ಚಿತ್ರದುರ್ಗ
ಮಹಿಳೆಯರು, ಸಮತೋಲನ ಒಳ್ಳೆಯದು ಎಂಬ ತತ್ವವನ್ನು ಪಾಲಿಸಿದರೆ ಎಲ್ಲಾ ಕ್ಷೇತ್ರದಲ್ಲಿಯೂ ಹಸನ್ಮುಖಿಯಾಗಿರುತ್ತಾಳೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸತ್ಯಭಾಮ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಕೀಲರ ಸಂಘ, ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಚಿತ್ರದುರ್ಗದ ವಕೀಲರ ಭವನದಲ್ಲಿ ಏರ್ಪಡಿಸಲಾಗಿದೆ. ಕಾನೂನು ಅರಿವು-ನೆರವು ಕಾರ್ಯಕ್ರಮ ಭಾಗವಹಿಸಿ ಮಾತನಾಡಿದರು.
ಹೆಣ್ಣು ಮನೆಯ ಕೆಲಸದಿಂದ ಹಿಡಿದು, ಯುದ್ದ ವಿಮಾನದಲ್ಲೂ ಮಹಿಳೆಯರು ತಮ್ಮ ಪಾರಮ್ಯವನ್ನು ಮೆರೆದಿದ್ದಾರೆ, ಪುರುಷರಿಗಿಂತ ತಾವೇನು ಕಡಿಮೆ ಇಲ್ಲವೆಂಬತೆ ಉನ್ನತ ಹುದೆಗಳನ್ನು ಅಲಂಕರಿಸಿದ್ದಾರೆ, ಹೆಣ್ಣು ಎನ್ನುವ ಕಾರಣಕ್ಕೆ ಭ್ರೂಣ ಹತ್ಯೆ ಮಾಡದಿರಿ ಎಂದು ಮನವಿ ಮಾಡಿಪುರುಷರಿಗಿಂತ ಮಹಿಳೆಯ ಜೀವಿತಾವಧಿ ಹೆಚ್ಚಾಗಿರುತ್ತದೆ ಕಾರಣ ಸದಾ ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತಿರುತ್ತಾಳೆ ಎಂದರು.
ವೈಯಕ್ತಿಕ ಜೀವನದಲ್ಲಿ ಸಹೋದರ, ತಂದೆ ನೀಡಿದ ಸಹಕಾರದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಮಹಿಳೆಯರು ಪುರುಷ ವಿರೋಧಿಗಳಲ್ಲ. ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾರೆ ಎನ್ನುವುದು ಸಹಜ. ಆದರೆ ನನ್ನ ಜೀವನದಲ್ಲಿ ಯಶಸ್ವಿ ಹಿಂದೆ ಸಹೋದರರು, ತಂದೆ ಸೇರಿದಂತೆ ಇಡೀ ಕುಟುಂಬವೇ ಇತ್ತು ಇದೆ ಎಂದರು.
ಉದ್ಯೋಗಸ್ಥ ಮಹಿಳೆಯರು ಮನೆ ಮತ್ತು ಕಚೇರಿಯಲ್ಲಿ ಎರಡು ಕಡೆಗಳಲ್ಲಿ ಒತ್ತಡದಿಂದ ಕೆಲಸ ಮಾಡುತ್ತಾರೆ. ಆಗ ಪುರುಷರು ಮಹಿಳೆಗೆ ಸಹಾಯ ಮಾಡಬೇಕು. ಅದೇ ರೀತಿ ಮಹಿಳೆ ಉದ್ಯೋಗಸ್ಥರಾದಾಗ ಪುರುಷರು ಹೆಚ್ಚಿನ ಸಹಾಯ ಮಾಡಬೇಕು. ನಾನೇಕೆ ಮಾಡಲಿ ಎಂಬ ಭಾವನೆ ಅಥವಾ ಪ್ರತಿಷ್ಠೆ ಇಟ್ಟುಕೊಂಡರೆ ಸಂಸಾರ ಹಾಳಾಗುತ್ತದೆ. ಇದರ ಬದಲಿಗೆ ಹಿಂದಾಣಿಕೆ ಜೀವನ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿಷ್ಠೆ ಬಿಟ್ಟು ಹೊಂದಾಣಿಕೆ ಜೀವನ ಮಾಡಿಕೊಂಡು ಸಾಗಿದರೆ ಮಾತ್ರ ಸುಖಸಂಸಾರ ಸಾಗಿಸಲು ಸಾಧ್ಯ. ಪುರುಷರು ಮತ್ತು ಮಹಿಳೆಯರು ಮೇಲುಕೀಳು ಎಂಬ ಭಾವನೆ ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿಲಿಂಗ ಅನುಪಾತದಲ್ಲಿ ಭಾರಿ ವ್ಯತ್ಯಾಸವಾಗುತ್ತಿದೆ. 1ಸಾವಿರ ಗಂಡಿಗೆ 924 ಮಹಿಳೆಯರಿದ್ದಾರೆ. ಇದು ಅಪಾಯ. ಹೆಣ್ಣು ಭ್ರೂಣ ಹತ್ಯೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇಲ್ಲಿ ಅನಕ್ಷರಸ್ಥರಿಗಿಂತ ಅಕ್ಷರು ಹೆಚ್ಚಿನ ಪ್ರಮಾಣದಲ್ಲಿ ತಪ್ಪುಗಳನ್ನು ಮಾಡುತ್ತಿದ್ಧಾರೆ ಎಂದು ವಿಷಾಧಿಸಿದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ ಪುರುಷರಿಗಿಂತ ಮಹಿಳೆಯರಲ್ಲಿ ತಾಳ್ಮೆ ಹೆಚ್ಚು, ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ಹೆಣ್ಣಲ್ಲಿದೆ, ಮನೆಯಲ್ಲಿ ಹೆಣ್ಣಿದ್ದರೆ ಆ ಮನೆಗೊಂದು ಶೋಭೆ ತನ್ನ ಕೌಶಲ್ಯದಿಂದ ಮನೆಯನ್ನು ಹೇಗೆ ಅಲಂಕರಿಸಿಟ್ಟುಕೊಳ್ಳಬೇಕೆನ್ನುವುದು ಹೆಣ್ಣಿಗೆ ತಿಳಿದಿರುತ್ತದೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ, ಅದನ್ನು ಸದುಪಯೋಗ ಪಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಮಹಿಳೆಯರಿಗೆ ಹತ್ತಾರು ಕೆಲಸವನ್ನು ಕೊಟ್ಟರು ಭಾರ ಎನ್ನುವುದಿಲ್ಲ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾಳೆ. ಏಕೆಂದರೆ ಆಕೆಯಲ್ಲಿ ಅಷ್ಟೊಂದು ಶಕ್ತಿ ಇದೆ. ಆದರೆ ಪುರುಷರಿಗೆ ಒಂದೆರೆಡು ಕೆಲಸ ನೀಡಿದರೆ ಸಾಕು ಒತ್ತಡವಾಗುತ್ತದೆ. ಮಹಿಳೆಯರಿಲ್ಲದೆ ಮನೆಯ ವ್ಯವಸ್ಥೆ ಊಹಿಸಿಕೊಳ್ಳಲು ಅಸಾಧ್ಯ. ಪುರುಷರು ಎಷ್ಟೇ ಚೆನ್ನಾಗಿ ಇಟ್ಟುಕೊಂಡರೂ ಆ ಮನೆಯನ್ನು ನೋಡುವುದಕ್ಕೆ ಆಗುವುದಿಲ್ಲ. ಮಹಿಳೆ ಇರುವ ಮನೆ ನಂದಗೋಕುಲ ಎಂದು ಬಣ್ಣಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಉದ್ಘಾಟಿ¸ಸಿದರು. ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು ನ್ಯಾಯಾಧೀಶರುಗಳಾದ ಬಸವರಾಜ್ ಎಸ್.ಚೇಗರೆಡ್ಡಿ, ಡಿ.ವೀರಣ್ಣ, ಟಿ.ಶಿವಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಕೆ.ರಾಧ, ಭಾಗವಹಿಸಿದ್ದರು..
ವಕೀಲರಾದ ಡಿ.ಕೆ.ಶೀಲಾ ಅವರಿಂದ ಮಹಿಳೆಯರ ಹಕ್ಕು ಮತ್ತು ಕರ್ತವ್ಯದ ಬಗ್ಗೆ, ವಕೀಲ ಕೆ.ಎಸ್.ವಿಜಯ್ ಅವರಿಂದ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆ ಕಾಯ್ದೆ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
