ಕಾತ್ರಾಳ್ ಕೆರೆಗೂ ಭದ್ರಾ ನೀರು ಹರಿಸಲು ಆಗ್ರಹ

ಚಿತ್ರದುರ್ಗ

    ಕೆ.ಸಿ.ರೆಡ್ಡಿ ವರದಿಯಂತೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಬೆಳಗಟ್ಟದಿಂದ ಕಾತ್ರಾಳ್ ಕರೆ ಸೇರಿದಂತೆ ಇತರೆ ಕರೆಗಳಿಗೆ ನೀರು ಹರಿಸುವಂತೆ ಮಾಡಬೇಕು ಯಾವುದೇ ಕಾರಣಕ್ಕೂ ಮಾರ್ಗವನ್ನು ಬದಲಾವಣೆ ಮಾಡಬಾರದೆಂದು ಆಗ್ರಹಿಸಿ ರೈತ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

     ಚಿತ್ರದುರ್ಗ ನಗರದಲ್ಲಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚಿತ್ರದುರ್ಗ ಜಿಲ್ಲೆಗೆ ಅಪ್ಪರ್ ಭದ್ರಾ ಯೋಜನೆ ಜಾರಿಯಾಗುತ್ತಿದೆ, ಪಕ್ಕದ ತಾಲ್ಲೂಕಾದ ಜಗಳೂರಿಗೂ ಸಹಾ ಇದೇ ನೀರು ಹರಿದು ಹೋಗುತ್ತದೆ ಆದರೆ ಅಲ್ಲಿನ ರೈತರು ಮತ್ತು ಹೋರಾಟಗಾರರು ಭದ್ರಾದ ಮಾರ್ಗವನ್ನು ಬದಲಾಯಿಸುವಂತೆ ಸರ್ಕಾರದ ಮೇಲೆ ಒತ್ತಡವನ್ನು ತಂದಿದ್ದಾರೆ, ಈ ರೀತಿ ಮಾಡುವುದರಿಂದ ನಮಗೆ ಆನ್ಯಾಯವಾಗಲಿದೆ ನಮ್ಮ ಕೆಲವು ಕೆರೆಗಳಿಗೆ ನೀರು ಬರುವುದಿಲ್ಲ ಆದ್ದರಿಂದ ಯಾವುದೇ ಕಾರಣದಿಂದ ಮಾರ್ಗವನ್ನು ಬದಲಾಯಿಸಬಾರದು ಈ ಹಿಂದೆ ಇದ್ದ ಕೆಸಿರೆಡ್ಡಿಯವರ ವರದಿಯಂತೆ ನೀರು ಹರಿಯಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

     ಈ ಹಿಂದೆ ಚಿತ್ರದುರ್ಗ ತಾಲ್ಲೂಕಿನ ಕಾತ್ರಾಳ್ ಕರೆ, ಮುದ್ದಾಪುರ ಹಾಗೂ ಯಳಗೋಡಿನ ಕೆರೆಗಳನ್ನು ಭರ್ತಿ ಮಾಡಿ ನಂತರ ಜಗಳೂರಿಗೆ ಅಪ್ಪರ್ ಭದ್ರಾ ಹರಿಯುತ್ತಿತ್ತು ಆದರೆ ಜಗಲೂರಿನವರು ಈ ಮಾರ್ಗದ ಬದಲು ಮಾಡಲು ಒತ್ತಾಯಿಸಿದ್ದು ಬೆಳಗಟ್ಟ ಗ್ರಾಮದಿಂದ ರಾ,ಹೆ.13ರ ಮಾರ್ಗವಾಗಿ ಜಗಲೂರಿಗೆ ತೆಗೆದುಕೊಂಡು ಹೋಗುವಂತೆ ಆಗ್ರಹಿಸಿದ್ದಾರೆ, ಈ ರೀತಿಯಾದರೆ ನಮ್ಮ ಕೆರೆಗಳಿಗೆ ನೀರು ಬರುವುದಿಲ್ಲ ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಮಾರ್ಗ ಬದಲಾವಣೆ ಆಗಬಾರದೆಂದು ಆಗ್ರಹಿಸಿದ್ದಾರೆ.

      ರೈತ ಸಂಘದ ಮುಖಂಡರಾದ ಕೆ.ಪಿ.ಭೂತಯ್ಯ, ರಾಜ್ಯ ಪ್ರಧಾನಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಸಿ.ಆರ್.ತಿಮ್ಮಣ್ಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಜಿ.ಸುರೇಶ್‍ಬಾಬು ಜಿಲ್ಲಾಸಂಚಾಲಕ ಧನಂಜಯ ಕೋಶಾಧ್ಯಕ್ಷ ತಿಮ್ಮಣ್ಣ ಮಹಮದ್ ಅಜ್ಮನ್ ಹಾಗೂ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link