ಅಹಮದಾಬಾದ್:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2 ದಿನಗಳ ಭಾರತದ ಭೇಟಿ ಇಂದಿನಿಂದ ಆರಂಭಗೊಳ್ಳಲಿದ್ದು, ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
#WATCH Prime Minister Narendra Modi hugs US President Donald Trump as he receives him at Ahmedabad Airport. pic.twitter.com/rcrklU0Jz8
— ANI (@ANI) February 24, 2020
ವಾಷಿಂಗ್ಟನ್‍ನಿಂದ ಏರ್‍ಪೊರ್ಸ್ ಒನ್ ವಿಶೇಷ ವಿಮಾನದಲ್ಲಿ ಗುಜರಾತ್‍ನ ಅಹಮದಾಬಾದ್‍ನ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಪರವಾಗಿ ಪ್ರಧಾನಿ ಮೋದಿ ಭವ್ಯ ಸ್ವಾಗತ ನೀಡಿದರು. ಹೃದಯಪೂರ್ವಕವಾಗಿ ಟ್ರಂಪ್ ಅವರನ್ನು ಸ್ವಾಗತಿಸಿದ ಮೋದಿ, ಮಹಾ ಶಕ್ತಿಶಾಲಿ ದೇಶದ ನಾಯಕನನ್ನು ಆಲಂಗಿಸಿಕೊಂಡರು.
ಟ್ರಂಪ್ ಅವರೊಂದಿಗೆ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್. ಪುತ್ರಿ ಇವಾಂಕಾ ಟ್ರಂಪ್ ಹಾಗೂ ಅಲ್ಲಿನ ಉನ್ನತ ಮಟ್ಟದ ನಿಯೋಗಕ್ಕೂ ಅದ್ದೂರಿ ಸ್ವಾಗತ ಕೋರಲಾಯಿತು. ಭಾರತದ ನೆಲವನ್ನು ಸ್ಪರ್ಶಿಸಿದ ಕೂಡಲೇ ಅಮೆರಿಕ ರಾಷ್ಟ್ರಾಧ್ಯಕ್ಷರು ಹಸನ್ಮುಖರಾಗಿ ಎಲ್ಲರತ್ತ ಕೈಬೀಸಿದರು.
US President Donald Trump, First Lady Melania Trump, and PM Narendra Modi pay tribute to Mahatma Gandhi at Sabarmati Ashram pic.twitter.com/9aHryJscP2
— ANI (@ANI) February 24, 2020
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟ್ರಂಪ್ ಮತ್ತು ಮೋದಿ ಸಬರಮತಿ ಆಶ್ರಮಕ್ಕೆ ತೆರಳಿ ಅಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಬಳಿಕ ಟ್ರಂಪ್ ಮತ್ತು ಮೋದಿ ವಿಶೇಷ ವಾಹನದಲ್ಲಿ ಸುಮಾರು 22 ಕಿ.ಮೀ. ಭರ್ಜರಿ ರೋಡ್ ಶೋ ನಡೆಸಲಿದ್ದು, ನಂತರ ಅಹಮದಾಬಾದ್‍ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಬೃಹತ್ ಕಾರ್ಯಕ್ರಮದಲ್ಲಿ ರಾಷ್ಟ್ರಾಧ್ಯಕ್ಷರು ಮತ್ತು ಪ್ರಧಾನಿ ಭಾಗವಹಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ