ಕೆನಡಾಗೆ ಭಾರಿ ಹೊಡೆತ ನೀಡಲು ಮುಂದಾದ ಆನಂದ ಮಹೀಂದ್ರಾ

ಮುಂಬೈ:
    ಭಾರತ ಮತ್ತು ಕೆನಡಾ  ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ  ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಮಹೀಂದ್ರಾ ಮತ್ತು ಮಹೀಂದ್ರಾದ  ಅಂಗಸಂಸ್ಥೆಯಾದ ರೇಸನ್ ಏರೋಸ್ಪೇಸ್ ಕಾರ್ಪೊರೇಷನ್ ಕೆನಡಾದಲ್ಲಿ ತನ್ನ ವ್ಯವಹಾರವನ್ನು ಮುಚ್ಚಲು ನಿರ್ಧರಿಸಿದೆ ಎಂದು ಕಂಪನಿಯು ಇಂದು ಭಾರತೀಯ ಷೇರು ಮಾರುಕಟ್ಟೆಗೆ ತಿಳಿಸಿದೆ.
     ಮಹೀಂದ್ರಾ ಮತ್ತು ಮಹೀಂದ್ರಾ ಆ ಕಂಪನಿಯಲ್ಲಿ 11.18 ಶೇಕಡಾ ಪಾಲನ್ನು ಹೊಂದಿತ್ತು. ಸೆಪ್ಟೆಂಬರ್ 20, 2023 ರಂದು ಕಾರ್ಯಾಚರಣೆಯನ್ನು ಮುಚ್ಚಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ವೀಕರಿಸಿರುವುದಾಗಿ ಸ್ಟಾಕ್ ಮಾರ್ಕೆಟ್‌ಗೆ ಎಂ ಅಂಡ್ ಎಂ ತಿಳಿಸಿದೆ.
    ಸೆಪ್ಟೆಂಬರ್ 20 ರಂದು ಕಾರ್ಪೊರೇಷನ್ ಕೆನಡಾದಿಂದ ವಿಸರ್ಜನೆಯ ಪ್ರಮಾಣಪತ್ರವನ್ನು ಸಂಸ್ಥೆ ಸ್ವೀಕರಿಸಿದೆ ಎಂದು ಸ್ಟಾಕ್ ಎಕ್ಸ್ಚೇಂಜ್​ಗೆ ತಿಳಿಸಲಾಗಿದೆ. ಇದರಿಂದ ಕಂಪನಿಯು ಸುಮಾರು 28.7 ಕೋಟಿ ರೂಪಾಯಿಗಳನ್ನು ಪಡೆಯುತ್ತದೆ ಎಂದು ವರದಿಯಾಗಿದೆ. ಭಾರತೀಯ ಲೆಕ್ಕಪತ್ರ ಮಾನದಂಡಗಳ ಪ್ರಕಾರ 20 ಸೆಪ್ಟೆಂಬರ್ 2023 ರಿಂದ ಕೆನಡಾದಲ್ಲಿ ಪಾಲುದಾರಿಕೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಸ್ಪಷ್ಟಪಡಿಸಿದೆ.

    ಈ ಸುದ್ದಿಯ ನಂತರ ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ತೀವ್ರವಾಗಿ ಕುಸಿತ ಕಂಡಿವೆ. ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ಮಾರುಕಟ್ಟೆಯ ಮುಕ್ತಾಯಕ್ಕೆ 10 ನಿಮಿಷಗಳ ಮೊದಲು ಶೇಕಡಾ 3 ರಷ್ಟು ಕುಸಿದು 1,584 ರೂ ಇತ್ತು. ಆದರೆ, ವಹಿವಾಟಿನ ವೇಳೆ ಕಂಪನಿಯ ಷೇರುಗಳು ಶೇಕಡಾ ಮೂರೂವರೆ ಕುಸಿದು 1575.75 ರೂಗೆ ತಲುಪಿತ್ತು ಆದರೆ ಒಂದು ದಿನದ ಹಿಂದೆ ಕಂಪನಿಯ ಷೇರುಗಳು 1634.05 ರಲ್ಲಿ ಮುಕ್ತಾಯಗೊಂಡಿದ್ದವು.

    ಕಂಪನಿಯ ಷೇರುಗಳ ಕುಸಿತದಿಂದಾಗಿ, ಕಂಪನಿಯ ತನ್ನ ವ್ಯಾಲ್ಯುವೇಷನ್​ನಲ್ಲಿ 7200 ಕೋಟಿ ರೂ.ಗಿಂತ ಹೆಚ್ಚು ಕಳೆದುಕೊಂಡಿದೆ. ಮಹೀಂದ್ರಾಗೆ ಭಾರಿ ನಷ್ಟವನ್ನು ಉಂಟುಮಾಡಿದೆ. ಮಾಹಿತಿಯ ಪ್ರಕಾರ, ಒಂದು ದಿನದ ಹಿಂದೆ ಕಂಪನಿಯ ಷೇರಿನ ಬೆಲೆ ರೂ.1634.05 ಆಗಿತ್ತು. ಅಲ್ಲದೆ ಕಂಪನಿಯ ಮಾರುಕಟ್ಟೆ ಮೌಲ್ಯ 2,03,025.78 ಕೋಟಿ ರೂ ಇತ್ತು. ಇಂದು ಷೇರಿನ ಬೆಲೆ 1575.75 ರೂ.ಗೆ ತಲುಪಿದಾಗ ಕಂಪನಿಯ ಮಾರುಕಟ್ಟೆ ಮೌಲ್ಯವು 1,95,782.18 ಕೋಟಿ ರೂ.ಗೆ ತಲುಪಿದೆ. ಅಂದರೆ ಕಂಪನಿಯ ಮೌಲ್ಯಮಾಪನವು ಒಂದು ದಿನಕ್ಕೆ 7,243.6 ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ.

    ಕಳೆದ ಕೆಲವು ದಿನಗಳಿಂದ ಕೆನಡಾ ಮತ್ತು ಭಾರತದ ನಡುವೆ ವಿವಾದ ಹೆಚ್ಚಾಗುತ್ತಿದೆ. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಈಗ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap