ಬಿಜೆಪಿ ಏಕಚಕ್ರಾಧಿಪತ್ಯವಾಗಿ ಆಡಳಿತವನ್ನು ಮಾಡುತ್ತಿದೆ : ಕೆ.ಬಿ.ಕೋಳಿವಾಡ

ರಾಣೇಬೆನ್ನೂರು

     ಸಂವಿಧಾನದ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಬಿಜೆಪಿ ವಿರುದ್ಧವಾಗಿ ಜನತೆ ಮತದಾನ ಮಾಡಲು ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷವು ಏಕಚಕ್ರಾಧಿಪತ್ಯವಾಗಿ ಆಡಳಿತವನ್ನು ಮಾಡುತ್ತಿದೆ ಎಂದು ಕಾಂಗ್ರೇಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಹೇಳಿದರು.

     ತಮ್ಮ ಕುಟುಂಬ ಪರಿವಾರದೊಂದಿಗೆ ಹುಟ್ಟೂರಾದ ಗುಡಗೂರ ಗ್ರಾಮಕ್ಕೆ ತೆರಳಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನದ ನಿಯಮಗಳನ್ನು ಮೀರಿ ಜನತೆಯಲ್ಲಿ ಇಲ್ಲಸಲ್ಲದ ಆಮೀಷಗಳನ್ನು ನೀಡುತ್ತಾ ಮತ ಪರಿವರ್ತನೆಗೆ ತೊಡಗಿದ್ದು ಶೋಚನೀಯವಾದುದು.

    ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗಿಯೂ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಮೊದಲು ಸಂವಿಧಾನದ ರಕ್ಷಣೆಯಾಗಬೇಕು . ಎಲ್ಲೆಡೆ ಕಾಂಗ್ರೇಸ್‍ನ ಅಲೆ ಬೀಸುತ್ತಿದೆ. ಬಿಜೆಪಿಯವರು ಎಷ್ಟೇ ಆಮೀಷ ಒಡ್ಡಿದರೂ ಪ್ರಜ್ಞಾವಂತ, ಪ್ರಭುದ್ಧ ಮತದಾರರ ಮನಸ್ಸನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಈ ಬಾರಿಯ ಉಪ ಚುನಾವಣೆಯಲ್ಲಿ 20 ಸಾವಿರಕ್ಕೂ ಹೆಚ್ಚಿನ ಅಂತರದಿಂದ ನನಗೆ ಗೆಲುವು ನಿಶ್ಚಿತವಾಗಿ ಲಭಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link