5 ವರ್ಷ ಅಪ್ಪ ಮಗ ರಾಜ್ಯವನ್ನು ಲೂಟಿ ಹೊಡೆದಿದ್ದಾರೆ..!

ಅಮರಾವತಿ:

    ಆಂಧ್ರಪ್ರದೇಶದ ವಿಧಾನಸಭೆಯ ಎರಡನೇ ದಿನವಾದ ಇಂದು ಸದನದಲ್ಲಿ ಪದೇ ಪದೇ ಸದನದಲ್ಲಿ ಗದ್ದಲ ಎಬ್ಸಿಸಿ ಸಭೆಗೆ ಅಡ್ಡಿಪಡಿಸುತ್ತಿದ್ದ ಟಿಡಿಪಿಯನ್ನು ವೈಎಸ್‌ಆರ್‌ಸಿಪಿ ಶಾಸಕ ಆರ್.ಕೆ.ರೋಜಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

   ಷೋಷಿತರ ಅಭಿವೃದ್ಧಿಗಾಗಿ ಎಸ್‌ಸಿ ಆಯೋಗ ರಚನೆ ಮಾಡುವ ಮಸೂದೆಯನ್ನು ಇಂದು ಸಭೆಯಲ್ಲಿ ಮಂಡಿಸಿದರೆ ಅದಕ್ಕೂ ಟಿಡಿಪಿ ವಿರೋಧಿಸುತ್ತಿದೆ .ಸದನದಲ್ಲಿ ಮಂಡನೆಯಾಗುವ ಪ್ರತಿ ಬಿಲ್ಲಿಗೂ ಟಿಡಿಪಿ ವಿರೋಧಿಸಿದರೆ ಜನರ ಗತಿಯೇನು ಎಂದು ಪ್ರಶ್ನಿಸಿದ್ದಾರೆ. ಟಿಡಿಪಿ ಸದಸ್ಯರು ಮಹಿಳೆಯರ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದಾರೆ ಮತ್ತು ಅವರಿಗೆ ಏನಾದರೂ ಜ್ಞಾನವಿದೆಯೇ ಎಂದು ರೋಜಾ ಪ್ರಶ್ನಿಸಿದರು. ಚಂದ್ರಬಾಬು ಅವರು ತಮ್ಮ ಭಾಷಣದಲ್ಲಿ ಒಮ್ಮೆಯಾದರು ರಾಯಲಸೀಮಾ ವಿಚಾರದ ಬಗ್ಗೆ ಮಾತನಾಡಲಿಲ್ಲ ಎಂದರು. 

   ಚಂದ್ರಬಾಬು ಅವರು ಮರೆತಂತೆ ಕಾಣಿಸುತ್ತೆ ಕೆಸಿಆರ್ ಅವರು ತಮ್ಮನ್ನು ಡರ್ಟಿ ಪಾಲಿಟೀಷಿಯನ್ ಎಂದು ಟೀಕಿಸಿದ್ದರು ಎಂದು ರೋಜಾ ಹೇಳಿದರು. ಚಂದ್ರಬಾಬು ಅವರಂತಹ ಕೊಳಕು ರಾಜಕಾರಣಿ ದೇಶದ ಇತಿಹಾಸದಲ್ಲಿ ಇಲ್ಲ ಎಂದು ಕೆಸಿಆರ್ ಹೇಳಿದ್ದರು. ವಿಕೇಂದ್ರೀಕರಣ ವಿಲ್ಲದೆ ಅಭಿವೃದ್ಧಿ ಹೇಗೆ ಸಾಧ್ಯ  ಅಮರಾವತಿಯ ಬಗ್ಗೆ ನಾನಾ ವ್ಯಾಕ್ಯಾನ ಮಾಡುವ ಚಂದ್ರಬಾಬು ನಾಯ್ಡು ಒಂದೇ ಒಂದು ಶಾಶ್ವತ ಕಟ್ಟಡವನ್ನು ಏಕೆ ನಿರ್ಮಿಸಿಲ್ಲಾ ಎಂದು ಪ್ರಶ್ನಿಸಿದರು. ಮತ್ತು 5 ವರ್ಷ ರಾಜ್ಯವನ್ನು ತಂದೆ ಮತ್ತು ಮಗ ಲೂಟಿ ಮಾಡುತ್ತಿದ್ದಾರೆ ಮತ್ತು ಈಗ ಅಮರಾವತಿಯ ಮೇಲೆ ಸವಾರಿ ಮಾಡಲು ಮುಂದಾಗಿದ್ದಾರೆ ಎಂದು ರೋಜಾ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link