ಉನ್ನಾವೋ ರೇಪ್ ಕೇಸ್ : ಮಾಜಿ ಬಿಜೆಪಿ ಶಾಸಕನೇ ಅಪರಾಧಿ!!

ನವದೆಹಲಿ :

     ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉನ್ನಾವೋ ಯುವತಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ  ಪ್ರಮುಖ ಆರೋಪಿ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸೆಂಗರ್  ರನ್ನು ಅಪರಾಧಿ ಎಂದು ದೆಹಲಿ ಹೈಕೋರ್ಟ್ ಘೋಷಿಸಿದೆ.

      ಉತ್ತರ ಪ್ರದೇಶದ ಉನ್ನಾವೋ ಯುವತಿ ಮೇಲೆ 2017ರಲ್ಲಿ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸೆಂಗಾರ್ ಜೊತೆಗೆ ಇನ್ನೂ ನಾಲ್ವರ ಹೆಸರು ಕೇಳಿಬಂದಿತ್ತು. ಆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು. ಸಿಬಿಐ ಮತ್ತು ಆರೋಪಿ ಪರ ವಕೀಲರಿಂದ ವಾದ ಆಲಿಸಿದ ನಂತರ ಡಿ. 16ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮ ತಿಳಿಸಿದ್ದರು.

      ಸಿಬಿಐ ಮತ್ತು ಪ್ರಕರಣದ ಆರೋಪಿಗಳ ಅಂತಿಮ ವಾದಗಳ ವಿಚಾರಣೆಯ ಮುಕ್ತಾಯದ ನಂತರ ಇಂದು ನ್ಯಾಯಾಧೀಶ ಶರ್ಮಾ ಈ ತೀರ್ಪನ್ನು ನೀಡಿದ್ದಾರೆ.

     ಇದೀಗ ಕುಲದೀಪ್ ವಿರುದ್ಧದ ಆರೋಪ ಸಾಬೀತಾಗಿದ್ದು, ಡಿಸೆಂಬರ್ 19ರಂದು ಗುರುವಾರ ಬಿಜೆಪಿಯ ಉಚ್ಛಾಟಿತ ಶಾಸಕನಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಎಂದು ಸಿಬಿಐ ಹೆಸರಿಸಿದ್ದ ಶಶಿ ಸಿಂಗ್ ವಿರುದ್ಧದ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಆತನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

      ಉತ್ತರ ಪ್ರದೇಶದ ಬಂಗೆರ್ಮಾವ್​ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ 4 ಬಾರಿ ಶಾಸಕರಾಗಿರುವ ಕುಲದೀಪ್ ಸೆಂಗಾರ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದ್ದರಿಂದ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿತ್ತು.

Recent Articles

spot_img

Related Stories

Share via
Copy link