ಶ್ರೀನಗರ:
ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಸೋಪೂರ್ ನಲ್ಲಿ ಪಾಕಿಸ್ಥಾನ ಮೂಲದ 8 ಲಷ್ಕರ್-ಎ-ತೋಯ್ಬಾ ಸಂಘಟನೆಯ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಉಗ್ರರನ್ನು ಅಯಿಜಾಜ್ ಮಿರ್, ಓಮರ್ ಮಿರ್, ತವ್ಸೀಪ್ ನಜರ್, ಇಮಿಟಿಯಾಜ್ ನಜಾರ್, ಓಮರ್ ಅಕ್ಬರ್, ಫೈಜಾನ್ ಲತೀಫ್, ದಣೀಶ್ ಹಬೀಬ್ ಮತ್ತು ಶೋಕಾತ್ ಅಹಮದ್ ಮಿರ್ ಎಂದು ಗುರುತಿಸಲಾಗಿದೆ.
Terror module of #Laskar-e- Toiba outfit involving 8 individuals arrested in #Sopore. Investigation under progress.@JmuKmrPolice @SoporePolice
— Kashmir Zone Police (@KashmirPolice) September 9, 2019
ಈ ಉಗ್ರರು ಭಾರತೀಯ ಸೇನಾ ಪಡೆಗಳ ಕ್ಯಾಂಪ್ ಮೇಲೆ ದಾಳಿ ನಡೆಸಲು ಒಳನುಸುಳಿ ಬಂದಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಉಗ್ರರು ಬಳಸಿದ್ದ ಕಂಪ್ಯೂಟರ್, ಪೋಸ್ಟರ್ಗಳ ತಯಾರಿಕೆಗೆ ಬಳಸಿದ್ದ ಇನ್ನಿತರ ಸಾಮಾಗ್ರಿಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
