ಕಾಂಗ್ರೆಸ್ ಪಕ್ಷಕ್ಕೆ ಶಾಂತಿ ಬೇಕಿಲ್ಲ:ಕೆ.ಎಸ್.ಈಶ್ವರಪ್ಪ

ಹಾವೇರಿ :

     ಸಿದ್ದರಾಮಯ್ಯ ಅವರು ಮಂಗಳೂರಿಗೆ ಸಾಂತ್ವನ ಹೇಳಲು ಹೊರಟಿಲ್ಲ, ಬೆಂಕಿ ಹಚ್ಚಲು ಹೊರಟಿದ್ದಾರೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ದೂರಿದರು.

        ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಶಾಂತಿ ಬೇಕಾಗಿಲ್ಲ. ಸಿದ್ದರಾಮಯ್ಯ ಇರಬಹುದು, ಖಾದರ ಇರಬಹುದು ಬೆಂಕಿ ಹಚ್ಚಬೇಕು ಎಂಬ ಮಾತುಗಳನ್ನು ಆಡುತ್ತಾರೆ. ಗಲಭೆ ಮಾಡಬೇಕು ಎಂದು ಕಾಂಗ್ರೆಸ್ ತಿರ್ಮಾನ ಮಾಡಿದಂತೆ ಕಾಣುತ್ತಿದೆ. ಈ ಹಿಂದೆ ಬ್ರಿಟಿಷರು ಭಾರತವನ್ನು ಒಡೆದು ಹೋಳು ಮಾಡಿದರು. ಅವರಂತೆ ಇಂದಿನ ಕಾಂಗ್ರೆಸ್ ಹಿಂದೂ-ಮುಸ್ಲಿಂ ಒಂದಾಗೊದನ್ನು ಸಹಿಸುತ್ತಿಲ್ಲ ಎಂದು ಆರೋಪಿಸಿದರು.

       ಪೌರತ್ವ ತಿದ್ದುಪಡಿ ಕಾಯಿದೆ, ಯಾವುದೇ ಧರ್ಮದ ಪರವಾಗಿಲ್ಲ. ಇಡಿ ದೇಶವನ್ನು ಒಂದು ಮಾಡುತ್ತದೆ. ಈ ದೇಶದಿಂದ ಯಾರನ್ನು ಹೊರಗೆ ಹಾಕಲ್ಲ. ಇದರಿಂದ ಮುಸ್ಲಿಂರಿಗೆ ತೊಂದರೆ ಆಗಲ್ಲ ಎನ್ನುವುದನ್ನು ದೆಹಲಿ ಜಮಾ ಮಸೀದಿಯ ಮೌಲ್ವಿಗಳು ಹೇಳಿದ್ದಾರೆ. ಕಾಂಗ್ರೇಸ ಪಕ್ಷದವರು ಇದನ್ನು ದುರುಪಯೋಗ ಪಡಿಸಿಕೊಂಡು ಗಲಭೆ ಸೃಷ್ಠಿಸಲು ಮುಂದಾಗಿದ್ದಾರೆ. ಪೌರತ್ವ ತಿದ್ದುಪಡಿ ಆಗಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಹೇಳಿದ್ದರು. ಆ ಕಾರಣದಿಂದ ದೇಶದಲ್ಲಿ ಹಲವು ಅಭಿವೃದ್ಧಿಗಳು ಕಾಣುತ್ತಿವೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ವಿನಾಕಾರಣ ಗೊಂದಲು ಸೃಷ್ಟಿಸಲು ಮುಂದಾಗಿದೆ ಎಂದು ದೂರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link