ಚಿತ್ರದುರ್ಗ :
ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಚಿತ್ರದುರ್ಗ ನಗರದ ಜಿಎಂಟಿ ವೃತ್ತದ ಬಳಿ ನಡೆದಿದೆ.
ಬೆಂಗಳೂರು ಮೂಲದ ಕಾರ್ತಿಕ್ ಗೌಡ (20), ಹರ್ಷ (20), ಶ್ರೀನಿಧಿ (20) ಮೃತ ದುರ್ದೈವಿಗಳು. ಘಟನೆಯಲ್ಲಿ 6 ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರಿನ ಬಸವನಗುಡಿ ವಿಜಯ ಕಾಲೇಜಿನ ಅಂತಿಮ ವರ್ಷದ 13 ಮಂದಿ ಕಾಮರ್ಸ್ ವಿದ್ಯಾರ್ಥಿಗಳು ಏ.19ರಂದು ಗೋಕರ್ಣಕ್ಕೆ ಪ್ರವಾಸಕ್ಕೆ ಹೋಗಿದ್ದರು. ಸೋಮವಾರ ಮುಂಜಾನೆ ಗೋಕರ್ಣದಿಂದ ಬೆಂಗಳೂರಿಗೆ ಹಿಂದಿರುಗುವಾಗ ಚಿತ್ರದುರ್ಗದ ಜಿಎಂಐಟಿ ವೃತ್ತದ ಬಳಿ ಟಿಟಿ ವಾಹನ ಬಂದಾಗಿ ಅದರ ಟೈರ್ ಸ್ಫೋಟಿಸಿತ್ತು. ಈ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ