ತುಮಕೂರು
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಗತಾನೆ ಜನಿಸಿದ ಹಸುಗೂಸನ್ನು ಅಕ್ರಮವಾಗಿ ಮತ್ತೊಬ್ಬರಿಗೆ ಹಸ್ತಾಂತರಿಸಿರುವ ಘಟನೆ ನಡೆದಿದ್ದು .ಈ ಬಗ್ಗೆ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಕುಣಿಗಲ್ ರಸ್ತೆಯಲ್ಲಿರುವ ಸೇವಾ ಆಸ್ಪತ್ರೆಗೆ ಕಳೆದ ಡಿ.13ರಂದು ಫಿರ್ದೋಸ್ ಎಂಬ ಮಹಿಳೆ ದಾಖಲಾಗಿ ಆಕೆಗೆ ಅಲ್ಲಿ ಹೆಣ್ಣು ಮಗು ಜನಿಸುತ್ತದೆ .ಈಕೆಯ ವಿಳಾಸ ಕೆಜಿ ಟೆಂಪಲ್ ಎಂದಾಗಿರುತ್ತದೆ . ಮಾರನೆಯ ದಿನವೇ ಆಕೆ ಆಸ್ಪತ್ರೆಯಿಂದ ಬಿಡುಗಡೆಹೊಂದುತ್ತಾರೆ . ಈ ನಡುವೆ ಸಜ್ಜದ್ ಪಾಶ ಎಂಬ ಹೆಸರಿನ ದಂಪತಿಗಳು ತಮ್ಮದೇ ಮಗು ಎಂದು ಹೇಳಿಕೊಂಡು ಮಗು ಹುಶಾರಿಲ್ಲದಿರುವ ಬಗ್ಗೆ ಜ.21ರಂದು ತುಮಕೂರು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಾರೆ.
ಮಗುವಿಗೆ ತಾಯಿ ಹಾಲಿನ ಬದಲಿಗೆ ಹೊರಗಿನ ಹಾಲು ಕುಡಿಸುತ್ತಿರುವುದು , ಇವರ ಹೇಳಿಕೆಗಳು ಅನುಮಾನ ಉಂಟಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ , ವೈದ್ಯರು ನಿಗಾ ವಹಿಸುತ್ತಾರೆ . ರಕ್ಷಣಾ ಘಟಕದ ವತಿಯಿಂದ ಈ ದಂಪತಿಗಳ ಚಲನವಲನದ ಬಗ್ಗೆ ಗಂಭೀರವಾಗಿ ನಿಗಾವಹಿಸಿದಾಗ ಸದರಿ ಮಗು ಈ ದಂಪತಿಗೆ ಸೇರಿದ್ದಲ್ಲಾ ಎಂಬುದು ಖಚಿತವಾಗುತ್ತಿದಂತೆಯೇ ದೂರು ನೀಡಲಾಗಿದೆ ಫಿರ್ದೋಸ್ ಎಂಬ ಮಹಿಳೆ ಯಾರು ಎಂಬುದು ಪತ್ತೆಯಾಗಿಲ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಾಸಂತಿ ಉಪ್ಪಾರ್ ಅವರ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಜೆಜೆ ಕಾಯ್ದೆ ಕಲಂ 81, ಐಪಿಸಿ ಕಾಯ್ದೆ ಕಲಂ 370 ,420 ಅನ್ವಯ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ . ಸೇವಾ ಆಸ್ಪತ್ರೆ, ಮಗುವನ್ನು ಕೊಟ್ಟಾಕೆ , ಪಡೆದವರ ವಿರುದ್ಧ ದೂರು ದಾಖಲಾಗಿದ್ದು ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದೆ . ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿರುವುದಾಗಿ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ,.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ