ರಿವಾಲ್ವಾರ್ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ ಸಿಸಿಬಿ..!

ಬೆಂಗಳೂರು

  ರೌಡಿಗಳು ಭೂಗತಪಾತಕಿಗಳು ದರೋಡೆಕೋರರಿಗೆ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದ ರಾಜ್ಯಗಳಿಂದ ಪಿಸ್ತೂಲ್ ರಿವಾಲ್ವರ್ ಗಳನ್ನು ಪಿಸ್ತೂಲ್ ರಿವಲ್ವಾರ್ ಸರಬರಾಜು ಮಾಡುತ್ತಿದ್ದ ಗ್ಯಾಂಗನ್ನು ಬಂಧಿಸುವಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಯಶಸ್ವಿಯಾಗಿದ್ದಾರೆ.

   ಹಾವೇರಿಯ ಅಸ್ಲಾಂ ಗುತ್ತಲ್, ಆಲಿಯಾಸ್ ಅಸ್ಲಾಂ (45) ಧರ್ಮಣ್ಣ ದೇವಲಪ್ಪ ಚೌಹಣ್ (38) ಮೈಸೂರಿನ ಜಾವೀದ್ ಖಾನ್ ಆಲಿಯಾಸ್ ಜಾವೀದ್ (39) ಹುಬ್ಬಳ್ಳಿಯ ರಾಯಣ್ಣ ಗೌಡ (27) ಬಿಸ್ಮಿಲ ನಗರದ ಸೈಯರ್ ರಿಜ್ವಾನ್ ಆಲೀಯಾಸ್ ಅಲಾ ಉದ್ದೀನ್ (39) ಮಾರತ್ ಹಳ್ಳಿಯ ರೋಹನ್ ಮಂಡಲ್ (27) ಬಂಧಿತಗ್ಯಾಂಗ್‌ನ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

  ಗ್ಯಾಂಗ್‌ಗೆ ಅಸ್ಲಾಂ ಗುತ್ತಲ್, ನಾಯಕನಾಗಿದ್ದು ಹಿಂದೆ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಭಾರತೀನಗರ, ಜೆ.ಜೆ.ನಗರ, ಡಿ.ಜೆ. ಹಳ್ಳಿ, ಬಂಟ್ವಾಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಾಲ್ಕು ಶಸ್ತ್ರಾಸ್ತ್ರ ಕಾಯ್ದೆ ಒಂದು ಕೊಲೆ ಯತ್ನ ಸೇರಿದಂತೆ ಎಂಟು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಬಂಧಿತರಿಂದ ಮೂರು ಪಿಸ್ತೂಲ್, ಒಂದು ರಿವಾಲ್ವರ್ ಎಂಟು ಜೀವಂತ ಮದ್ದು ಗುಂಡುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ

ರೈಲಿನಲ್ಲಿ ಸಾಗಾಟ

   ಆರೋಪಿ ಅಸ್ಲಾಂ ಮತ್ತೊಬ್ಬ ಆರೋಪಿ ಪಶ್ಚಿಮ ಬಂಗಾಳದ ನದಿಯ ಜಿಲ್ಲೆ ಮೂಲದ ರೋಹನ್ ಮಂಡಲ್ ಜೊತೆ ಬಿಹಾರ, ಪಶ್ಚಿಮ ಬಂಗಾಳ ಇನ್ನಿತರ ಕಡೆಗಳಿಗೆ ಹೋಗಿ ಪಿಸ್ತೂಲ್, ರಿವಾಲ್ವರ್‌ಗಳು ಜೀವಂತ ಗುಂಡುಗಳನ್ನು ಖರೀದಿಸಿ ರೈಲು ಇಲ್ಲವೆ ರಸ್ತೆ ಮಾರ್ಗವಾಗಿ ರಾಜ್ಯಕ್ಕೆ ಬಂದು ಗ್ಯಾಂಗದ ಜೊತೆ ಸೇರಿ ಮಾರಾಟ ಮಾಡುವುದು ತನಿಖೆಯಲ್ಲಿ ಪತ್ತೆಯಾಗಿದೆ.

  ಕಡಿಮೆ ಬೆಲೆಗೆ ತಂದ ಶಸ್ತ್ರಾಸ್ತ್ರಗಳನ್ನು ದರೋಡೆಕೋರರು, ಸುಲಿಗೆ ಕೋರರು, ರೌಡಿಗಳು ಇನ್ನಿತರ ದುರ್ಷ್ಕಮಿಗಳಿಗೆ 5 ರಿಂದ 10 ಸಾವಿರದವರೆಗೆ ಮಾರಾಟ ಮಾಡುತ್ತಿದ್ದ ಉತ್ತರ ಭಾರತದಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ ನಡೆಯುತ್ತಿದ್ದು ಅಲ್ಲಿ ಶಸ್ತ್ರಾಸ್ತ್ರ ಬಳಕೆಗೆ ಕಠಿಣ ಕ್ರಮ ಇಲ್ಲದ್ದರ ಲಾಭ ಪಡೆದು ಶಸ್ತ್ರಾಸ್ತ್ರಗಳನ್ನು ತಂದು ಮಾರಾಟ ಮಾಡುತ್ತಿದ್ದರು.

   ಕಾಟನ್ ಪೇಟೆಯ ಬಿನ್ನಿಮಿಲ್ ಮೈದಾನದ ಬಳಿ ಪಿಸ್ತೂಲ್ ರಿವಾಲ್ವರ್ ಇಟ್ಟುಕೊಂಡು ದರೋಡೆಗೆ ಸಂಚು ರೂಪಿಸಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಗ್ಯಾಂಗ್ ಅನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಜಾವೇದ್ ವಿರುದ್ಧ ಮೈಸೂರು, ಮಂಗಳೂರು, ಮಂಡ್ಯ,ಹಾಸನದಲ್ಲಿ ನಾಲ್ಕು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಒಂದು ಕೊಲೆ ಸೇರಿ 5 ಪ್ರಕರಣಗಳು ದಾಖಲಾಗಿದೆ.

ರೈಲ್ವೆಗೆ ಮನವಿ

   ಆರೋಪಿ ರೋಹನ್ ಮಂಡಲ್ ಅಪರಾಧ ಹಿನ್ನೆಲೆಯವನ್ನಾಗಿದ್ದು ಪಶ್ಚಿಮ ಬಂಗಾಳದಲ್ಲಿ ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಮಾಹಿತಿ ಪತ್ತೆಯಾಗಿದೆ. ಆರೋಪಿಗಳಿಗೆ ಶಸ್ತ್ರಾಸ್ತ್ರ ದೊರೆಯುತ್ತಿದ್ದ ರಾಜ್ಯಗಳಲ್ಲಿ ಕಠಿಣ ಕ್ರಮಗಳನ್ನು ಅನುಸರಿಸುವಂತೆ ಕೇಂದ್ರ ಸರ್ಕಾರದ ಸಂಬಂಧಿಸಿದ ತನಿಖಾ ಸಂಸ್ಥೆಗಳಿಗೆ ಮನವಿ ಮಾಡಲಾಗುವುದು ಎಂದರು.

    ಕಳ್ಳರು, ಸುಲಿಗೆಕೋರರನ್ನು ಪತ್ತೆ ಹಚ್ಚಿ ಹಿಡಿಯುವುದು ಸುಲಭ ಆದರೆ ಶಸ್ತ್ರಾಸ್ತ್ರ ಹೊಂದಿರುವ ಆರೋಪಿಗಳನ್ನು ಬಂಧಿಸುವಾಗ ಜೀವವನ್ನು ಪಣಕ್ಕಿಟ್ಟು ಕಾರ್ಯಾಚರಣೆ ನಡೆಸಬೇಕಾಗುತ್ತದೆ.ಅಂತಹ ಕೆಲಸವನ್ನು ಸಿಸಿಬಿ ಪೊಲೀಸರು ಮಾಡಿರುವುದು ಪ್ರಶಂಸನೀಯವಾಗಿದೆ ಎಂದು ತಿಳಿಸಿದರು.

ತಪಾಸಣೆ ಹೆಚ್ಚಳ

  ಬಂಧಿಸಿರುವ ಗ್ಯಾಂಗ್‌ಗೆ ಯೂಸೂಬ್ ಭಟ್ಕಳ್ ಇನ್ನಿತರ ಅಪರಾಧಿಗಳ ಜೊತೆ ನಂಟು ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿಮಾನಗಳಲ್ಲಿ ಕಠಿಣ ತಪಾಸಣೆ ಇರುವುದರಿಂದ ಆರೋಪಿಗಳು ಶಸ್ತ್ರಾಸ್ತ್ರ ತೆಗೆದುಕೊಂಡು ಬರಲು ರೈಲು ಹಾಗೂ ರಸ್ತೆ ಮಾರ್ಗವನ್ನು ಅನುಸರಿಸುತ್ತಿದ್ದರು ಎಂದರು.

    ರೈಲುಗಳಲ್ಲಿ ಶಸ್ತ್ರಾಸ್ತ್ರಗಳು ಮಾದಕ ವಸ್ತುಗಳನ್ನು ಸುಲಭವಾಗಿ ಸಾಗಿಸಲಾಗುತ್ತಿದೆ. ಇದನ್ನು ಕಡಿವಾಣ ಹಾಕಲು ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆಯನ್ನು ಹೆಚ್ಚಿಸುವಂತೆ ಪತ್ರ ಬರೆಯಲಾಗುವುದು. ರಸ್ತೆಗಳಲ್ಲೂ ವಾಹನ ತಪಾಸಣೆಯನ್ನು ಚುರುಕುಗೊಳಿಸಲಾಗುವುದು ಎಂದು ಅವರು ಹೇಳಿದರು.

     ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಕುಲದೀಪ್ ಕುಮಾರ್ ಜೈನ್, ರವಿಕುಮಾರ್ ಅವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link