ಬಳ್ಳಾರಿ
ಕೂಡ್ಲಿಗಿ ಪಟ್ಟಣದ ಸಾವ9ಜನಿಕ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಗಭಿ9ಣಿ ಮಹಿಳೆಯರಿಗೆ ಪ್ರತಿ ಗುರುವಾರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.ತಾಲೂಕಿನ ಪ್ರತಿಯೊಂದು ಗ್ರಾಮಗಳಿಂದ ನೂರಾರು ಗಭಿ9ಣಿ ಮಹಿಳೆಯರು ತಪಾಸಣೆಗೆಂದು ಸಾರ್ವಜನಿಕ ಆಸ್ಪತ್ರೆಗೆ ದಾವಿಸುತ್ತಿದ್ದಾರೆ.ಆದರೆ ಅವರಿಗೆ ಅಗತ್ಯ ಸೌಕಯ9ಗಳಿಲ್ಲ ಶೌಚಾಲಯವಿಲ್ಲ.ಶುದ್ಧಕುಡಿಯೋ ನೀರಿನ ವ್ಯವಸ್ಥೆ ಇಲ್ಲವಾಗಿದೆ.
ಇದರಿಂದಾಗಿ ಗರ್ಭಿಣಿ ಮಹಿಳೆಯರು ತೀರಾ ಪರದಾಡುವ ದುಸ್ಥಿತಿ ನಿಮಾ9ಣವಾಗಿದೆ.ಇದು ತಾಲೂಕು ವೈಧ್ಯಾಧಿಕಾರಿಗಳ ನಿಲ9ಕ್ಷ್ಯಕ್ಕೆ ನಿದಶ9ನವಾಗಿದೆ. ಎಂದು ಸಿಐಟಿಯು ಮುಖಂಡರು ಗುನ್ನಳ್ಳಿ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾರಣ ಜಿಲ್ಲಾ ಆರೋಗ್ಯಾಧಿಕಾರಿ ಶೀಘ್ರವೇ ಪರಿಶೀಲಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಗುನ್ನಳ್ಳಿ ರಾಘವೇಂದ್ರ ಆಗ್ರಹಿಸಿದ್ದಾರೆ.ತಪಾಸಣೆ ನಡೆಯುವ ಪ್ರತಿ ಗುರುವಾರದಂದು ಗರ್ಭಿಣಿ ಮಹಿಳೆಯರಿಗಾಗಿ ಪ್ರತ್ಯೇಕ ಕೌಂಟರ್ ಗಳ ವ್ಯವಸ್ಥೆಯಾಗಬೇಕಿದೆ.
ಗರ್ಭಿಣಿಯರಿಗೆ ಬಹುತೇಕ ಪರೀಕ್ಷೆಗಳನ್ನು ಹೊರಗಡೆ ಮಾಡಿಸಲು ಸೂಚಿಸಲಾಗುತ್ತಿದೆ ಎಂಬ ಆರೋಪವಿದೆ. ಔಷಧಿಗಳನ್ನು ಹೊರಗಡೆ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ, ಇದು ನಿಲ್ಲಬೇಕಿದೆ. ಗಭಿ9ಣಿಯರಿಗಾಗಿ ಕೂಡಲು ಸಾಕಷ್ಟು ಆಸನಗಳ ವ್ಯವಸ್ಥೆ ಕಲ್ಪಿಸಬೇಕು ಶುದ್ಧಕುಡಿಯೋ ನೀರು.ತಪಾಸಣೆಗೆ ಅಗತ್ಯ ಸಲಕರಣೆಗಳು ಅಗತ್ಯಮಹಿಳಾ ವೈಧ್ಯರು ಮತ್ತು ಹೆಚ್ಚಿನ ಸಿಬ್ಬಂಧಿಯ ಅಗತ್ಯವಿದೆ ಕಾರಣ ಆರೋಗ್ಯ ಸಚಿವರು ಕೂಡಲೇ ವ್ಯವಸ್ಥೆ ಸರಿಪಡಿಸಬೇಕಿದೆ. ಎಂದು ಗುನ್ನಳ್ಳಿ ರಾಘವೇಂದ್ರ ಅಭಿಪ್ರಾಯ. ನಿಲ9ಕ್ಷಿಸಿದ್ದಲ್ಲಿ ಕಾಮಿ9ಕ ಮುಖಂಡ ಹಾಗೂ ವಕೀಲರಾದ ಹೆಚ್.ವಿರುಪಾ ಕ್ಷಪ್ಪ ನೇತೃತ್ವದಲ್ಲಿ ಸಿಐಟಿಯು ನಿಂದ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದೆಂದು ಈ ಮೂಲಕ ಅವರು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ