರಾದ ಗಂಗರಾಜು, ರಾಮಲಿಂಗಯ್ಯ, ನಾಗರಾಜು, ಅಬಕಾರಿ ಇಲಾಖೆಯ ರಕ್ಷಕರಾದ ಪ್ರಸನ್ನ ಎಸ್., ಸ್ವಾಮಿ ಜಿ.ಆರ್., ಮುಸ್ತಾಫ, ರೇವಣ್ಣ, ಕೇಶವ, ರವಿ, ಕೃಷ್ಣಮೂರ್ತಿ, ಮಲ್ಲಿಕಾರ್ಜುನ, ತಾಲ್ಲೂಕು ಕಛೇರಿಯ ಆರ್.ಐ ಸ್ವಾಮಿ ಮತ್ತಿತರರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ