ಹಾವೇರಿ
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪೀಠಕ್ಕೆ ಮುಂದಿನ ಆಯವ್ಯಯದಲ್ಲಿ 10 ಕೋಟಿ ರೂ. ಅನುದಾನ ನೀಡುವುದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದರು.ಜಿಲ್ಲೆಯ ಸುಕ್ಷೇತ್ರ ನರಸೀಪುರದಲ್ಲಿ ಬುಧವಾರ ಶ್ರೀ ನಿಜಶರಣ ಅಂಬಿಗರಚೌಡಯ್ಯನವರ ಶರಣ ಸಂಸ್ಕøತಿ ಉತ್ಸವ, ವಚನ ಮಹಾರಥೋತ್ಸವ, ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 900ನೇ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಬಾಬುರಾವ್ ಚಿಂಚನಸೂರ ಅವರನ್ನು ಅಧ್ಯಕ್ಷನ್ನಾಗಿ ನೇಮಕ ಮಾಡಲಾಗಿದೆ. ಜನಾಂಗದ ಅಭಿವೃದ್ಧಿಗೆ ನಿಗಮದ ಬೇಡಿಕೆಗೆ ಸ್ಪಂದಿಸಲಾಗುವುದು ಹಾಗೂ ಅಂಬಿಗರ ಚೌಡಯ್ಯನವರ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಸಮಾಜದ ಬಹುದಿನಗಳ ಬೇಡಿಕೆಯಾದ ಮೊಗವಿರ, ಕೋಲಿ, ಗಂಗಾಮತ ಸಮಾಜವನ್ನು ಎಸ್.ಟಿಗೆ ಸೇರಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಈಗಾಗಲೇ ಕೇಂದ್ರದಲ್ಲಿ ಈ ಕುರಿತಂತೆ ಚರ್ಚೆ ನಡೆಯುತ್ತಿದೆ. ಈ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಕುರಿತಂತೆ ಕೇಂದ್ರ ಸಚಿವರಿಂದಿಗೆ ಚರ್ಚಿಸಲಾಗುವುದು, ತಮ್ಮ ಸಮಾಜದ ಬೇಡಿಕೆಯನ್ನು ಈಡೇರಿಸುವ ಪ್ರಮಾಣ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಎಲ್ಲ ಸಮಾಜವನ್ನು ಒಟ್ಟಾಗಿ, ಒಂದಾಗಿ ತೆಗೆದುಕೊಂಡು ಹೋಗುವುದು ನನ್ನ ಆಶಯವಾಗಿದೆ. ಯಾವುದೇ ಸಮಾಜಕ್ಕೆ ನೋವಾಗದಂತೆ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳಿಗೆ ತಮ್ಮ ಸಹಕಾರ ಅಗತ್ಯವಾಗಿದೆ. ನಾಡು ಕಂಡರೀಯದ ಅತಿವೃಷ್ಟಿಯಿಂದ 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಾನಿಯಾಗಿದೆ, ನೆರೆಯಿಂದ ಜನತೆ ಸಂಕಷ್ಟದಲ್ಲಿದ್ದಾರೆ. ಅವರ ಕಣ್ಣಿರೊರೆಸುವ ಕೆಲಸಮಾಡುತ್ತಿದ್ದೇವೆ ಮುಂದಿನ ಮೂರು ವರ್ಷಗಳಲ್ಲಿ ನಾಡಿನ ಅಭಿವೃದ್ಧಿಗೆ ನಿಮ್ಮ ಸಹಕಾರ ವಿರಲಿ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಬೆನ್ನೆಲುಬಾಗಿ ನಿಂತ ಅಗ್ರಣ್ಯ ಶರಣರು ಅಂಬಿಗರ ಚೌಡಯ್ಯನವರು, ಲೋಕ ಕಲ್ಯಾಣಕ್ಕಾಗಿ ತಮ್ಮ ಒಡೆತನದ ಭೂಮಿ ನೀಡಿದ ಮಹಾನ್ ಶರಣ. ವಚನ ಸಾಹಿತ್ಯ ರಕ್ಷಣೆ ಮಾಡಿದ ಶ್ರೇಷ್ಠ ಶರಣರು. ಬದಲಾದ ಕಾಲಘಟ್ಟದಲ್ಲಿ 12ನೇ ಶತಮಾನದ ವಿಚಾರಗಳು ಇಂದು ಪ್ರಸ್ತುವಾಗಿವೆ. ಮುಂದಿನ ದಿನಗಳಲ್ಲಿ ಸಾಧಿಸಬೇಕಾಗಿದ್ದು ಬಹಳವಿದ್ದು, ಕಾಲಾವಕಾಶ ನೀಡಿದಲ್ಲಿ ನಾಡಿನ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯಾಣ ಪ್ರಯತ್ನಮಾಡುವೆ ಎಂದು ಹೇಳಿದರು.
ಸಮಾರಂಭದಲ್ಲಿ ಗೃಹ, ಸಹಕಾರ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಲಾಲಾಜಿ ಮೆಂಡನ್, ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಬಾಬುರಾವ್ ಚಿಂಚನಸೂರ, ಸಂಸದರಾದ ರಾಘವೇಂದ್ರ, ಜಿ.ಎಂ.ಸಿದ್ದೇಶ್ವರ, ರವಿಕುಮಾರ, ಮಾಜಿ ಸಚಿವರಾದ ಪ್ರಮೋದ ಮಧ್ವರಾಜ್, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಎಂ.ಬಿ.ಹೆಗ್ಗಣ್ಣನವರ, ಮಾಜಿ ಸಚಿವರಾದ ಆರ್.ಶಂಕರ್, ಬಿ.ಪಿ.ಹರೀಶ್, ಗಂಗಾಮತಸ್ತರ ಸಂಘದ ಅಧ್ಯಕ್ಷರಾದ ಬಿ.ಮೌಲಾಲಿ, ನರಸೀಪುರದ ಕ್ಷೇತ್ರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ, ನಿಡುಮಾಮುಡಿ ಚನ್ನಮಲ್ಲವೀರಭದ್ರ ಶ್ರೀಗಳು, ದಿಂಗಾಲೇಶ್ವರ ಶ್ರೀಗಳು, ಶಾಂತವೀರಶ್ರೀಗಳು, ಬಸವಲಿಂಗಶ್ರೀಗಳು, ಡಾ.ಈಶ್ವರ ಮಂಟೂರ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ