ಕ್ರೀಡೆಯಲ್ಲೂ ಜಾತಿ ವ್ಯವಸ್ಥೆ ತರವಲ್ಲ;ತಿಪ್ಪಾರೆಡ್ಡಿ

ಚಿತ್ರದುರ್ಗ

     ದಿನನಿತ್ಯ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರಿಗೆ ಕ್ರೀಡಾ ಕೂಟಗಳನ್ನು ಹಮ್ಮಿಕೊಳ್ಳುವು ದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಿರಲು ಸಹಕಾರಿಯಾಗಲಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಚಿತ್ರದುರ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು

    ಕ್ರೀಡೆಗಳಲ್ಲಿ ಮೊದಲು ಜಾತಿ ವ್ಯವಸ್ಥೆ ಇರಲಿಲ್ಲ. ಆದರೆ ಇಂದು ಎಲ್ಲಾ ಕಡೆ ಜಾತಿಪದ್ದತಿ ತಾಂಡವವಾಡುತ್ತಿದೆ. ಕ್ರೀಡೆಗಳಲ್ಲಿ ಜಾತಿ ಪದ್ದತಿ ಕೈ ಬಿಟ್ಟು ಕ್ರೀಡಾ ಮನೋಭಾವದಿಂದ ಆಟ ಆಡಬೇಕು ಎಂದು ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದರು.

    ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದರೂ ಕೂಡ ಅಥ್ಲೆಟಿಕ್ಸ್ ನಲ್ಲಿ ಒಂದು ಬಂಗಾರದ ಪದಕ ಪಡೆಯಲು ಸಾಧ್ಯವಾಗಿಲ್ಲ ಇದು ನಮ ದೌರ್ಭಾಗ್ಯ ಎಂದು.ತಿಪ್ಪಾರೆಡ್ಡಿ ಕಳವಳ ವ್ಯಕ್ತಪಡಿಸಿ ಬ್ರಿಟಿಷರು ಬಿಟ್ಟು ಹೋದ ಕ್ರೀಕೆಟ್ ಆಟಕ್ಕೆ ದೇಶದಲ್ಲಿ ಎಲ್ಲಾರೂ ಒತ್ತು ಕೊಡುತ್ತಿದ್ದಾರೆ. ಇದರಿಂದ ದೇಶಿ ಕ್ರೀಡೆಗಳನ್ನು ಮರೆಯಲಾಗುತ್ತಿದೆ ಎಂದು ವಿಷಾಧಿಸಿದರು.ಜಿ.ಪಂ., ತಾ.ಪಂ. ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಕ್ರೀಡಾಕೂಟಕ್ಕೆ ನೀಡಲೆಂದೇ 2% ಅನುಧಾನ ಮಿಸಲಿರುತ್ತದೆ ಅದರಲ್ಲಿ ಕ್ರೀಡಾಕೂಟಕ್ಕೆ ಅಗತ್ಯವಾದ ಟ್ರ್ಯಾಕ್ ಶೂಟ್ ಪಡೆದುಕೊಳ್ಳಿ ಎಂದು ತಿಳಿಸಿದರು.

    ಪ್ರಸ್ತಾವಿಕವಾಗಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್ ಸ್ಪರ್ಧಾತ್ಮಕ ದೃಷ್ಟಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಯಾವುದೇ ಗೊಂದಲ ಬೇಡ. ನೌಕರರು ಸದಾ ಸಾರ್ವಜನಿಕ ಸೇವೆಯಲ್ಲಿ ಇರುತ್ತಾರೆ. ಇದರಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವುದು ಸಹಜ. ಇದರಿಂದ ಹೊರಬಂದು ಮಾನಸಿಕ ಹಾಗೂ ದೈಹಿಕವಾಗಿ ಸದೃಡರಾಗಿರಬೇಕು ಎಂಬ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

   2022 ಕ್ಕೆ ಹೊಸ ವೇತನ ಆಯೋಗ ತಯಾರಾಗುತ್ತದೆ ಆಗ ನಮ್ಮ ವೇತನ ಹೆಚ್ವಳ ಆಗುತ್ತದೆ ಎಂದ ಅವರು ಎನ್ ಪಿಎಸ್ ಪದ್ದತಿಯಿಂದ ನೌಕರರಿಗೆ ತೊಂದರೆಯಾಗಲಿದ್ದು, ಇದನ್ನು ತೆಗೆದುಹಾಕುವ ಕುರಿತು ಸರ್ಕಾರಕ್ಕೆ ಒತ್ತಡ ಹಾಕಲಾಗಿದೆ. ಈ ಬಗ್ಗೆ ಸಮಿತಿಯೊಂದು ರಚನೆಯಾಗಿದ್ದು ಶೀಘ್ರವೇ ತೆಗೆಯುವ ಭರವಸೆ ಇದೆ ಎಂದು ಹೇಳಿದರು.

   ಸಾರ್ವಜನಿಕರ ಕೆಲಸಗಳಿಗೆ ಅನುಗುಣವಾಗಿ ಕಚೇರಿಗಳಲ್ಲಿ ನೌಕರರು ಇಲ್ಲ. ಇದರಿಂದ ಇಬ್ಬರು ವ್ಯಕ್ತಿಗಳು ಮಾಡುವ ಕೆಲಸವನ್ನು ಒಬ್ಬರೇ ಮಾಡುತ್ತಿದ್ದು ಇದರಂದು ನೌಕರರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಸರ್ಕಾರ ಶೀಘ್ರವೇ ಖಾಲಿ ಇರುವ ಹುದ್ದೆಗಳಿಗೆ ನೌಕರರನ್ನು ನೇಮಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಧಾನ ಪರೀಷತ್ ಸದಸ್ಯೆ ಜಯ್ಯಮ್ಮ ಬಾಲರಾಜ್, ಜಿ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap