ಹಿರಿಯೂರು : ನಕಲಿ ಎಸಿಬಿ ಅಧಿಕಾರಿಗಳ ಬಂಧನ..!

ಹಿರಿಯೂರು

    ಎಸಿಬಿ ಅಧಿಕಾರಿಗಳು ಎಂದು ದೂರವಾಣಿ ಮೂಲಕ ಹೆದರಿಸಿ ಹಿರಿಯೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ 1,24,000 ರೂಪಾಯಿ ವಂಚಿಸಿದ್ದ ಆರೋಪದ ಮೇಲೆ ಐವರು ಆರೋಪಗಳನ್ನು ಅರೆಸ್ಟ್ ಮಾಡಲಾಗಿದೆ.

    ಹಾಸನ ಮೂಲದ ರಜನಿಕಾಂತ್ , ಚಿದಾನಂದ, ತಮಿಳುನಾಡು ಮೂಲದ ಅರುಳ್ ರೇಗನ್, ಹೇದರ್ ಹಾಗೂ ಚಿಕ್ಕೋಡಿ ತಾಲ್ಲೂಕಿನ ಮುರಿಗೆಪ್ಪ ನಿಂಗಪ್ಪ ಕುಂಬಾರ ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ಮೊಬೈಲ್‍ಗಳು, ಸಿಮ್‍ಗಳು, ಒಂದು ಮೋಟಾರ್ ಸೈಕಲ್, ಎರಡು ಚಿನ್ನದ ಉಂಗುರ ಮತ್ತು 52,000/- ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

      ದಿನಾಂಕ.07.12.2019 ರಂದು ಮಧ್ಯಾಹ್ನ ಹಿರಿಯೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆದಎಲ್.ಟಿ. ಶ್ರೀರಂಗಪ್ಪ ಅವರಿಗೆ ಆರೋಪಿಗಳು ದೂರವಾಣಿ ಕರೆ ಮಾಡಿ ಚಿತ್ರದುರ್ಗ ಎಸಿಬಿ ಇಲಾಖೆಯ ಡಿವೈಎಸ್‍ಪಿ ಅಂತ ಪರಿಚಯ ಮಾಡಿಕೊಂಡಿದ್ದು, ನಿಮ್ಮ ಮೇಲೆ ಬೆಂಗಳೂರು ಎಸಿಬಿ ಕೇಂದ್ರ ಕಚೇರಿಯಲ್ಲಿ ದೂರು ದಾಖಲಾಗಿದೆ ಹೆದರಿಸಿ ಅವರಿಂದ 1,24,000/- ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಿಕೊಂಡು ವಂಚಿಸಿದ್ದಾರೆ.

      ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯೂರು ವೃತ್ತ ನಿರೀಕ್ಷಕ ಚೆನ್ನಗೌಡ.ಆರ್.ಜಿ. , ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಪರಮೇಶ್.ಡಿ.ಜಿ., ಐಮಂಗಲ ಪೊಲೀಸ್ ಠಾಣೆಯ ಪಿಎಸ್‍ಐ ಮಂಜುನಾಥ ಮತ್ತು ಸಿಬ್ಬಂದಿ ಎಎಸ್‍ಐ ಸಿರಾಜುದ್ದೀನ್, ಹೆಚ್.ಸಿ. ದೇವೇಂದ್ರಪ್ಪ, ಹೆಚ್.ಸಿ.ಮಾಲತೇಶ್, ಹೆಚ್.ಸಿ.ರಾಮಕೃಷ್ಣನ್, ಪಿ.ಸಿ.ಹನೀಫ್ ಹಡಗಲಿ, ಎಪಿಸಿ ರಾಘವೇಂದ್ರ ಅವರನ್ನು ಒಳಗೊಂಡ ತಂಡ ರಚಿಸಿ ಆರೋಪಿಗಳ ಪತ್ತೆ ನಿಯೋಜಿಸಲಾಗಿತ್ತು.ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಚಿತ್ರದುರ್ಗ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap