ಒನ್ ವೇ ರಸ್ತೆಯಲ್ಲಿ ಸವಾರಿ ಮಾಡುವವರ ವಿರುದ್ದ ಕ್ರಮಕ್ಕೆ ಮುಂದಾದ ಟ್ರಾಫಿಕ್ ಸಿಬ್ಬಂದಿ

ಬೆಂಗಳೂರು

     ನಗರದಲ್ಲಿ ಎಕಮುಖ(ಒನ್‌ವೇ)ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸುವುದು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರು ಸಂಚಾರ ಪೊಲೀಸರು ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದಾರೆ.ಎಕಮುಖ ರಸ್ತೆಯ ವಿರುದ್ಧ ವಾಹನಗಳನ್ನು ಚಲಾಯಿಸುವ ಪ್ರಕರಣಗಳು ಹೆಚ್ಚಾಗಿ ಅಪಘಾತ ಸುಗಮ ಸಂಚಾರ ಅಡ್ಡಿ ಇನ್ನಿತರ ತೊಂದರೆಗಳಾಗುತ್ತಿದ್ದು ಇದನ್ನು ತಪ್ಪಿಸಲು ಕ್ರಿಮಿನಲ್ ಪ್ರಕರಣ ದಾಖಲಿಸುವ ಅಸ್ತ್ರ ಪ್ರಯೋಗಿಸಲಿದ್ದಾರೆ.

     ಕಳೆದ ಫೆ.4ರಂದು ಎಲೆಕ್ಟ್ರಾನಿಕ್ ಸಿಟಿ ಟೋಲ್ ಸಮೀಪ ಒನ್ ವೇ ನಲ್ಲಿ ಬಂದ ಬೈಕ್ ಸವಾರನ ವಿರುದ್ಧ ಐಪಿಸಿ 1860 (ಸೆಕ್ಷನ್ 279) ರಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಿ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೂರ್ವ ವಿಭಾಗದ(ಸಂಚಾರ) ಡಿಸಿಪಿ ನಾರಾಯಣ್ ತಿಳಿಸಿದ್ದಾರೆ

      ಇಲ್ಲಿಯವರೆಗೆ ಒನ್ ವೇನಲ್ಲಿ ವಾಹನ ಚಲಾಯಿಸಿದರೆ ದಂಡ ವಿಧಿಸಿ ವಾಹನವನ್ನು ಬಿಟ್ಟು ಕಳಿಸುತ್ತಿದ್ದು ಈಗ ವಾಹನ ವಶಕ್ಕೆ ಪಡೆದು ಕ್ರಿಮಿನಲ್ ಪ್ರಕರಣ ದಾಖಲು ಮಾಡುತ್ತಿದ್ದೇವೆ ಪ್ರಕರಣ ದಾಖಲಾಗಿ ಎಫ್‌ಐಆರ್ ಆದರೆ, ನ್ಯಾಯಾಲಯದ ಮುಂದೆ ಆತ ಹಾಜರಾಗಬೇಕು.ನಗರದಲ್ಲಿ ಒನ್ ವೇನಲ್ಲಿ ಸಂಚಾರ ನಡೆಸುವುದು ಕೆಲವು ಸವಾರರಿಗೆ ಫ್ಯಾಷನ್ ಆಗಿ ಬಿಟ್ಟಿದೆ. ಬೇಗ ತಲುಪಬೇಕು ಎಂದು ಒನ್ ವೇನಲ್ಲಿ ನುಗ್ಗಿ ಎದುರಿನಿಂದ ಬರುವ ಸವಾರರ ಪ್ರಾಣಕ್ಕೂ ಕುತ್ತು ತರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link