ನೆರೆಯಿಂದ ಹಾನಿಯಾದ ‘ಬಿ’ ವರ್ಗದ ಮನೆಗಳಿಗೆ ಪರಿಹಾರ ಪರಿಷ್ಕೃತ ಮಾರ್ಗಸೂಚಿ :ಜಿಲ್ಲಾಧಿಕಾರಿ

ಹಾವೇರಿ

dc bajpayai
 
   ನೆರೆ ಸಂತ್ರಸ್ತರ ಮನವಿಯಂತೆ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ  ‘ಬಿ’ ವರ್ಗದ ಮನೆಗಳ ದುರಸ್ಥಿಗೆ ಪರಿಹಾರ ನೀಡುವ ಮಾನದಂಡವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ಎ ಮತ್ತು ಬಿ ವರ್ಗದ ಮನೆಗಳನ್ನು ಪೂರ್ಣ ಕೆಡವಿ ಪುನರ್ ನಿರ್ಮಾಣ ಮಾಡುವುದಾದರೆ ಐದು ಲಕ್ಷ ರೂ. ಪರಿಹಾರ ಹಾಗೂ ಬಿ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವದೆ ದುರಸ್ಥಿ ಮಾಡಿಕೊಳ್ಳುವುದಾದರೆ ಮೂರು ಲಕ್ಷ ರೂ. ಪರಿಹಾರ ಪಾವತಿಸಲು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
    ಕಳೆದ ಆಗಸ್ಟ್ ಸೆಪ್ಟಂಬರ್ ಹಾಗೂ ಅಕ್ಟೋಬರ ಮಾಹೆಯಲ್ಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದ ಕಾರಣದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ ಕಾರ್ಯಕ್ಕಾಗಿ ಸರ್ಕಾರವು ಅಗತ್ಯ ಅನುದಾನ ಒದಗಿಸಲು ಎ.ಬಿ ಹಾಗೂ ಸಿ ಎಂದು ಮೂರು ವರ್ಗಗಳಾಗಿ ವಿಂಗಡಿಸಿ ಈ ಪೈಕಿ ಸಿ ವರ್ಗದ ಮನೆಗಳ ದುರಸ್ಥಿಗಾಗಿ ತಹಶೀಲ್ದಾರ ಹಂತದಲ್ಲಿ ಒಂದು ಬಾರಿಗೆ 50 ಸಾವಿರ ರೂ. ಪರಿಹಾರ ಬಿಡುಗಡೆ ಮಾಡಲಾಗಿತ್ತು.
    ಹಾಗೂ ಎ ಮತ್ತು ಬಿ ವರ್ಗದ ಮನೆಗಳಿಗೆ ತಲಾ ಐದು ಲಕ್ಷ ರೂ. ಅನುದಾನ ಒದಗಿಸುವುದಾಗಿ ಆದೇಶಮಾಡಿ ಮೊದಲ ಕಂತಿನ ಪರಿಹಾರವಾಗಿ ಒಂದು ಲಕ್ಷ ರೂ. ಅನುದಾನವನ್ನು ಈಗಾಗಲೇ ಸಂತ್ರಸ್ಥರ ಖಾತೆಗೆ ಬಿಡುಗಡೆ ಮಾಡಿದೆ. ಆದರೆ ಎರಡನೇ ಕಂತಿನ ಅನುದಾನವನ್ನು ಬಿಡುಗಡೆಮಾಡುವ ಮೊದಲು ಸದರಿ ಎ ಮತ್ತು ಬಿ ವರ್ಗದ ಸಂತ್ರಸ್ಥರು ಹಾನಿಗೊಳಗಾದ ಮನೆಗಳ ತಳಪಾಯ ಹಂತದಿಂದ ಪುನರ್ ನಿರ್ಮಾಣ ಆರಂಭಿಸಿ ಈ ಕುರಿತ ಭಾವಚಿತ್ರವನ್ನು ಅಪ್‍ಮಾಡಿದಲ್ಲಿ ಎರಡನೇ ಕಂತಿನ ಅನುದಾನ ಬಿಡುಗಡೆಮಾಡುವ ಷರತ್ತು ನಿಗಧಿಪಡಿಸಲಾಗಿತ್ತು.
   ಈ ಷರತ್ತಿನ ಕುರಿತಂತೆ ಗ್ರಾಮಗಳಲ್ಲಿ  ಕೆಲವು ಫಲಾನುಭವಿಗಳು ಭಾಗಶಃ ಹಾನಿಗೊಳಗಾದ ಮನೆಗಳನ್ನು  ಪೂರ್ಣ ನೆಲಸಮ ಮಾಡಿ ತಳಪಾಯ ಹಂತದಿಂದಲೇ ನಿರ್ಮಿಸಬೇಕಾದಲ್ಲಿ ಐದು ಲಕ್ಷ ರೂ. ಅನುದಾನ ಸಾಕಾಗುವುದಿಲ್ಲ. ಇದಕ್ಕೆ 10 ರಿಂದ 20 ಲಕ್ಷ ರೂ. ಅನುದಾನ ಬೇಕಾಗುತ್ತದೆ. ಈ ಕಾರಣದಿಂದ ಹಾನಿಗೊಳಗಾದ ಭಾಗವನ್ನು ಮಾತ್ರ ಪುನರ್ ನಿರ್ಮಾಣ ಮಾಡಿಕೊಳ್ಳಲು ಅವಕಾಶಮಾಡಿಕೊಡಬೇಕು ಎಂಬ ಮನವಿ ಸರ್ಕಾರ ಸ್ಪಂದಿಸಿ ಪರಿಷ್ಕøತ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
   ಪರಿಷ್ಕೃತ ಆದೇಶದಂತೆ  ಎ ಮತ್ತು ಬಿ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವಿ ಹಾಗೂ ಪುನರ್ ನಿರ್ಮಾಣ ಮಾಡುವಂತಹ ಮನೆಗಳಿಗೆ ನಾಲ್ಕು ಹಂತಗಳಲ್ಲಿ ಐದು ಲಕ್ಷ ರೂ. ಅನುದಾನ ನೀಡಲಾಗುತ್ತದೆ ಹಾಗೂ ಭಾಗಶಃ ಹಾನಿಗೀಡಾದ ಮನೆಗಳ ದುರಸ್ಥಿ ಕಾರ್ಯಗನ್ನು ಕೈಗೊಳ್ಳಲು ಫಲಾನುಭವಿಗಳಿಗೆ ಮೂರು ಲಕ್ಷರೂ.ಗಳನ್ನು ಎರಡು ಹಂತದಲ್ಲಿ ಪಾವತಿಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
   ಹೊಸ ಮಾರ್ಗಸೂಚಿಯಂತೆ ಎ ಮತ್ತು  ‘ಬಿ’ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವಿ ಹಾಗೂ ಪುನರ್ ನಿರ್ಮಾಣ ಮಾಡುವಂತಹ ಮನೆಗಳಿಗೆ  ರೂ. 5 ಲಕ್ಷಗಳ ಪರಿಹಾರವನ್ನು ನಾಲ್ಕು ಹಂತವಾರು( ತಳಪಾಯ, ಕಿಟಕಿ, ಛಾವಣಿ ಮತ್ತು ಪೂರ್ಣ) ಫೋಟೋಗಳನ್ನು ಕಡ್ಡಾಯವಾಗಿ ಜಿಪಿಎಸ್ ಮುಖಾಂತರ ಅಳವಡಿಸಿದ ನಂತರ ಪಾವತಿಸಲಾಗುವುದು .ಭಾಗಶಃ ಹಾನಿಗೀಡಾ ಮನೆಗಳಿಗೆ ದುರಸ್ಥಿ ಕಾರ್ಯಗಳು, ಇತ್ಯಾದಿಗಳನ್ನು ಕೈಗೊಳ್ಳುವ ಸಲುವಾಗಿ ರೂ.3 ಲಕ್ಷಗಳಿಗೆ ಸೀಮಿತಕ್ಕೊಳಪಟ್ಟು ಪರಿಹಾರವನ್ನು ಎರಡು ಹಂತವಾರು ಫೋಟೋಗಳನ್ನು(ಮನೆ ಭಾಗಶಃ ಹಾನಿಗೊಳಗಾದ ಫೋಟೋ ಮತ್ತು ಮನೆ ದುರಸ್ಥಿ ಮಾಡಿಕೊಂಡು ನಂತರ ಫೋಟೋ) ಕಡ್ಡಾಯವಾಗಿ ಜಿಪಿಎಸ್ ಮುಖಾಂತರ ಅಳವಡಿಸಿದ ನಂತರ ಪಾವತಿಸಲಾಗುವುದು.
 
  ‘ಸಿ’ ವರ್ಗದ ಮನೆಗಳ ಪರಿಹಾರದ ಮೊತ್ತ 50 ಸಾವಿರ ರೂ.ಗಳಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು  ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link