ಕ್ರಮಬದ್ಧ ಮತದಾರರ ಪಟ್ಟಿ ಸಿದ್ಧಪಡಿಸಿ : ಡಾ.ಕೆ.ವಿ.ತ್ರಿಲೋಕಚಂದ್ರ

ಹಾವೇರಿ
    ಜಿಲ್ಲೆಯಲ್ಲಿ ಕ್ರಮಬದ್ಧ ದೋಷ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಬ್ಲಾಕ್ ಮಟ್ಟದ ಮತಗಟ್ಟೆ ಅಧಿಕಾರಿಗಳ ಮಾಹಿತಿಯನ್ನು ರ್ಯಾಂಡಂ ಆಗಿ ಪರಿಶೀಲನೆ ಮಾಡಲು ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಜಿಲ್ಲಾ ವೀಕ್ಷಕರಾದ ಡಾ.ಕೆ.ವಿ.ತ್ರಿಲೋಕಚಂದ್ರ ಅವರು  ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2020ರ ಸಂಬಂಧ ಜಿಲ್ಲೆಯಲ್ಲಿರುವ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಿ.ಎಲ್.ಓ.ಗಳು ಮನೆ ಮನೆಗೆ ಭೇಟಿ, ಮರಣ ಹೊಂದಿದವರು, ಸ್ಥಳಾಂತರ, ಹೊಸ ಸೇರ್ಪಡೆ ಪರಿಷ್ಕರಣೆ ಮಾಡಬೇಕು.
 
     ತಹಶೀಲ್ದಾರಗಳು, ಉಪ ವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ರ್ಯಾಂಡ್ ಆಗಿ ಪರಿಶೀಲಿಸಿ ಕ್ರಮಬದ್ಧ ಮತದಾರರ ಪಟ್ಟಿ ಪರಿಷ್ಕಣೆಯಾದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಯೋಜಿತ ಜನಸಂಖ್ಯಾ ಪಟ್ಟಿ ಹಾಗೂ ಮತದಾರರ ಪಟ್ಟಿಯ ಸಂಖ್ಯೆಗಳ ವ್ಯತ್ಯಯ ಕಂಡುಬಂದರೆ ದಾಖಲೆ ಸಹಿತ ಪರಿಶೀಲನೆ ನಡೆಸಬೇಕು. ದೋಷರಹಿತ ಕ್ರಮಬದ್ಧ ಮತದಾರರ ಪಟ್ಟಿ ಸಿದ್ಧಗೊಳ್ಳಬೇಕು ಎಂದು ಹೇಳಿದರು.
       ಬಿ.ಎಲ್.ಓ.ಗಳು ಮನೆಗೆ ಮನೆಗೆ ಭೇಟಿ ನೀಡಿ,  ಮರಣ ಹೊಂದಿದ ಮತದಾರ ವಿವರ, ಸ್ಥಳಾಂತರ ಮತದಾರರ ವಿವರ, ಹೊಸ ಸೇರ್ಪಡೆ ಬಗ್ಗೆ ಮಾಹಿತಿ ಪಡೆದ ಮತದಾರರವನ್ನು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾಗಳು ತಮ್ಮ ವ್ಯಾಪ್ತಿಯಲ್ಲಿ ರ್ಯಾಂಡಮ್ ಆಗಿ ಪರಿಶೀಲಿಸಿ ಮತದಾರರ ಪಟ್ಟಿ ಕ್ರಮಬದ್ಧ ಪರಿಷ್ಕಣೆಯಾಗಿರುವ ಕುರಿತಂತೆ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
      ಇದೇ ಸಂದರ್ಭದಲ್ಲಿ ನಮೂನೆ 6, 7, 8, 8ಎ ವಿವರಗಳನ್ನು ಪಡೆದುಕೊಂದರು ಹಾಗೂ ಕರಡು ಮತದಾರರ ಪಟ್ಟಿಯ ಸಂಖ್ಯೆ, ಯೋಜಿತ ಜಿಲ್ಲೆಯ ತಾಲೂಕುವಾರು ಸಂಖ್ಯೆ, ಲಿಂಗಾನುಪಾತದ ಸಂಖ್ಯೆ, 18  ರಿಂದ 80 ವರ್ಷ ಮೇಲ್ಪಟ್ಟ ಎಂಟು ಹಂತದ ಮತದಾರರ ವಿವರಗಳನ್ನು ಪಡೆದುಕೊಂಡರು.
 
    ಸೇವಾ ಮತದಾರರ, ಯುವ ಮತ್ತು ವಿಕಲಚೇತನ ಮತದಾರರ ವಿವರ,  ಎಪಿಕ್ ಕಾರ್ಡ್ ವಿತರಣೆ,  ಎಪಿಕ್ ಕಾರ್ಡಿಗೆ ಫೋಟೋ ಅಪ್‍ಲೋಡ್, ಫೋಟೋ ಇಲ್ಲದ ಎಪಿಕ್ ಕಾರ್ಡ್ ವಿವರ,  ಆನ್‍ಲೈನ್ ಮತ್ತು ನೇರ ಸ್ವೀಕೃತಿ ನೋಂದಣಿ, ಸೇರ್ಪಡೆ, ಮಾರ್ಪಾಡು ಅರ್ಜಿಗಳ ಸ್ವೀಕೃತಿ ವಿವರ, ಮಿಂಚಿನ ನೋಂದಣಿಯಲ್ಲಿ ಸ್ವೀಕೃತವಾದ ಅರ್ಜಿಗಳ ವಿವರಗಳನ್ನು ಪಡೆದುಕೊಂಡರು.
     ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ  ಅವರು ಮಾಹಿತಿ ನೀಡಿ, ಯೋಜಿತ ಜನಸಂಖ್ಯೆ, ಮತದಾರರ ನೋಂದಣಿ, ಅರ್ಜಿಗಳ ಸ್ವೀಕಾರ, ಸೇರ್ಪಡೆ ಮತ್ತು ಮಾರ್ಪಾಡು ಅರ್ಜಿಗಳ ವಿವರ, ವಿಶೇಷ ಮತದಾರರ ನೋಂದಣಿ ಕುರಿತಂತೆ ಕೈಗೊಂಡ ಕಾರ್ಯಗಳು ಹಾಗೂ ಸ್ವಿಕೃತವಾದ ಅರ್ಜಿಗಳ ವಿವರವನ್ನು ಸಲ್ಲಿಸುತ್ತ ಜಲ್ಲೆಯಲ್ಲಿ 1470 ಮತಗಟ್ಟೆಗಳಿದ್ದು 17,44,036 ಯೋಜಿತ ಜನಸಂಖ್ಯೆ ಇದೆ. 12,51,224 ಮತದಾರರಿದ್ದಾರೆ.
    ಮಿಂಚಿನ ನೋಂದಣಿ ಮೂಲಕ  6 ರಿಂದ 9ರವರೆಗೆ 11,593 ಫಾರಂ ನಂಬರ್ 6, 3451 ಫಾರಂ ನಂ7 ಹಾಗೂ 1788 ಫಾರಂ 8 ಮತ್ತು 943 ಫಾರಂ ನಂಬರ್ 8ಎ ಸೇರಿದಂತೆ 17,775 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಮತದಾರರ ಮಿಂಚಿನ ನೋಂದಣಿಗೆ ವಿಶೇಷ ಜಾಗೃತಿ ಮೂಡಿಸಲಾಗಿದೆ ಎಂದು ವಿವರಿಸಿದರು.
      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿಗಳ ಡಾ.ಎನ್.ತಿಪ್ಪೇಸ್ವಾಮಿ, ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ,  ಜಿಲ್ಲೆಯ ತಹಶೀಲ್ದಾರಗಳು ಉಪಸ್ಥಿತರಿದ್ದರು.
      ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ: ಡಾ.ತ್ರಿಲೋಕಚಂದ್ರ ಅವರು ಹಾವೇರಿ ನಗರದ ವಿದ್ಯಾನಗರ, ಬಸವೇಶ್ವರನಗರ, ನಾಗೇಂದ್ರನಮಟ್ಟಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಿಂಚಿನ ಮತದಾರರ ನೋಂದಣಿ ಕುರಿತಂತೆ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಉಪವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ ಹಾಗೂ ತಹಶೀಲ್ದಾರ ಶಂಕರ ಅವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link