ಪಣಜಿ:
ಮಹಾದಾಯಿ ಯೋಜನೆ ಕೈಗೆತ್ತಿಕೊಳ್ಳಲು ಪರಿಸರ ಅನುಮತಿ ಅವಶ್ಯಕತೆ ಇಲ್ಲಾ ಎಂದು ಡಿ.24ರಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಗೋವಾ ಸರ್ಕಾರ ತೀವ್ರವಾಗಿ ವಿರೋಧಿಸಿದೆ ಅಲ್ಲದ ಹೋರಾಟ ಮಾಡುವ ಎಚ್ಚರಿಕೆಯನ್ನು ರವಾನಿಸಲಾಗಿದೆ .
It was also decided to make a representation to the Hon'ble Prime Minister on Goa's stand about Mhadei and to protect the interest of Goa in the whole matter.
It is decided to keep all options before all forum open to defend the interest of Goa. 3/3
— CMO Goa (@goacm) December 27, 2019
ಮಹಾದಾಯಿ ವಿಚಾರ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧವೇ ಸಮರ ಸಾರುವ ಸುಳಿವನ್ನು ಗೋವಾ ಸರ್ಕಾರ ನೀಡಿದೆ, ಅಗತ್ಯ ಬಿದ್ದರೆ ಕೇಂದ್ರ ಪರಿಸರ ಸಚಿವಾಲಯದ ವಿರುದ್ಧ ತಿರುಗಿಬೀಳಲು ಸಿದ್ಧ ಎಂದು ಗೋವಾ ಸಿಎಂ ತಿಳಿಸಿದ್ದಾರೆ . ಮಹಾದಾಯಿ ನದಿ ನೀರು ತಿರುಗಿಸುವ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಹೀಗಾಗಿ ಗೋವಾ ಜನರು ಚಿಂತೆ ಪಡಬೇಕಿಲ್ಲ. ಅಗತ್ಯ ಬಿದ್ದರೆ, ಕೇಂದ್ರ ಪರಿಸರ ಸಚಿವಾಲಯದ ವಿರುದ್ಧವೂ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಶೀಘ್ರದಲ್ಲಿಯೇ ಪತ್ರ ಬರೆಯಲಾಗುವುದು ಎಂದಿದ್ದಾರೆ.ಇದೇ ವೇಳೆ ಮಹದಾಯಿ ವಿಚಾರ ಕುರಿತು ಚರ್ಚಿಸಲು ಒಂದು ದಿನದ ಅಧಿವೇಶನವನ್ನು ಕರೆಯಬೇಕೆಂದು ಪ್ರತಿಪಕ್ಷ ನಾಯಕ ದಿಗಂಬರ ಕಾಮತ್ ಹೇಳಿಕೆಗೆ ಕಿಡಿಕಾರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








