ಶಿಗ್ಗಾವಿ :
ಪತ್ರಿಕಾರಂಗ ಎಂಬ ಪಕ್ಷಿಗೆ ವಿತರಕರು ರೆಕ್ಕೆ ಪುಕ್ಕಗಳಿದ್ದಂತೆ ಹೀಗಾಗಿ ವಿತರಕರ ಸಹಾಯದಿಂದ ಇಂದು ಕೆಲ ಪತ್ರಿಕೆಗಳು ವಿವಿಧ ಸ್ಥಾನಗಳಿಗೆ ಏರಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಗ್ಗಾವಿ ತಾಲೂಕ ಪತ್ರಿಕಾ ವಿತರಕರ ಸಂಘದ ಉದ್ಘಾಟನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಭೇದ ಭಾವ ಇಲ್ಲದೆ ಸಮಚಿತ್ತದಿಂದ ಸತ್ಯವನ್ನು ತೋರಿಸುವ ಮತ್ತು ಬರೆಯುವಂತಹ ಕೆಲಸವನ್ನು ಕಲ್ಪನೆಗೂ ಮೀರಿ ಅದ್ಭುತವಾದ ತಾಂತ್ರೀಕತೆಯ ಜೋಡನೆಯಿಂದ ಮಾಧ್ಯಮಗಳು ಇಂದು ನಿಖರವಾಗಿ ದಕ್ಷತೆಯಿಂದ ಪತ್ರಿಕೆಗಳು ಕೆಲಸ ಮಾಡುತ್ತಿವೆ, ರಾಜಕಾರಣ ಮತ್ತು ಪತ್ರಿಕಾರಂಗವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಪತ್ರಿಕೆಗಳಿಲ್ಲದೆ ರಾಜಕಾರಣ ನಡೆಯುವುದಿಲ್ಲ ರಾಜಕೀಯ ಇಲ್ಲದೆ ಪತ್ರಿಕೆಗಳು ಸಹ ಸಪ್ಪೆಯಾಗುತ್ತವೆ. ಸರ್ಕಾರದ ಎನೇ ನಿರ್ಣಯಗಳನ್ನು ತೆಗೆದುಕೊಂಡರು ಅದನ್ನು ಜನರಿಗೆ ಮುಟ್ಟಿಸಲು ಪತ್ರಿಕೆಗಳು ಬೇಕು. ಜನರಿಗೆ ನಮ್ಮ ಉದ್ದೇಶಗಳು ಮುಟ್ಟದಿದ್ದರೆ ನಮ್ಮ ಸರ್ಕಾರಗಳ ಉದ್ದೇಶ ಈಡೇರುವದಿಲ್ಲ ಎಂದರು.
ಪ್ರತಿ ದಿನವು ಬೇರೆ ಬೇರೆ ವರ್ಗಗಳ ಜನರ ಆಸೆ ಆಕಾಂಕ್ಷೆಗಳನ್ನು ಸರಿಯಾದ ರೀತಿಯಲ್ಲಿ ಬಿಂಬಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ, ಇತ್ತೀಚೆಗೆ ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಪತ್ರಿಕೆ ಓದುಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ, ಈ ಮೊದಲಿನಿಂದಲೂ ಪತ್ರಿಕಾ ಸಂಘಗಳಿಗೆ ಬೆಂಬಲ ಕೊಡುತ್ತಾ ಬಂದಿದ್ದೇವೆ. ಮುಂದೆ ಸಹ ಕೊಡುತ್ತೇವೆ. ಇದಲ್ಲದೆ ಸರ್ಕಾರ ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಬಸ್ ಪಾಸ್, ಆರೋಗ್ಯ ವಿಮೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಈ ಬಾರಿಯ ಬಜೆಟ್‍ನಲ್ಲಿ ಅನುಕೂಲ ಮಾಡಿಕೊಡುವದಕ್ಕೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ನಿಮ್ಮ ಮನವಿಗೆ ನ್ಯಾಯ ಒದಗಿಸುತ್ತೇನೆ ಎಂದರು.
ಮಾಜಿ ವಿ.ಪ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಪತ್ರಿಕಾರಂಗ ದೇಶದ ನಾಲ್ಕನೇಯ ಮಹತ್ವದ ಅಂಗವಾಗಿದ್ದು, ತಮ್ಮದೆ ಆದ ಕಾರ್ಯರೂಪವನ್ನು ತಳಮಟ್ಟದಿಂದ ಮಾಡುತ್ತಿದೆ. ಎಲ್ಲ ಕಷ್ಟಗಳನ್ನು ಮೀರಿ ಕೆಲಸ ಮಾಡುತ್ತಿರುವ ಪತ್ರಿಕೆ ಮತ್ತು ವಿತರಕರು ನಿತ್ಯ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಮಾತನಾಡಿ ಪತ್ರಕರ್ತರ ಕೊಂಡಿಯಾಗಿ ಕಾರ್ಯನಿರ್ವಹಿಸುವ ವಿತರಕರು ಕಷ್ಟದಲ್ಲಿದ್ದು ಅವರ ಏಳಿಗೆ ಬಗ್ಗೆ ಯೋಚಿಸುವ ಅವಶ್ಯಕತೆ ಇದ್ದು ತಾಲೂಕಿನಲ್ಲಿ ಪತ್ರಕರ್ತರಿಗೆ ಮತ್ತು ಹಿರಿಯ ವಿತರಕರ ಒಂದು ನಗರವನ್ನು ಹುಟ್ಟು ಹಾಕುವ ಅವಶ್ಯಕತೆ ಇದೆ, ಅದಕ್ಕಾಗಿ ನಾನೂ ಸಾಹಿತ ಸಹಾಯ ಮಾಡಲು ಮುಂದೆ ಇದ್ದು ಅದಕ್ಕಾಗಿ ನನ್ನ ವಯಕ್ತಿಕ ಎರಡು ಲಕ್ಷ ರೂಪಾಯಿಗಳನ್ನ ದೇಣಿಗೆಯಾಗಿ ನೀಡುತ್ತೇನೆ ಎಂದರು.
ಶಿಗ್ಗಾವಿ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮಿಗಳು, ಗಂಜಿಗಟ್ಟಿಯ ಶಿವಲಿಂಗೇಶ್ವರ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ನೀರಲಗಿ ಅವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ವಿತರಕರಾದ ತಮ್ಮಣ್ಣ ಜೋಶಿ, ರಂಗಣ್ಣ ದೇಶಪಾಂಡೆ, ಗಾಂಧಿ ಹೆಸರೂರ, ಎಚ್.ಎನ್.ನದಾಫ, ಸುಭಾಷ ಚವ್ಹಾಣ, ಬಸವರಾಜ ಮೆಳ್ಳೆಗಟ್ಟಿ, ಮುದಕಪ್ಪ ವನಹಳ್ಳಿ, ಸಲೀಮ ಶೇಖ್ ಹಾಗೂ ಸಾಧಕರಾದ ರಾಜೇಸಾಬ ನದಾಫ, ಸಹದೇವಪ್ಪ ಕಮಡೊಳ್ಳಿ, ಪಕ್ಕಿರಪ್ಪ ಕಟ್ಟಿಮನಿ, ಕೊಟ್ರೇಶ ಮಾಸ್ತರ ಬೆಳಗಲಿ, ಡಾ. ಹಣಮಂತಪ್ಪ ಪಿ.ಎಚ್ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ಶಿವಾನಂದ ಮ್ಯಾಗೇರಿ, ಪತ್ರಕರ್ತ ಎಮ್. ವಿ. ಗಡಾದ ಮಾತನಾಡಿದರು. ಪತ್ರಕರ್ತ ಸುಧಾಕರ ದೈವಜ್ಞ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಕರ್ತ ಬಸವರಾಜ ಹಡಪದ ಸ್ವಾಗತಿಸಿದರು. ತಾಪಂ ಅದ್ಯಕ್ಷೆ ಪಾರವ್ವ ಆರೇರ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, ಪತ್ರಕರ್ತರಾದ ಬಿ. ಎಸ್. ಹಿರೇಮಠ, ಪಿ. ಎಂ. ಸತ್ಯಪ್ಪನವರ, ಸುರೇಶ ಯಲಿಗಾರ, ಮಂಜುನಾಥ ಕಮ್ಮಾರ, ಜ್ಞಾನೇಶ್ವರ ಮಾಳವದೆ, ಪರಮೇಶ ಲಮಾಣಿ, ಬಸವರಾಜ ಹೊನ್ನಣ್ಣವರ, ರವಿ ಉಡುಪಿ, ಶಿದ್ರಾಮಗೌಡ ಮೆಳ್ಳಾಗಟ್ಟಿ, ಜ್ಞಾನೋಬಾ ಮಾಳವದೆ, ವಿವಿಧ ಮುಖಂಡರಾದ ಪ್ರಕಾಶ ಹಾದಿಮನಿ, ಶಿವಾನಂದ ಬಾಗೂರ, ಗಂಗಣ್ಣ ಸಾತಣ್ಣವರ, ಭೂಪಾಲ ಪಾಯಣ್ಣವರ, ಬಸನಗೌಡ ಮೇಲಿನಮನಿ, ದೇವಣ್ಣ ಚಾಕಲಬ್ಬಿ, ವೀರೇಶ ಆಜೂರ, ವರುಣ ಪಾಟೀಲ, ಯಲ್ಲಪ್ಪ ಬಗಾಡೆ, ಇತರ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ