ಬೆಂಗಳೂರು:
ಪೆಪ್ಪರ್‌ಮೆಂಟ್ ಅನ್ನು ಹೋಲುವ ಮಾದಕ ವಸ್ತು ತುಂಬಿದ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೇತೆಲ್ ಲೇಔಟ್ ನಿವಾಸಿ ಹೊರ ಮಾವು ಸಮೀಪದ ಬೇತೆಲ್ ಲೇಔಟ್‌ನ ನಿವಾಸಿ ಎಜಿಕೆ ಸೆಲೆಸ್ಟೈನ್ ಬಂಧಿತ ಆರೋಪಿ. ಈತ ವಿಸಾ ಪಡೆದು ಬೆಂಗಳೂರಿಗೆ ಬಂದಿದ್ದ ತಾನ್‍ಜೇನಿಯಾ ದೇಶದ ಪ್ರಜೆ. ಮಾದಕ ವಸ್ತು ಮಾರುವ ಕಾರ್ಯದಲ್ಲಿ ನಿರತನಾಗಿದ್ದ ಈತ ಬಾಡಿಗೆ ಮನೆಯೊಂದನ್ನು ಮಾಡಿ ಅಲ್ಲಿ ಎಕ್ಸ್‌ಟೆಸಿ ಎಂಬ ಮಾದಕ ವಸ್ತುವನ್ನು ಗ್ರಾಹಕರಿಗೆ ನೀಡುತ್ತಿದ್ದ.
ಈತನಿಂದ 20 ಲಕ್ಷ ಮೌಲ್ಯದ 500 ಎಕ್‍ಸ್ಟೆಸಿ ಮಾತ್ರೆಗಳು, ಹೊಂಡಾ ಸಿವಿಕ್ ಕಾರು, 2 ಮೊಬೈಲ್, ತೂಕದ ಯಂತ್ರ, 5 ಸಾವಿರ ಹಣವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಗುರಿಯಾಗಿಸಿಕೊಂಡು ಆರೋಪಿ ದಂಧೆ ನಡೆಸುತ್ತಿದ್ದ. ಇನ್ನು ವೀಸಾ ನಿಯಮ ಉಲ್ಲಂಘನೆ ಪ್ರಕರಣವನ್ನೂ ಪೊಲೀಸರು ಈತನ ಮೇಲೆ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ