ಹರಪನಹಳ್ಳಿ:
ಎಲ್ಲಿಯಾದರೂ ಮರಗಳಿಗೆ ಮೊಳೆಹೊಡೆದರೆ, ಬ್ಯಾನರ್ ಹಾಕಿದರೆ, ಪೊಸ್ಟರ್ ಅಂಟಿಸಿದರೆ ವೃಕ್ಷ ರಕ್ಷಕ ತಂಡ ಹಾಜರಾಗಿ ತೆರವುಗೊಳಿಸಿ ಉಳಿಸಲು ಸಜ್ಜಾಗಿದೆ.
ಪಟ್ಟಣದಲ್ಲಿ ಈಗಾಗಲೇ ಏಳು ಜನರ ವೃಕ್ಷ ರಕ್ಷಕ ತಂಡ ತನ್ನ ಕೆಲಸವನ್ನು ಆರಂಭಿಸಿದ್ದು ತಾಲ್ಲೂಕು ಒಳಗೊಂಡು ಸುತ್ತು ಮುತ್ತಲಿನ ಪ್ರದೇಶಗಳ ಒಟ್ಟು 900 ಸಾವಿರ ಹೆಕ್ಟರ್ ವಿಸ್ತೀರ್ಣದಲ್ಲಿನ ಮರಗಳಿಗೆ ಹಾನಿಯಾದಲ್ಲಿ ಅವುಗಳನ್ನು ರಕ್ಷಣಗೆ ಮುಂದಾಗಿದೆ.
ನಶೀಸಿ ಹೋಗುತ್ತಿರುವ ಗೀಡ, ಮರಗಳ ಪೋಷಣೆಗಾಗಿ ರಾಜ್ಯದಾದ್ಯಂತ ವೃಕ್ಷ ತಂಡವಿದ್ದು ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಣೆ ಮಾಡುವವರನ್ನು ಗುರುತಿಸಿ ಅವರ ಜತೆಗೆ ಸಂಪರ್ಕ ಮಾಡಿಕೊಂಡು ವಾಟ್ಸಪ್ ಗ್ರೂಪ್ ರಚಿಸಿ ಆ ಮೂಲಕ ಸಲಹೆ, ಸೂಚನೆಗಳ ಮೂಲಕ ಪರಿಸರ ರಕ್ಷಿಸಿ ಹಸಿರ ನಗರವನ್ನಾಗಿ ಮಾಡಲು ಪಣತೊಟ್ಟಿದೆ. ಈ ಗ್ರೂಪ್‍ನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ, ಅದ್ಯಾಪಕ್ಷರು, ವಿದ್ಯಾರ್ಥಿಗಳು, ಉತ್ಸಾಹಿ ಯುವಕರು, ಇತರರು ಇದ್ದಾರೆ.
ಯಾವುದೇ ಗೀಡ, ಮರಗಳಿಗೆ ಪ್ರಚಾರಕ್ಕಾಗಿ ಬ್ಯಾನರ್ ಹಾಕಿದ್ದರೆ, ಪೋಸ್ಟರ್ ಅಂಟಿಸಿದರೆ, ಮೊಳೆಗಳನ್ನು ಹೊಡೆದಿದ್ದರೆ ಅವುಗಳನ್ನು ತೆರವುಗೊಳಿಸುತ್ತಾರೆ. ಗೀಡ, ಮರಗಳು ಉತ್ತಮವಾಗಿ ಬೆಳೆಯಲು ಸಮರ್ಪಕವಾಗಿ ನೀರು ನಿಂತುಕೊಳ್ಳಲು ಸುತ್ತಲೂ ಗುಂಡಿಯನ್ನು ತೆಗೆಯುವುದು, ನೀರನ್ನು ಹಾಕುವುದು ಹಾಗೂ ಬಿಡುವಿನ ವೇಳೆಯಲ್ಲಿ ವಾರದ ಒಂದು ದಿವಸ ಸಾರ್ವಜನಿಕ ಗೀಡ, ಮರಗಳ ಬೆಳವಣಿಗೆ, ಹಾನಿ ಕುರಿತಾಗಿ ಜಾಗೃತಿಯನ್ನು ಮೂಡಿಸುವುದು ಈ ತಂಡದ ಉದ್ದೇಶವಾಗಿದೆ.
ಈಗಾಗಲೇ 100 ಅಧಿಕ ಮರಗಳಲ್ಲಿ ಬ್ಯಾನರ್, ಮೊಳೆ ತೆಗೆದಿದ್ದು, ಪಾತಿ ಮಾಡಿ, ಸ್ವಚ್ಚತೆ ಮಾಡಲಾಗಿದೆ ಶನಿವಾರ ಮತ್ತು ಭಾನುವಾರದ ಬಿಡುವಿನ ವೇಳೆಯಲ್ಲಿ ಕೆಲಸ ನಿರ್ವಹಿಸಲಾಗಿದೆ ಎಂದು ತಂಡದ ಸದಸ್ಯರು ಅಭಿಪ್ರಾಯಪಟ್ಟರು.
ನಿಯಮಗಳು :
ಸಮಯವೇ ಶುಲ್ಕ, ವೃಕ್ಷಪ್ರೇಮವೇ ಪ್ರವೇಶಪತ್ರ, ವೃಕ್ಷ ವೇದನೆಗಳ ನಿವೇತ್ತಿಯೇ ನಮ್ಮ ಪ್ರವೃತ್ತಿ, ನಮಗೆ ಕಾಣುವ ವೃಕ್ಷಗಳ ರಕ್ಷಣೆಗೆ ನಮ್ಮ ಅಜನ್ಮ ಹಕ್ಕು, ವೃಕ್ಷ ಮಾಲೀಕರಿಗೆ ಫಲದ ಹಕ್ಕಿರಬಹುದು, ಕೊಲ್ಲುವ ಹಕ್ಕು ಇಲ್ಲ, ಹಾಗಾಗಿ ವೃಕ್ಷರಕ್ಷೆ ನಮ್ಮ ದೀಕ್ಷೆ, ವೃಕ್ಷರಕ್ಷಕರಾಗಲು ಹಣದ ಅವಶ್ಯಕತೆ ಇಲ್ಲ, ವೃಕ್ಷ ರಕ್ಷೆಗೆ ಯಾವುದೇ ಖಾತೆ ಇಲ್ಲ, ವೃಕ್ಷಗಳ ಮೇಲೆ ಆಗುತ್ತಿರುವ ಯಾವುದೇ ಹಿಂಸೆಯ ದೃಶ್ಯಗಳು ನಮ್ಮ ಕಣ್ಣಿಗೆ ಬಿದ್ದ ತಕ್ಷಣ ಕಾರ್ಯಪ್ರವೃತ್ತರಾಗೋಣ, ಅವುಗಳ ಬಂಧನಗಳನ್ನು ಬಿಡಿಸೋಣ ಸೇರಿದಂತೆ 12ನೇ ವೃಕ್ಷ ರಕ್ಷಣೆಯ ನಿಯಮಗಳೊಂದಿಗೆ ಕೆಲಸ ನಿರ್ವಹಿಸುತ್ತಿದೆ ತಂಡ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
