ಹಾವೇರಿ:
ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ದಿ,29 ಬುಧವಾರ ರಂದು ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಬಹಿರಂಗ ಪ್ರತಿಭಟನಾ ಸಮಾವೇಶ ಕಾರ್ಯಕ್ರಮವನ್ನು ಹಾವೇರಿಯ ಮುನಿಸಿಪಲ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಸಮಾವೇಶಕ್ಕೆ ಪಾಲ್ಗೊಂಡ ಜನರಿಗೆ ಹಣ್ಣು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು . ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮೈದಾನದಲ್ಲಿ ಬಿದ್ದ ಕಸ, ಕಡ್ಡಿಯನ್ನು ಸಂವಿಧಾನ ಸಂರಕ್ಷಣಾ ಸಮಿತಿಯ ಸದಸ್ಯರು ಇಂದು ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಪೂಜಾರ, ಅಕ್ಷತಾ ಕೆ ಸಿ, ಬಸವರಾಜ ಭೋವಿ, ಶೊಯೆಬ್ ಬಡಿಗೇರ್, ರಫೀಕ್ ಹತ್ತಿಕಾಳ್, ಮೆಹಬೂಬ್ ಅಲಿ ದೇವಿಹೊಸುರ, ಎಮ್ ಎನ್ ನಾಯಕ್, ನಾಗರಾಜ್ ಎಚ್ ಎಸ್, ಹಜರತ ಅಲಿ, ಮೆಹಬೂಬ್ ವಾಲಿಕಾರ್ ,ಹುಸೇನ್ ಸಾಬ್, ಸಾಬ್,ಮಹಮ್ಮದ್, ಗರೀಬ್ ಕಳ್ಳಿಹಾಳ ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ