ಕಾಸರಗೋಡು:
ನೆರೆಯ ರಾಜ್ಯ ಕೇರಳದಲ್ಲಿ ಕನ್ನಡಿಗರು ಹೆಚ್ಚಿರುವ ಕಾಸರಗೋಡಿನಲ್ಲಿ ಕೊರೊನಾ ವೈರಸ್ ಓರ್ವ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಇಂದು ತಿಳಿದಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ಸೋಂಕು ತಗುಲಿದ ಮೂರನೇ ವ್ಯಕ್ತಿ ಇವರಾಗಿದ್ದು ಇವರು ಕೂಡಾ ಇತ್ತೀಚೆಗೆ ಚೀನಾದಿಂದ ತಾಯ್ನಾಡಿಗೆ ಮರಳಿದ್ದರು ಎನ್ನಲಾಗಿದೆ,ಇವರಿಗಿಂತಲೂ ಮೊದಲು ಚೀನಾದಿಂದ ಕೇರಳಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು.
ಪ್ರಸ್ತುತ ಅವರನ್ನು ಕಾಸರಗೋಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು,ಇವರು ಇತ್ತೀಚೆಗಷ್ಟೇ ಚೀನಾದ ವುಹಾನ್ ನಿಂದ ಕಾಸರಗೋಡಿಗೆ ಬಂದಿದ್ದರು ಎಂದು ವರದಿ ವಿವರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ