ಕಳ್ಳಂಬೆಳ್ಳ ಕೆರೆ ದಂಡೆಯಲ್ಲಿ ಹೇಮಾವತಿ ಹೋರಾಟ ಸಮಿತಿ

ಶಿರಾ

    ಕಳೆದ 19 ದಿನಗಳಿಂದಲೂ ಹೇಮಾವತಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘÀಟನೆಗಳು ಮದಲೂರು ಕೆರೆ ಸೇರಿದಂತೆ ನಿಗದಿಗೊಳಿಸಿದ ಕೆರೆಗಳಿಗೆ ಹೇಮಾವತಿಯ ನೀರನ್ನು ಹರಿಸಿ ಭರ್ತಿ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟದ ಕಿಚ್ಚು ಭಾನುವಾರ ಕಳ್ಳಂಬೆಳ್ಳ ಕೆರೆಗೆ ತಲುಪಿದೆ.

    ಶಿರಾ ತಹಸೀಲ್ದಾರ್ ಕಚೇರಿಯ ಮುಂದೆ ಕಳೆದ 19 ದಿನಗಳಿಂದ ಹೇಮಾವತಿ ಹೋರಾಟ ಸಮಿತಿ ಮದಲೂರು ಕೆರೆಗೆ ನೀರು ಹರಿಸಲು ಪ್ರತಿಭಟನೆ ನಡೆಸುತ್ತಿದ್ದು ವಿವಿಧ ಸಂಘಟನೆಗಳು ಕೂಡಾ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಕೆ.ಎಂ.ಎಫ್.ಸಿ. ಲೋಡ್ ಮತ್ತು ಅನ್‍ಲೋಡ್ ಹಮಾಲರ ಸಂಘದ ಒಟ್ಟಿಗೆ ಕಳ್ಳಂಬೆಳ್ಳ ಕೆರೆಗೆ ತೆರಳಿದ ಪ್ರತಿಭಟನಾಕಾರರು ಅನುಮೋದಿತ ಎಲ್ಲಾ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.

     ಸದ್ಯದ ಪರಿಸ್ಥಿತಿಯಲ್ಲಿ ಮದಲೂರು ಕೆರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀರು ಹರಿಸುವಂತಹ ವಾತಾವರಣ ಕಾಣದ ಪರಿಣಾಮ ಭಾನುವಾರ ಬೆಳಿಗ್ಗೆ ಹೋರಾಟಗಾರರು ಕಳ್ಳಂಬೆಳ್ಳ ಕೆರೆಗೆ ತೆರಳಿ ಕೆರೆಯೊಳಗೆ ಇಳಿದು ತಮ್ಮ ಪ್ರತಿಭಟನೆಯ ಕಿಚ್ಚನ್ನು ತೋರಿಸಿದರು.

     ತಾ.ಹೇಮಾವತಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಬಿ.ರಮೇಶ್ ಮಾತನಾಡಿ ಪ್ರತಿಭಟನೆಗೆ ಕೂತವರ ಸಂಖ್ಯೆ ಕಡಿಮೆ ಇರಬಹುದು, ಆದರೆ ಈ ಹೋರಾಟದ ಕಿಚ್ಚು ಮಾತ್ರಾ ಕಡಿಮೆಯಾಗುವುದಿಲ್ಲ. ಮದಲೂರು ಕೆರೆಗೆ ನೀರು ಹರಿಸುವವರೆಗೂ ಈ ಹೋರಾಟ ನಡೆಯುತ್ತದೆ ಎಂದರು.ರೈತ ಸಂಘದ ಪರಮಶಿವಯ್ಯ, ತಾರೇಗೌಡ, ಆರ್.ವಿ.ಪುಟ್ಟಕಾಮಣ್ಣ, ಕೆ.ಎಂ,ಎಫ್.ಸಿ. ಲೋಡ್ ಮತ್ತು ಅನ್‍ಲೋಡ್ ಹಮಾಲರ ಸಂಘದ ಅಧ್ಯಕ್ಷ ಕೃಷ್ಣ, ಲಕ್ಷ್ಮಣ, ರಂಗನಾಥ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link