ಬೆಂಗಳೂರು
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್‌ನನ್ನು ಆಕೆಯ ಪ್ರಿಯಕರ ಹಾಗೂ ಸ್ನೇಹಿತರು ಹಿಡಿದು ಧರ್ಮದೇಟು ನೀಡಿ ಸುಬ್ರಮಣ್ಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಧರ್ಮದೇಟು ಕೊಟ್ಟು ಒಪ್ಪಿಸಿದ ಪುತ್ತೂರು ಡಿಪೋದ ಕಂಡಕ್ಟರ್ ಇಸುಬ್‌ಅಲಿಯನ್ನು ಬಂಧಿಸಿ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿಯು ಧರ್ಮಸ್ಥಳ ಡಿಪೋದಲ್ಲಿದ್ದಾಗಲೂ ಇಂತಹುದೇ ಕೃತ್ಯ ನಡೆಸಿ ಸೇವೆಯಿಂದ ಅಮಾನತ್ತಾಗಿರುವುದು ಕಂಡುಬಂದಿದೆ.ಪುತ್ತೂರಿಗೆ ಹೋಗಲು ಯುವತಿಯು ಕಳೆದ ಮೂರು ದಿನಗಳ ಹಿಂದೆ ಯಶವಂತಪುರದಿಂದ ಬಸ್ ಹತ್ತಿದ್ದಾರೆ ಯುವತಿಗೆ ಟಿಕೆಟ್ ನೀಡುವ ನೆಪದಲ್ಲಿ ಆರೋಪಿ ಕಂಡಕ್ಟರ್ ಪಕ್ಕದಲ್ಲಿ ಬಂದು ಕುಳಿತು ನಂತರ ಅಸಭ್ಯವಾಗಿ ವರ್ತಿಸ ತೊಡಗಿದ್ದಾನೆ.
ಯುವತಿಯ ಪ್ರತಿರೋಧ ತೋರಿದರೂ ಆತ ಮಾತ್ರ ಆಕೆಯ ಕೈ ಹಿಡಿದುಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದರಿಂದ ಬೇಸತ್ತ ಮಹಿಳೆ ಕಂಡಕ್ಟರ್‌ಗೆ ಗೊತ್ತಾಗದಂತೆ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಕಂಡಕ್ಟರ್ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗಿತ್ತು ವಿಡಿಯೋ ನೋಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ತನಿಖೆಗೆ ಆದೇಶಿಸಿದಾಗ ಪ್ರಾಥಮಿಕ ತನಿಖೆಯಲ್ಲಿ ಕಂಡಕ್ಟರ್ ಪುತ್ತೂರು ಡಿಪೋದಲ್ಲಿ ಕೆಲಸ ಮಾಡುವುದು ಪತ್ತೆಯಾಗಿದೆ.ಯುವತಿಯು ಅಸಭ್ಯ ವರ್ತನೆ ಬಗ್ಗೆ ತನ್ನ ಪ್ರಿಯಕರನಿಗೂ ವಿಷಯ ತಿಳಿಸಿದ್ದರು ಅದೇ ಬಸ್ ಭಾನುವಾರ ರಾತ್ರಿ ನಗರಕ್ಕೆ ಬಂದಾಗ ಕಾದು ಕುಳಿತಿದ್ದ ಪ್ರಿಯಕರ ಹಾಗೂ ಆತನ ಸ್ನೇಹಿತರು ಇಸುಬ್ ಅಲಿಯನ್ನು ಹಿಡಿದು ಧರ್ಮದೇಟು ಕೊಟ್ಟು ಸುಬ್ರಮಣ್ಯನಗರ ಪೊಲೀಸರಿಗೆ ಒಪ್ಪಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








