`SC-ST’ ತಿದ್ದುಪಡಿ ಕಾಯ್ದೆ-2018 : ಸುಪ್ರೀಂನಿಂದ ಮಹತ್ವದ ತೀರ್ಪು!!

ನವದೆಹಲಿ: 

     ಹಿಂದುಳಿದ ವರ್ಗ ಮತ್ತು ಹಿಂದುಳಿದ ಪಂಗಡ(ಎಸ್ ಸಿ, ಎಸ್ ಟಿ) ತಿದ್ದುಪಡಿ ಕಾಯ್ದೆ 2018ರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಸೋಮವಾರ ಎತ್ತಿಹಿಡಿದಿದೆ.

      ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು,  ತಿದ್ದುಪಡಿ ಕಾಯ್ದೆಯ ಪ್ರಕಾರ ದೂರು ಬಂದ ಕೂಡಲೇ ಎಫ್ ಐಆರ್ ದಾಖಲಿಸಲಾಗುವುದು ಮತ್ತು ಬಂಧಿಸಲಾಗುವುದು.  ಈ ಕಾನೂನಿನಡಿಯಲ್ಲಿ ಬಂಧನಕ್ಕೆ ಮುಂಚಿತವಾಗಿ ಪ್ರಾಥಮಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಎಫ್ ಐಆರ್ ದಾಖಲಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಅನುಮತಿಯೂ ಬೇಕಾಗಿಲ್ಲ ಎಂದು ಆದೇಶ ನೀಡಿದೆ.

      ಎಸ್ಸಿ-ಎಸ್ಟಿ ಕಾನೂನಿನ ದುರುಪಯೋಗದ ಹಿನ್ನೆಲೆಯಲ್ಲಿ ಬಂದ ದೂರಿನ ನಂತರ ಕೋರ್ಟ್ ಎಫ್ ಐಆರ್ ಮತ್ತು ಬಂಧನ ಕ್ರಮಕ್ಕೆ ಮಾರ್ಚ್ 20,2018 ರಂದು ತಡೆ ನೀಡಿತ್ತು. ಇದೀಗ ಎಸ್ಸಿ-ಎಸ್ಟಿ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link