ಬೆಂಗಳೂರು:
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಹೆಚ್ಚಳ ಮಾಡಿ ಅಧಿಕೃತವಾಗಿ ಮಂಗಳವಾರದಿಂದ ಜಾರಿಗೆ ತರಲಾಗಿದೆ.
ಹೌದು, ನಿಮ್ಮ ಕುಟುಂಬದವರನ್ನು ರೈಲು ನಿಲ್ದಾಣಕ್ಕೆ ಬಿಡಲು ಬಂದರೆ, ಐದು ನಿಮಿಷಕ್ಕಿಂತ ಹೆಚ್ಚು ಸಮಯ ರೈಲ್ವೆ ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡಿದರೆ 25 ರೂ. ತೆರಬೇಕಾಗುತ್ತದೆ. ರೈಲ್ವೆ ನಿಲ್ದಾಣದಲ್ಲಿರುವ ಬ್ಯಾರಿಯರ್ ಆಕ್ಸೆಸ್ ಸಿಸ್ಟಂ ವಾಹನ ನಿಲ್ದಾಣಕ್ಕೆ ಬರುವ ಮತ್ತು ಹೊರಹೋಗುವ ವೇಳೆಯನ್ನು ದಾಖಲಿಸಿಕೊಳ್ಳುತ್ತದೆ. ಎಕ್ಸಿಟ್ ಗೇಟಿನಲ್ಲಿ ಶುಲ್ಕವನ್ನು ನೀಡಬೇಕಾಗುತ್ತದೆ.
ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಪ್ರತಿನಿತ್ಯ ಸುಮಾರು 2 ಸಾವಿರ ದ್ವಿಚಕ್ರ ವಾಹನಗಳು ಹಾಗೂ ಸುಮಾರು 600 ಕಾರುಗಳು ನಿಲುಗಡೆಯಾಗುತ್ತವೆ. 4 ಚಕ್ರದ ವಾಹನಗಳಿಗೆ ದಿನಕ್ಕೆ 300-400 ರೂ, ದ್ವಿಚಕ್ರ ವಾಹನಕ್ಕೆ 80 ರೂ ನಿಲುಗಡೆ ಶುಲ್ಕ ಪಾವತಿಸಬೇಕಾಗುತ್ತದೆ. ಟ್ಯಾಕ್ಸಿ ಹಾಗೂ ಇನ್ನಿತರೆ ವಾಣಿಜ್ಯ ವಾಹನಗಳು ಪ್ರತಿ ಗಂಟೆಗೆ 25 ರೂ ನೀಡಬೇಕು.
ಶುಲ್ಕ ಹೆಚ್ಚಳವಾದ ನಿಯಮವು ಎರಡು ದಿನಗಳ ಹಿಂದೆ ಜಾರಿಗೆ ಬಂದಿದ್ದರೂ ಕೂಡ ಅಧಿಕೃತವಾಗಿ ಮಂಗಳವಾರದಿಂದ ಜಾರಿಗೆ ತರಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ