ಹೊಸ ವಿವಾದ ಸೃಷ್ಠಿಸಿದ ದಿಗ್ವಿಜಯ್‌ ಸಿಂಗ್‌ ಹೇಳಿಕೆ….!

ಭೋಪಾಲ್:‌

     ಅಯೋಧ್ಯೆ ರಾಮಮಂದಿರದಲ್ಲಿ  ಪ್ರತಿಷ್ಠಾಪನೆ ಮಾಡಲಿರುವ ರಾಮಲಲ್ಲಾ ಮೂರ್ತಿ ಮಗುವಿನಂತೆ ಕಾಣುತ್ತಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌  ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

     ಈ ಸಂಬಂಧ ಟ್ವಿಟ್ಟರ್  ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ, ವಿವಾದಿತ ಹಾಗೂ ನಾಶಪಡಿಸಿದ ವಿಗ್ರಹ ಎಲ್ಲಿದೆ? ಎರಡನೇ ಪ್ರತಿಮೆಯ ಅಗತ್ಯವೇನು? ನಮ್ಮ ಗುರು ಶಂಕರಾಚಾರ್ಯ ಸ್ವಾಮಿ, ಸ್ವರೂಪಾನಂದ ಜಿ ಮಹಾರಾಜ್ ಕೂಡ ರಾಮನ ವಿಗ್ರಹವನ್ನು ಸ್ಥಾಪಿಸಲು ಸಲಹೆ ನೀಡಿದ್ದರು. ರಾಮಜನ್ಮಭೂಮಿ ದೇವಸ್ಥಾನ ಮಗುವಿನ ರೂಪದಲ್ಲಿರಬೇಕು. ತಾಯಿ ಕೌಶಲ್ಯೆಯ ಮಡಿಲಲ್ಲಿರಬೇಕು. ಆದರೆ ದೇವಾಲಯದಲ್ಲಿ ಕುಳಿತಿರುವ ವಿಗ್ರಹವು ಮಗುವಿನಂತೆ ಕಾಣುತ್ತಿಲ್ಲ ಎಂದು ಬರೆದಿದ್ದಾರೆ.

     ಈ ರೀತಿ ಬರೆದುಕೊಳ್ಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಬಿಜೆಪಿಗರು ಹಾಗೂ ರಾಮನ ಭಕ್ತರು ಸಿಡಿದೆದ್ದಿದ್ದಾರೆ.

    ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಮೊದಲು ಅಂದರೆ ಗುರುವಾರ ಅಯೋಧ್ಯೆಯ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಇರಿಸಲಾಯಿತು. ತಡರಾತ್ರಿ ಗರ್ಭಗುಡಿಯಲ್ಲಿ ನಡೆದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮುಸುಕಿನಿಂದ ಮುಚ್ಚಲ್ಪಟ್ಟ ವಿಗ್ರಹದ ಮೊದಲ ಫೋಟೋವನ್ನು ಬಹಿರಂಗಪಡಿಸಲಾಯಿತು.

    ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಟ್ರಸ್ಟ್‌ ಸದಸ್ಯ ಕಮಲೇಶ್ವರ್ ಚೌಪಾಲ್, ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗಳಿಗೆ ಯಾವುದೇ ಕಾರಣಕ್ಕೂ ಪ್ರಾಮುಖ್ಯತೆ ನೀಡಬೇಡಿ. ಅವರ ಹೇಳಿಕೆಗಳು ಯಾವಾಗಲೂ ಅಸಂಬದ್ದ ಆಗಿರುತ್ತದೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವ ರೀತಿ ಅವರು ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

     ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ, ಗುರುವಾರ ಅಯೋಧ್ಯೆಯ ದೇವಾಲಯದ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನು ಇರಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap