ಶಿಗ್ಗಾವಿ :
ರಸ್ತೆ ಅಪಘಾತ ಪರಿಹಾರ ಪ್ರಕರಣದಲ್ಲಿ ಶಿಗ್ಗಾವಿ ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಕೆ.ಎಸ್.ಆರ್.ಟಿ.ಎಸ್. ಬಸ್ ಜಪ್ತಿ ಮಾಡಲಾಗಿದೆ.
ಸನ್ 2017 ರಲ್ಲಿ ಮೋಟಾರ್ ಸೈಕಲ್‍ಗೆ ಕೆ.ಎಸ್.ಆರ್.ಟಿ.ಎಸ್. ಬಸ್ ಡಿಕ್ಕಿ ಹೊಡೆದು ಶಿಗ್ಗಾವಿ ತಾಲೂಕಿನ ಖುರ್ಸಾಪುರ ಗ್ರಾಮದ ಸುಭಾಸ ಜವಳಗಿ ಎಂಬುವವರು ಮೃತಪಟ್ಟಿದ್ದರು ಆ ಪ್ರಕರಣದ ವಿಚಾರಣೆ ನಡೆಸಿದ ಶಿಗ್ಗಾವಿ ದಿವಾಣಿ ನ್ಯಾಯಾಧೀಶರು ಮೃತರ ಅವಲಂಬಿತರಿಗೆ (ಕುಟುಂಬಕ್ಕೆ) ಬಡ್ಡಿ ಸಮೇತ ಒಟ್ಟು ರೂ. 9,62,000 ಗಳನ್ನು ಪರಿಹಾರ ನೀಡುವಂತೆ ಆದೇಶಿಸಿದ್ದರೂ ಸಹ ಕೆ.ಎಸ್.ಆರ್.ಟಿ.ಎಸ್. ರವರು ನ್ಯಾಯಾಲಯದ ಆದೇಶ ಪಾಲಿಸದೇ ಇರುವುದರಿಂದ ಕಳೆದ ನಾಲ್ಕು ಬಾರಿ ಬಸ್ ಜಪ್ತಿ ಮಾಡಿದ್ದರೂ ಸಂಪೂರ್ಣ ಪರಿಹಾರದ ಹಣವನ್ನು ಭರಣಾ ಮಾಡದೇ ಇದ್ದುದ್ದರಿಂದ ಪುನಃ 5 ನೇ ಬಾರಿ ಜಪ್ತ ಮಾಡಲು ಆದೇಶಿಸಿದ್ದರಿಂದ ಜಪ್ತ ಮಾಡಲಾಗಿದೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರಾದ ಎನ್.ಬಿ. ಉಳ್ಳಾಗಡ್ಡಿ ಹಾಗೂ ಬಿ.ಸಿ. ಕೂಡಲ ವಕೀಲರು ಹಾಗೂ ಕೋರ್ಟಿನ ಬೇಲಿಫರಾದ ಶ್ರೀಮತಿ ಎಲ್.ಎಂ.ದಾಲಿನ್, ಹಾಗೂ ಪ್ರೊಸೆಸ್ ಸಿಬ್ಬಂದಿ ಜೆ.ವಿ.ಪಾಟೀಲ, ಬುಳ್ಳಾರವರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ