ಬೀಜಿಂಗ್:
ಕೊರೋನಾ ವೈರಸ್ ಬಗ್ಗೆ ಈ ಹಿಂದೆ ಪೊಲೀಸರು ಹಾಗೂ ವೈದ್ಯಕೀಯ ವಲಯಕ್ಕೆ ಎಚ್ಚರಿಕೆ ನೀಡಿದ್ದ ಲೀ ವೆನ್ ಲಿಯಾಂಗ್ ಎಂಬ ವೈದ್ಯ ಕೊರೋನಾ ವೈರಸ್’ಗೆ ಬಲಿಯಾಗಿದ್ದಾರೆ.
ಚೀನಾದಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್ ಈಗ ವಿಶ್ವಾದ್ಯಂತ ಹರಡುತ್ತಿದ್ದು, ಅದರ ಭೀತಿ ಇದೀಗ ಭಾರತದಲ್ಲೂ ಶುರುವಾಗಿದೆ. ಮಾರಣಾಂತಿಕ ಕೊರೊನಾ ವೈರಸ್ ಬಗ್ಗೆ ಮೊದಲ ಬಾರಿಗೆ ಚೀನಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ವೈದ್ಯ ಲಿ ವೆನ್ಲಿಯಾಂಗ್ ಇದೀಗ ಅದೇ ವೈರಸ್ನಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
34 ವರ್ಷದ ವೆನ್ಲಿಯಾಂಗ್ ಓರ್ವ ನೇತ್ರಶಾಸ್ತ್ರಜ್ಞ. ವುಹಾನ್ನ ಕೇಂದ್ರೀಯ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಡಿಸೆಂಬರ್ 30ರಲ್ಲಿ ತನ್ನ ಸ್ನೇಹಿತನಿಗೆ ಖಾಸಗಿ ಸಂದೇಶದ ಮೂಲಕ ಜಿಲ್ಲಾದ್ಯಂತ ಸೋಂಕು ಹರಡುತ್ತಿರುವುದಾಗಿ ತಿಳಿಸಿದ್ದರು. ಇದಾದ ಬಳಿಕ ಪೊಲೀಸರು ವೈದ್ಯನ ಬಂಧನ ಮಾಡಿದ್ದರು. ಇದೀಗ ಅದೇ ವೈರಸ್ನಿಂದ ಇವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಇಂದು ಬೆಳಿಗ್ಗೆ 2:58 ಕ್ಕೆ ವೈದ್ಯ ಲಿ ವೆನ್ಲಿಯಾಂಗ್ ನಿಧನರಾದರು ಎಂದು ಕೆಲಸ ಮಾಡುತ್ತಿದ್ದ ಹುಬೈ ಪ್ರಾಂತ್ಯದ ವುಹಾನ್ ಸೆಂಟ್ರಲ್ ಆಸ್ಪತ್ರೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/02/d634a4a7e61f05f0cb0e40c86d7.gif)