ಮತ ಎಣಿಕೆ ಕಾರ್ಯವನ್ನು ಪಾರದರ್ಶಕ ಹಾಗೂ ಸೂಕ್ಷ್ಮವಾಗಿ ನಿರ್ವಹಿಸಿ : ಅಪರ ಜಿಲ್ಲಾಧಿಕಾರಿ

ಹಾವೇರಿ
 
     ಮತ ಎಣಿಕೆ ಕಾರ್ಯಕ್ರಮವನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಸೂಕ್ಷ್ಮವಾಗಿ ನಿಭಾಯಿಸಿ ಎಂದು ಎಣಿಕೆ ಸಿಬ್ಬಂದಿ ಹಾಗೂ ಮೇಲ್ವಿಚಾರಕರಿಗೆ ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರು ಸಲಹೆ ನೀಡಿದರು.ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಎಣಿಕೆ ಸಿಬ್ಬಂದಿ, ಮೇಲ್ವಿಚಾರಕರು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರರುಗಳಿಗೆ ನಡೆದ ಮತ ಎಣಿಕೆ ಪ್ರಕ್ರಿಯೆ ತರಬೇತಿ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.
 
    ವಿಧಾನಸಭಾ ಉಪ ಚುನಾವಣೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದೀರಿ. ಮತ ಎಣಿಕೆ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ ಎಂದು ಹೇಳಿದರು. ಮತ ಎಣಿಕೆ ಕಾರ್ಯ ಅತ್ಯಂತ ಸೂಕ್ಷ್ಮವಾದದ್ದು ಹಾಗೂ ಸರಳವಾದದ್ದು. ಗರಿಷ್ಠ ಎಚ್ಚರದಿಂದ ಸೂಕ್ಷ್ಮವಾಗಿ ನಿಭಾಯಿಸಿ. ಎಣಿಕೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ಕೂಡಲೇ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದರು.
      ಚುನಾವಣಾ ಮಾಸ್ಟರ್ ಟ್ರೈನರ್‍ರಾದ ಶಬ್ಬೀರ್ ಮುನಿಯಾರ್ ಅವರು  ಮತ ಎಣಿಕೆ ಪ್ರಕ್ರಿಯೆ ಹಾಗೂ ನಿಯಮಾವಳಿ ಕುರಿತಂತೆ ವಿವರವಾಗಿ ಮಾಹಿತಿ ನೀಡಿದರು. ಪ್ರತಿಯೊಂದು ಟೇಬಲ್‍ಗಳಲ್ಲೂ ಕಂಪ್ಯೂಟರ್ ಸಿಸ್ಟಂ, ಇಂಟರನೆಟ್ ಕನೆಕ್ಸನ್,  ಸ್ಕ್ಯಾನರ್ ವ್ಯವಸ್ಥೆ ಇರುತ್ತದೆ .ಎಣಿಕೆಯ ಸಿದ್ಧತೆ, ದಾಖಲೀಕರಣ ಕುರಿತಂತೆ ವಹಿಸಬೇಕಾದ ಕ್ರಮಗಳು ಹಾಗೂ ಎಣಿಕೆ ಸಂದರ್ಭದಲ್ಲಿ ನಿಗಧಿತ ನಮೂನೆಗಳ ಭರ್ತಿ, ಮೇಲು ರುಜು ಪ್ರಕ್ರಿಯೆ ಕುರಿತಂತೆ ವಿವರವಾಗಿ ತರಬೇತಿ ನೀಡಿದರು. ಎಣಿಕೆ ಕಾರ್ಯಕ್ಕೆ ಯಾವ ಸಿಬ್ಬಂದಿ, ಯಾವ ಕೊಠಡಿಗೆ ತೆರಳುತ್ತಿರಿ ಎಂಬುದು ಎಣಿಕೆ ದಿನವಾದ ಡಿಸೆಂಬರ್ 9 ರಂದು ಬೆಳಿಗ್ಗೆ ತಿಳಿಯಲಿದೆ. ಅಂದು ಬೆಳಿಗ್ಗೆ 7-30ರೊಳಗೆ ಎಣಿಕೆ ಕೇಂದ್ರಕ್ಕೆ ಆಗಮಿಸಿ ನಿಯೋಜಿತ ಕೊಠಡಿಗೆ ತೆರಳಿ ನಿಯಮಾನುಸಾರ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.
      ಚುನಾವಣಾ ತಹಶೀಲ್ದಾರರಾದ ಪ್ರಶಾಂತ್ ನಾಲ್ವಾರ್ ಅವರು ಮಾತನಾಡಿ, ಮತ ಎಣಿಕೆ ವೇಳೆ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಬೇಕು. ಹಾಗೂ ಕೌಂಟಿಂಗ್ ಏಜೆಂಟರ್‍ಗಳ ಸಂದೇಹವನ್ನು ತಾಳ್ಮೆಯಿಂದ ಬಗೆಹರಿಸಬೇಕು. ಮತ ಎಣಿಕೆಯ ಪ್ರತಿ ಸುತ್ತಿನಲ್ಲೂ ಏನಾದರೂ ದೋಷಗಳು ಇದೆಯಾ ಎಂಬುದನ್ನು ಚುನಾವಣಾಧಿಕಾರಿಗಳು ಪರಿಶೀಲಿಸಬೇಕು. ಒಂದು ವೇಳೆ ಸಮಸ್ಯೆಗಳು ಕಂಡುಬಂದಲ್ಲಿ ಸಂಬಂಧಪಟ್ಟವರಿಗೆ ಕೂಡಲೇ ಮಾಹಿತಿ ನೀಡಬೇಕು ಹಾಗೂ ಸಿಬ್ಬಂದಿಗಳು ತಮಗೆ ನಿಗದಿಪಡಿಸಿದ ಟೇಬಲ್‍ಗಳ ಮೇಲೆ ಮಾತ್ರ ಕೂರಬೇಕು. ತಮಗಿಷ್ಟವಾದ ಟೇಬಲ್‍ಗಳಿಗೆ ಸಿಬ್ಬಂದಿ ಬದಲಾವಣೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
         ಈ ಸಂದರ್ಭದಲ್ಲಿ ಸಾಮಾನ್ಯ ವೀಕ್ಷಕರಾದ ಐಎಎಸ್ ಅಧಿಕಾರಿ ಚಕ್ರವರ್ತಿ ಹಾಗೂ ಮೈಕ್ರೋ ಅಬ್ಜರ್ವರ್‍ಗಳು, ಮತ ಎಣಿಕೆಗೆ ನಿಯೋಜಿತ ಸೂಪರ್ ವೈಸರ್ ಮತ್ತು ಸಹಾಯಕ ಸೂಪರ್ ವೈಸರ್ ಹಾಗೂ ರಾಣೇಬೆನ್ನೂರು ಚುನಾವಣಾ ಅಧಿಕಾರಿ ದೇವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link