ಬಳ್ಳಾರಿ:
ನಗರದಲ್ಲಿ ನಡೆಯುತ್ತಿರುವ ಸಿಎಎ ಪರ ಪ್ರತಿಭಟನೆ ವೇಳೆ ಮಾತನಾಡಿದ ಸೋಮಶೇಖರ ರೆಡ್ಡಿ ನೀವು ಮುಸ್ಲಿಂಮರು 20-30 ಮಕ್ಕಳನ್ನು ಹುಟ್ಟಿಸಿದರೇ ನಾವು ಒಬ್ಬೊಬ್ಬರು 50 ಜನರನ್ನು ಹುಟ್ಟಿಸಿ ಜನಸಂಖ್ಯೆ ಹೆಚ್ಚಿಸುತ್ತೇವೆ’ ಎಂದು ಹೇಳುವ ಮೂಲಕ ಶಾಸಕ ಸೋಮಶೇಖರ ರೆಡ್ಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಿನ್ನೆ ನಗರದಲ್ಲಿ ನಡೆದ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ಭದ್ರತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದ್ದು, ಅದನ್ನು ಎಲ್ಲರೂ ಬೆಂಬಲಿಸಬೇಕು. ಕಾಯ್ದೆ ವಿರೋಧಿಸಿ ಮತ್ತೊಂದು ಸಲ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರೆ ನಾವು ಸುಮ್ಮನೆ ಕೂರಲ್ಲ. ದೇಶದಿಂದ ಹೊರಗೆ ಹಾಕುತ್ತಾರೆ ಎಂಬ ಭಯವಿದ್ದವರು ದೇಶಬಿಟ್ಟು ಹೋಗಬೇಕು. ಇಂದಿನ ರ್‍ಯಾಲಿಯಲ್ಲಿ ಶೇ 5ರಷ್ಟು ಜನ ಬಂದಿದ್ದಾರಷ್ಟೆ. ಜಾಸ್ತಿ ನಕ್ರಾ ಮಾಡಿದರೆ ಇನ್ನುಳಿದ ಶೇ 95ರಷ್ಟು ಜನ ಬರುತ್ತಾರೆ. ಆಗ ಕಾಯ್ದೆ ವಿರೋಧಿಸುವವರು ಯಾರೂ ಉಳಿಯುವುದಿಲ್ಲ’ ಎಂದು ಅವರು ಹೇಳಿದರು.
ಈ ಸೋಮಶೇಖರ ರೆಡ್ಡಿ ಭಯಂಕರ ದೇಶಭಕ್ತ. ನಾನು ಸತ್ತ ಮೇಲೆ ನನ್ನ ಶವ ಕೂಡ ‘ಭಾರತ್ ಮಾತಾಕೀ ಜೈ’ ಎಂದು ಹೇಳುತ್ತೆ. ನಿಮ್ಮಂತೆ ನಾವು ಕಳ್ಳ ಭಕ್ತರಲ್ಲ. ನಿಜವಾದ ಭಕ್ತರು. ನಮಗಾದರೆ ಫ್ಯಾಮಿಲಿ ಪ್ಲ್ಯಾನಿಂಗ್. ಅನಕ್ಷರಸ್ಥರು ಸಿಎಎ ಬಗ್ಗೆ ಅನಕ್ಷರಸ್ಥರಿಗೆ ತಪ್ಪು ತಿಳುವಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
