ದಾವಣಗೆರೆ :
ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡುತ್ತಾ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ತಾಲೂಕಿನ ಮಾಗನಹಳ್ಳಿ ಯಲ್ಲಿ ನಡೆದಿದೆ.
ನಾಗರಾಜು ಅಲಿಯಾಸ್ ರಾಜು (34) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ಎರಡು ಮದುವೆ ಮಾಡಿಕೊಂಡಿದ್ದು, 3 ಜನ ಹೆಣ್ಣು ಮಕ್ಕಳಿದ್ದಾರೆ. ಮೊದಲನೇ ಹೆಂಡತಿ ಬಿಟ್ಟು ಹೋಗಿದ್ದು, ಮತ್ತೊಂದು ಮದುವೆ ಮಾಡಿಕೊಂಡಿದ್ದ.
ಆದರೆ ಕೆಲ ದಿನಗಳ ಹಿಂದೆ ಎರಡನೇ ಹೆಂಡತಿಯ ಜೊತೆ ಕೂಡ ಜಗಳವಾಡಿದ್ದ. ನಂತರ ಎರಡನೇ ಪತ್ನಿಯ ಜೊತೆಗೂ ನಾಗರಾಜು ದೂರವಾಗಿದ್ದ. ಅದೇ ಯೋಚನೆಯಲ್ಲಿ ನಾಗರಾಜು ಮದ್ಯಪಾನ ವ್ಯಸನಿಯಾಗಿದ್ದನು. ಇದರಿಂದ ಮನನೊಂದ ನಾಗರಾಜ್ 3 ದಿನಗಳ ಹಿಂದೆ ನೇಣು ಬಿಗಿದುಕೊಂಡಂತೆ ವಿಡಿಯೋವನ್ನು ಮಾಡಿ ಅದನ್ನು ಟಿಕ್ಟಾಕ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣು ಬಿಗಿದುಕೊಂಡ ವಿಡಿಯೋ ಟಿಕ್ಟಾಕ್ನಲ್ಲಿ ಈಗ ಸಾಕಷ್ಟು ವೈರಲ್ ಆಗಿದೆ.
ನಾಗರಾಜನ ಈ ಹುಚ್ಚಾಟಕ್ಕೆ ಆತನ 3 ಮಕ್ಕಳು ಅನಾಥರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ