ಬೆಂಗಳೂರು:
ುದ್ಯೋಗ ಮೀಸಲಾತಿ ಕುರಿತಂತೆ ಡಾ. ಸರೋಜಿನಿ ಮಹಿಷಿ ಆಯೋಗ ನೀಡಿರುವ ವರದಿಯಂತೆ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ 80 ಉದ್ಯೋಗ ಮೀಸಲು ಕಡ್ಡಾಯವಾಗಿದೆ. ಆದರೆ, ಎ ಮತ್ತು ಬಿ ದರ್ಜೆಯಲ್ಲಿ ಇದನ್ನು ಕಡ್ಡಾಯ ಮಾಡುವುದು ಅಷ್ಟು ಸುಲಭದ ವಿಷಯವಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ
ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ತರಲು ಸರ್ಕಾರ ಯೋಜಿಸುತ್ತಿದೆ, ಅಲ್ಲಿ ಪದವೀಧರರಿಗೆ ಅಥವಾ ಪದವಿ ಪಡೆಯಲು ಬಯಸುವವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುವುದು. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸೂಕ್ತವಾದ ಉದ್ಯೋಗವನ್ನು ಪಡೆಯಲು ಸಹಾಯ ಮಾಡಲು ಕೌಶಲ್ಯ ಅಭಿವೃದ್ಧಿ ನೀಡಲು ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ತಿಳಿಸಿದರು.
ರಾಜ್ಯವನ್ನು ಶಿಕ್ಷಣ ತಾಣವನ್ನಾಗಿ ಮಾಡುವ ಯೋಜನೆಗಳಿವೆ ಎಂದು ತಿಳಿಸಿದ ಅವರು, ಈ ಮೊದಲು ನಾವು ನೆರೆಯ ರಾಜ್ಯಗಳಿಂದ ಮತ್ತು ಉತ್ತರ ಭಾರತದಿಂದಲೂ ಜನರನ್ನು ಪಡೆಯುತ್ತಿದ್ದೆವು. ಈಗ, ಸಂಖ್ಯೆ ಕಡಿಮೆಯಾಗಿದೆ. ಉದ್ಯೋಗ ಪಡೆಯಲು ತರಬೇತಿ ಪಡೆಯಬಹುದಾದ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುವ ಮೂಲಕ, ಹೊರಗಿನಿಂದಲೂ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸಲು ಬಯಸುವುದಾಗಿ ಅವರು ತಿಳಿಸಿದರು.