ಗುಡಿವಾಡ:

ಈರುಳ್ಳಿ ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡದಲ್ಲಿ ನಡೆದಿದೆ.
55 ವರ್ಷದ ಸಾಂಬಯ್ಯ ಮೃತಪಟ್ಟ ವ್ಯಕ್ತಿ. ಸೋಮವಾರ ಆತ ಇಲ್ಲಿನ ರೈತ ಬಜಾರ್ ಗೆ ಈರುಳ್ಳಿ ಕೊಳ್ಳಲು ಬಂದಿದ್ದ. ಖರೀದಿಗಾಗಿ ಸರತಿ ಸಾಲಲ್ಲಿ ನಿಂತಿದ್ದ ವೇಳೆ ಸಾಂಬಯ್ಯ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಸಾಂಬಯ್ಯ ಬದುಕುಳಿಯಲಿಲ್ಲ.
ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇದೇ ವಿಷಯವನ್ನು ವಿಧಾನಸಭಾ ಕಲಾಪದಲ್ಲಿ ಪ್ರಶ್ನಿಸಿದ್ದು, ಸರಕಾರದ ಪ್ರತಿಕ್ರಿಯೆಗೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








