ಹಾವೇರಿ :
ಸ್ವಾತಂತ್ರ್ಯ ಹೋರಾಟಗಾರ,ಯುವಕರ ಆಶಾಕಿರಣ ಹಾಗೂ ಭಾರತೀಯ ಮನಗೆದ್ದ ನೇತಾಜಿ ಸುಭಾಷ ಚಂದ್ರ ಭೋಸ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳವುದು ಅವಶ್ಯಕವಾಗಿದೆ ಎಂದು ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಶಿಶನಳ್ಳಿ ಹೇಳಿದರು.
ಇಲ್ಲಿನ ಇಜಾರಿಲಕಮಾಪೂರದಲ್ಲಿನ ನೇತಾಜಿ ನಗರದಲ್ಲಿ ನೇತಾಜಿ ಸುಭಾಷಚಂದ್ರ ಭೋಸ್ ಯುವಕ ಸಂಘದ ವತಿಯಿಂದ ಆಯೋಜಿಸಿದ ಸುಭಾಷಚಂದ್ರ ಭೋಸ್ 123 ನೇ ಜನ್ಮ ದಿನಾಚಾರಣೆಯಲ್ಲಿ ಅವರ ಭಾವಚಿತ್ರ ನಮನ ಸಲ್ಲಿಸಿ ಅವರು ಮಾತನಾಡಿದರು.
ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಬೇಕಾದರೆ ಮಾಹಾನ್ ವ್ಯಕ್ತಿಗಳ ತ್ಯಾಗ, ಬಲಿದಾನವಿದೆ. ಸುಭಾಷ ಚಂದ್ರ ಭೋಸರು ಬ್ರಿಟಿಷರ ತಂತ್ರ ಕುತಂತ್ರಗಳನ್ನು ತಿಳಿದುಕೊಂಡು ಇವರಿಗೆ ಕ್ರಾಂತಿ ಮಾರ್ಗವೇ ಸರಿಯಾದದ್ದು ಎಂದು ಯುವಕರ ಸೈನ್ಯ ಕಟ್ಟಲು ಮುಂದಾದರು.ಅವರು ಜೀವನವನ್ನು ಇತಿಹಾಸ ಮೂಲಕ ಎಲ್ಲರೂ ತಿಳಿದುಕೊಳ್ಳುವಂತಾಲಿ ಎಂದರು.
ವಕೀಲರಾದ ಬಸವರಾಜ ಹಾದಿಮನಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಪಡೆಲು ತ್ಯಾಗ ಮಾಡಿದ ಮಾಹಾನ್ ನಾಯಕರ ಸ್ಮರಣಾರ್ಥ ರಾಜಕೀಯ ವ್ಯಕ್ತಿಗಳು ತಮ್ಮ ಮನೆಯಲ್ಲಿ ಅವರ ಭಾವಚಿತ್ರ ಇಟ್ಟುಕೊಳ್ಳುವಂತಾಗಲಿ. ಕೇವಲ ಅವರ ಬಲಿದಾನದಿಂದ ಇಂದು ಅಧಿಕಾರ ಅನುಭವಿಸಿದರೆ ಸಾಲದು ಅವರು ಎಲ್ಲರಿಗೂ ಮಾದರಿಯಾಗುವಂತೆ ಜನಪ್ರತಿನಿಧಿಗಳು ಪಾಲಿಸುವಂತಾಗಲಿ ಎಂದು ಸುಭಾಷಚಂದ್ರ ಭೋಸ್ ಅವರ ಜೀವನಗಾಥೆ ತಿಳಿಸಿದರು.
ಡಾ|| ಗುಹೇಶ್ವರ ಪಾಟೀಲ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ಸುಭಾಷ ಚಂದ್ರ ಭೋಸರು ಕೆಚ್ಚದೆಯ ಶೌರ್ಯದಿಂದ ಕ್ರಾಂತಿಕಾರಕ ಹೋರಾಟ ಅಂದು ಅವಶ್ಯಕತೆ ಇದ್ದ ಕಾರಣ ದೇಶವನ್ನು ಬ್ರಿಟಿಷರಿಂದ ಮುಕ್ತ ಮಾಡಲು ಯುವ ಪಡೆ ಕಟ್ಟಿ ಬೆಳಿಸಿದರು.ಅವರ ಸಿದ್ದಾಂತ ಉತ್ತಮ ತತ್ವಗಳನ್ನು ಯುವ ಮಿತ್ರರು ಪಾಲಿಸಬೇಕಾಗಿದೆ ಎಂದರು.ತಹಶೀಲ್ದಾರ ಶಂಕರ ಜಿ.ಎಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯುವಕರಿಗೆ ಸುಭಾಷ ಚಂದ್ರ ಭೋಸರ ತತ್ವ ಪಾಲಿಸುವಂತೆ ಸಲಹೆ ನೀಡಿದರು.
ನೇತಾಜಿ ಸುಭಾಷಚಂದ್ರ ಭೋಸ್ ಯುವಕ ಸಂಘದ ಅಧ್ಯಕ್ಷ ಉಮರ ಅಜಾಖನವರ. ಮುಖಂಡರಾದ ಸಿದ್ದರಾಜ ಕಲಕೋಟಿ ಸಂಗೂರ ಈರಣ್ಣ.ನಾಗಪ್ಪ ಎರಿಮನಿ.ರವಿ ಕಬಾಡಿ.ರಾಮು ಮಾಳಗಿ.ಶ್ರೀಕಾಂತ ಪೂಜಾರ. ಹೊನ್ನಪ್ಪ. ದಾದಾಪೀರ. ಮೂಹನ್ .ರಾಘವೇಂದ್ರ ಕಬಾಡಿ.ಅಶೋಕ.ಮಹಾಂತೇಶ ಸೇರಿದಂತೆ ಯುವಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ