ಕ್ಯಾಬ್ ಚಾಲಕನನ್ನು ಕಾಪಾಡಿ ರಿಯಲ್ ಹೀರೋ ಆದ ರಘುಭಟ್

ಬೆಂಗಳೂರು

    ಹಲಸೂರು ಕೆರೆ ಬಳಿ ಗುರುವಾರ ಮಧ್ಯರಾತ್ರಿ ಕ್ಯಾಬ್ ಚಾಲಕನನ್ನು ಬೆದರಿಸಿ ಸುಲಿಗೆ ಮಾಡಿ ಬೈಕ್‍ನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬೀಳಿಸಿ ಹಿಡಿಯುವಲ್ಲಿ ಸ್ಯಾಂಡಲ್‍ವುಡ್ ನಟ ರಘುಭಟ್ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.

     ಸ್ಯಾಂಡಲ್‍ವುಡ್ ನಟ ರಘುಭಟ್ ಬೆನ್ನಟ್ಟಿ ಬೀಳಿಸಿದ ಶಿವಾಜಿ ನಗರದ ಮೊಹೀನ್ (20) ತಲೆಗೆ ಗಂಭೀರವಾಗಿ ಗಾಯಗೊಂಡು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಮತ್ತೊಬ್ಬ ಆರೋಪಿ ಲಿಂಗರಾಜಪುರದ ಅಬ್ದುಲ್ (27) ಸಣ್ಣ-ಪುಟ್ಟ ಗಾಯಗಳಾಗಿದ್ದು, ಆತನನ್ನು ಹಲಸೂರು ಪೆÇಲೀಸರು ಬಂಧಿಸಿ ಆರೋಪಿಗಳಿಂದ 500 ನಗದು, ಮೊಬೈಲ್ ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ

     ಹಲಸೂರು ಕೆರೆ ಬಳಿ ಮಧ್ಯರಾತ್ರಿ 2ರ ವೇಳೆ ರಘುಭಟ್ ಕಾರಿನಲ್ಲಿ ಹೋಗುತ್ತಿದ್ದಾಗ ಕ್ಯಾಬ್ ಚಾಲಕ ರಘುನಾಥ್‍ನನ್ನು ಬೈಕ್‍ನಲ್ಲಿ ಬಂದ ಆರೋಪಿಗಳಾದ ಅಬ್ದುಲ್ ಹಾಗೂ ಮೊಹೀನ್ ಅಡ್ಡಗಟ್ಟಿ ಬೆದರಿಸಿ ಮೊಬೈಲ್ ಹಾಗೂ 500 ರೂ.ಗಳನ್ನು ಕಸಿದು ಪರಾರಿಯಾಗುತ್ತಿರುವುದು ಕಂಡು ಬಂದಿತು.

    ರಕ್ಷಣೆಗಾಗಿ ರಘುನಾಥ್ ಕೂಗಿಕೊಂಡಾಗ ತಡಮಾಡದೆ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬೆನ್ನಟ್ಟಿದ ರಘುಭಟ್ ಸುಮಾರು 2 ಕಿ.ಮೀವರೆಗೆ ಚೇಸ್ ಮಾಡಿದ್ದಾರೆ.ಬೆನ್ನಟ್ಟಿದ ಕಾರು ತಪ್ಪಿಸಿಕೊಳ್ಳಲು ಹೋಗಿ ಮೊಹೀನ್, ಬೈಕ್ ಅಡ್ಡದಿಡ್ಡಿ ಓಡಿಸಿ ಬಿದ್ದಿದ್ದಾನೆ. ಹಿಂದೆ ಕುಳಿತಿದ್ದ ಅಬ್ದುಲ್ ಕೂಡ ಕೆಳಗೆ ಬಿದ್ದಿದ್ದು, ಇಬ್ಬರನ್ನು ಹಿಡಿದು ಹಲಸೂರು ಪೆÇಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.ನಟ ರಘುಭಟ್, ಅನ್ವೇಷಿ, ಎಂಎಂಸಿಹೆಚ್ ಹಾಗೂ ಲವ್‍ಯು ಟೂ ನಾಯಕನಾಗಿ ಅಭಿನಯಿಸಿದ್ದಾರೆ.

 

Recent Articles

spot_img

Related Stories

Share via
Copy link