ನವದೆಹಲಿ :
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 44,489 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 524 ಸೋಂಕಿತರು ಮೃತಪಟ್ಟಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಗುರುವಾರ 44,489 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 92.66 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,35,223 ಆಗಿದೆ.
With 44,489 new #COVID19 infections, India's total cases rise to 92,66,706
With 524 new deaths, toll mounts to 1,35,223 . Total active cases at 4,52,344
Total discharged cases at 86,79,138 with 36,367 new discharges in last 24 hrs pic.twitter.com/234QqoZyPk
— ANI (@ANI) November 26, 2020
ಇನ್ನು ಕಳೆದ 24 ಗಂಟೆಗಳಲ್ಲಿ 36,000 ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 86.79 ಲಕ್ಷ ದಾಟಿದೆ. ದೇಶದಲ್ಲಿ ಇನ್ನೂ ಕೂಡ 4.52 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಣಮುಖ ಪ್ರಮಾಣ 93.66% ಇದ್ದು, ಸಾವಿನ ಪ್ರಮಾಣ 1.46% ರಷ್ಟಿದೆ. ನವೆಂಬರ್ 25ರಂದು 10.90 ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 13.59 ಕೋಟಿ ಕೊರೋನಾ ಟೆಸ್ಟ್ಗಳನ್ನ ನಡೆಸಿದಂತಾಗಿದೆ. ದೇಶದಲ್ಲಿ ಕಳೆದ ಕೆಲ ದಿನಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಜೊತೆಗೆ ಗುಣಮುಖ ಪ್ರಮಾಣವೂ ಸ್ವಲ್ಪ ಕಮ್ಮಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
