ಜ. 8 ರಿಂದ 12ರವರೆಗೆ ಹಂಪಿ ಬೈಸ್ಕೈ ಕಾರ್ಯಕ್ರಮ

ಬಳ್ಳಾರಿ

     ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತ ಈ ಬಾರಿಯೂ ಹಂಪಿ ಬೈಸ್ಕೈಗೆ ವ್ಯವಸ್ಥೆ ಮಾಡಿದೆ. ಕಮಲಾಪುರದ ಮಯೂರ ಭುವನೇಶ್ವರಿ ಹೋಟಲ್ ಆವರಣದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಹೆಲಿಪ್ಯಾಡ್‍ನಲ್ಲಿ ಶಾಸಕ ಆನಂದಸಿಂಗ್ ಅವರು ಪೂಜೆ ಸಲ್ಲಿಸುವುದರ ಮೂಲಕ ಹಂಪಿ ಬೈ ಸ್ಕೈಗೆ ಚಾಲನೆ ನೀಡಿದರು.

     ನಂತರ ಅವರು ತಮ್ಮ ಕುಟುಂಬದ 6 ಜನರೊಂದಿಗೆ ಮೊದಲಿಗೆ ಹಣ ಪಾವತಿಸಿ ಹೆಲಿಕಾಪ್ಟರ್ ಹತ್ತಿದ ಆನಂದಸಿಂಗ್ ಅವರು ಹಂಪಿಯ ವಿಹಂಗಮ ನೋಟವನ್ನು ಸವಿದರು. ಹಂಪಿಯ ವಿಹಂಗಮ ನೋಟ, ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠ್ಠಲ ಟೆಂಪಲ್, ಲೋಟಸ್ ಮಹಲ್ ಸೇರಿದಂತೆ ವಿವಿಧ ಸ್ಮಾರಕಗಳು, ಹರಿಯುವ ನದಿ, ತುಂಗಾಭದ್ರಾ ನದಿ, ಬೆಟ್ಟ-ಗುಡ್ಡಗಳು, ನೈಸರ್ಗಿಕ ಸೌಂದರ್ಯವನ್ನು ಆಗಸದಿಂದ ಹಂಪಿ ನೋಡುವುದರ ಮೂಲಕ ಕಣ್ತುಂಬಿಕೊಂಡರು.

     ನಂತರ ಮಾತನಾಡಿದ ಶಾಸಕ ಆನಂದಸಿಂಗ್ ಅವರು ಇದೇ ಮೊದಲ ಬಾರಿಗೆ ನಮ್ಮ ಕುಟುಂಬದೊಂದಿಗೆ ಆಗಸದಿಂದ ಹಂಪಿಯನ್ನು ವೀಕ್ಷಿಸಿದೆವು. ಈ ಬಾರಿ ಸೊಸೆಯೂ ನಮಗೆ ಸಾಥ್ ನೀಡಿದರು. ಅಗಸದಿಂದ ಹಂಪಿ ತುಂಬಾ ಸುಂದರವಾಗಿ ಕಾಣುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ಸ್ವಲ್ಪ ದರ ಜಾಸ್ತಿಯಾಗಿದೆ ಎಂದು ಹೇಳಿದ ಶಾಸಕ ಸಿಂಗ್ ಅವರು ಹಂಪಿ ಉತ್ಸವಕ್ಕೆ ಆಗಮಿಸುವ ಜನರು ಆಗಮಿಸಿ ಆಗಸದ ಮೂಲಕ ಹಂಪಿಯನ್ನು ವೀಕ್ಷಿಸಬೇಕು ಎಂದು ಅವರು ಮನವಿ ಮಾಡಿದರು.

   ಮಯೂರ ಭುವನೇಶ್ವವರಿ ಹೋಟಲ್ ಆವರಣದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಪಕ್ಕದಲ್ಲಿಯೇ ಎರಡು ಟಿಕೆಟ್ ಕೌಂಟರ್‍ಗಳನ್ನು ಒಪನ್ ಮಾಡಲಾಗಿದೆ. ಅಲ್ಲಿ ಟಿಕೆಟ್ ಪಡೆದು ಹೆಲಿಕಾಪ್ಟರ್ ಹತ್ತಬಹುದು. ಜ.8ರಿಂದ 12ರವರೆಗೆ ಚಿಪ್ಸಾನ್ ಏವಿಯೇಶನ್ ಮತ್ತು ತುಂಬೆ ಏವಿಯೇಶನ್‍ಗಳ ಹೆಲಿಕಾಪ್ಟರ್‍ಗಳು ಪ್ರವಾಸಿಗರನ್ನು ಹೊತ್ತುಕೊಂಡು ಹಂಪಿ, ಆನೆಗುಂದಿ ಸೇರಿದಂತೆ ಸುತ್ತಮುತ್ತಲಿನ ವಿಹಂಗಮ ನೋಟವನ್ನು ತೋರ್ಪಡಿಸಲಿವೆ.

     7 ನಿಮಿಷಗಳ ಹಾರಾಟಕ್ಕೆ 3 ಸಾವಿರ ರೂ.ಗಳ ದರ ನಿಗದಿ ಮಾಡಲಾಗಿದೆ. ಕಳೆದ ಬಾರಿಯ ಹಂಪಿ ಉತ್ಸವದಲ್ಲಿ 1600ಕ್ಕೂ ಹೆಚ್ಚು ಜನರು ಹಂಪಿಯ ಸೌಂದರ್ಯವನ್ನು ಬಾನಾಂಗಳದ ಮೂಲಕ ಸವಿದಿದ್ದರು. ಈ ಬಾರಿಯೂ ಅದೇ ರೀತಿಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮೋತಿಲಾಲ್ ಲಮಾಣಿ ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಶ್ವನಾಥ್ ಮತ್ತು ಪೈಲಟ್‍ಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link