ಬಾಗ್ದಾದ್:
ಇಂದು ನಸುಕಿನಲ್ಲಿ ನಡೆಸಿದ ಸ್ಟ್ರೈಕ್ ನಲ್ಲಿ ಬಾಗ್ದಾದ್ ವಿಮಾನ ನಿಲ್ದಾಣ ರಸ್ತೆಯಲ್ಲಿ ಇರಾನಿನ ಉನ್ನತ ಸೇನಾಧಿಕಾರಿ ಕಾಸೆಮ್ ಸೊಲೈಮಾನಿ ಮತ್ತು ಇರಾಕ್ ನ ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಹಶೆಡ್ ಅಲ್-ಶಾಬಿಯನ್ನು ಕೊಂದು ಹಾಕಿದೆ ಎಂದು ತಿಳಿಸಿದೆ.
ಹಶೆಡ್ ನ ಉಪ ಮುಖ್ಯಸ್ಥ ಅಬು ಮಹ್ದಿ ಅಲ್ -ಮುಹಂಡಿಸ್ ಮತ್ತು ಕ್ಯುಡ್ಸ್ ಪಡೆಯ ಮುಖ್ಯಸ್ಥ ಖ್ಯಾಸೆಮ್ ಸೊಲೈಮಾನಿ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಅದರ ಮೇಲೆ ಗುರಿಯಾಗಿಟ್ಟು ಕೊಂದು ಹಾಕಲಾಗಿದೆ ಎಂದು ಮಿಲಿಟರಿ ಪಡೆ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಮಧ್ಯರಾತ್ರಿ ನಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕ್ಷಿಪಣಿ ದಾಳಿಗೆ ಒಳಗಾಯಿತು ಎಂದು ಇರಾಕ್ ನ ಸೇನೆ ತಿಳಿಸಿದೆ.
![](https://prajapragathi.com/wp-content/uploads/2020/01/02iraq-airport-sub2-superJumbo-v2.gif)