ಕುಖ್ಯಾತ ರೌಡಿ ಭರತ್ ಬಂಧನ..!

ಬೆಂಗಳೂರು

    ಸಂಪಿಗೆಹಳ್ಳಿಯ ಬಾರೊಂದರ ಬಳಿ ಕಳೆದ ಸೋಮವಾರ ರಾತ್ರಿ ಕುಖ್ಯಾತ ರೌಡಿ ಭರತ್ ಅಲಿಯಾಸ್ ಕೋಗಿಲು ಭರತ್(28)ನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಂಪಿಗೆಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಸಂಪಿಗೆಹಳ್ಳಿಯ ಅಗ್ರಹಾರ ಬಡಾವಣೆಯ ಚೌಡೇಶ್ವರಿ ಬಾರ್ ಬಳಿಯಿಂದ ಸೋಮವಾರ ರಾತ್ರಿ 9.30ರ ವೇಳೆ ಭರತ್‌ನನ್ನು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

   ಬಂಧಿತ ಇಬ್ಬರು ಸೇರಿ ನಾಲ್ವರು ಕೋಗಿಲು ಭರತ್‌ನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಮುಖ ತಲೆ ಹೊಟ್ಟೆ ದೇಹದ ಇತರ ಭಾಗಗಳಿಗೆ ಮಚ್ಚು ಲಾಂಗಿನಿಂದ ಹೊಡೆದು ಕೊಲೆಗೈದು ಪರಾರಿಯಾಗಿದ್ದು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಯಲಹಂಕ ಇನ್ನಿತರ ಭಾಗಗಳಲ್ಲಿ ಪ್ರಾಭಲ್ಯ ಸಾಧಿಸಲು ಕೊಲೆಯತ್ನ,ಸುಲಿಗೆ ಬೆದರಿಕೆ ಇನ್ನಿತರ ಗಂಭೀರ ಪ್ರಕರಣಗಳು ದಾಖಲಾಗಿದ್ದು ಯಲಹಂಕ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ರೌಡಿ ಭರತ್‌ನನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಇನ್ನಿಬ್ಬರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link