ನಾನು ಪಕ್ಷದಲ್ಲಿ ಕೆಲಸವಿಲ್ಲದ ಕಾರ್ಯಾಧ್ಯಕ್ಷನಾಗಿದ್ದೆನೆ : ಮಧು ಬಂಗಾರಪ್ಪ

ಬೆಂಗಳೂರು

    ಜೆಡಿಎಸ್ ಪಕ್ಷವು ಅಧಿಕಾರಿದಲ್ಲಿದ್ದ ಸಮಯದಲ್ಲಿ ನಾಯಕರುಗಳು ಪಕ್ಷದ ಕೆಳಹಂತದ ಮುಖಂಡರು ಕಾರ್ಯಕರ್ತರವನ್ನು ಸರಿಯಾಗಿ ನಡೆಸಿಕೊಲ್ಳದೇ ತಪ್ಪು ಹಾದಿಗೆ ಕೊಂಡೊಯ್ದರು ನಾನು ಪಕ್ಷದಲ್ಲಿ ಕೆಲಸವಿಲ್ಲದ ಕಾರ್ಯಾಧ್ಯಕ್ಷನಾಗಿದ್ದೆನೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ.

    ನಗರದ ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ಸ್ನೇಹಿತರು ಹಿತೈಷಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ನಾಯಕರ ವರ್ತನೆಯಿಂದ ಪಕ್ಷದ ಹಲವು ಮುಖಂಡರು ಕಾರ್ಯಕರ್ತರು ನೊಂದಿದ್ದಾರೆ ಎಂದರು.
ಜೆಡಿಎಸ್ ಪಕ್ಷದಲ್ಲಿ ವ್ಯವಸ್ಥೆಯೇ ಸರಿಯಿಲ್ಲ ನಾನು ಬಂಗಾರಪ್ಪನ ಮಗ ಪಕ್ಷ ಬಿಡುವಾಗ ಹೇಳಿಯೇ ಹೋಗುತ್ತೇನೆ ಎನ್ನುವ ಮೂಲಕ ಜೆಡಿಎಸ್ ತೊರೆಯುವ ತಮ್ಮ ಇಂಗಿತವನ್ನು ಮತ್ತೊಮ್ಮೆ ಸ್ಷಷ್ಟಪಡಿಸಿದ್ದಾರೆ.

    ಜೆಡಿಎಸ್ ಪಕ್ಷ ಕಾರ್ಯಕರ್ತರವ ವಿಶ್ವಾಸ ಕಳೆದುಕೊಂಡಿದೆ ಎನ್ನುವ ಮೂಲಕ ಪರೋಕ್ಷವಾಗಿ ಪಕ್ಷದ ನಾಯಕರ ಮೇಲೆ ವಾಗ್ದಾಳಿಯನ್ನು ನಡೆಸಿದ ಅವರು ಜೆಡಿಎಸ್ ಪಕ್ಷ ನಾಯಕರನ್ನು ಸೃಷ್ಟಿ ಮಾಡುತ್ತಿದೆ, ಆದರೆ ಆ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

    ಮಾಜಿ ಸಚಿವ ಎಚ್ ವಿಶ್ವನಾಥ್ ಅವರು ಜೆಡಿಎಸ್ ಪಕ್ಷ ಬಿಡುವಾಗ ಅವರೊಂದಿಗೆ ಇದ್ದೆ. ಅವರೊಂದಿಗೆ ಇದ್ದು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೆ. ಅವರಿಗೆ ಜೆಡಿಎಸ್ ಪಕ್ಷ ತೊರೆಯುವಂತಹ ಸಂದರ್ಭ ಏನೂ ಬಂದಿತ್ತೊ ಗೊತ್ತಿಲ್ಲ. ಆದರೆ ಮಾಜಿ ಸಚಿವ ಎಚ್ ವಿಶ್ವನಾಥ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಧ್ಯೆ ತಂದಿಡುವ ಪ್ರಯತ್ನವನ್ನು ಪಕ್ಷದಲ್ಲಿಯೇ ಕೆಲವರು ಮಾಡಿದ್ದರು ಎಂಬ ಗಂಭೀರ ಆರೋಪವನ್ನು ಮಧು ಬಂಗಾರಪ್ಪ ಮಾಡಿದ್ದಾರೆ.

   ಬೆಂಗಳೂರು ಜಿಲ್ಲಾ ಜೆಡಿಎಸ್ ಯುವಕ ಘಟಕ ಅಧ್ಯಕ್ಷನಾಗಿದ್ದ ರಮೇಶ್ ಗೌಡ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿದ್ದು ಪಕ್ಷದ ಬೆಳವಣಿಗೆ ಯುವುದೇ ಕೊಡುಗೆ ನೀಡದ ಆತನನ್ನು ವಿಧಾನ ಪರಿಷತ್ ಸದಸ್ಯನಾಗಿ ನೇಮಿಸಲಾಗಿದೆ ಕೂಡಲೇ ಆತನನ್ನು ಸದಸ್ಯ ಸ್ಥಾನದಿಂದ ಕೆಳಗಿಳಿಸಿ ಅರ್ಹರಿಗೆ ನೀಡಿ ಎಂದು ನಾಯಕರರನ್ನು ಒತ್ತಾಯಿಸಿದರು.

    ಮಾಜಿ ಶಾಸಕರಾದ ಕೋನರೆಡ್ಡಿ, ವೈಎಸ್ ವಿದತ್ತಾ, ಪ್ರಕಾಶ್ ಅವರು ಪರಿಷತ್ ಸದಸ್ಯ ಸ್ಥಾನಕ್ಕೆ ಅರ್ಹರಾಗಿದ್ದರು .ಆದರೆ, ದುರಂತ ನೋಡಿ, ಜೆಡಿಎಸ್ ನಲ್ಲಿ ಕ್ರಿಮಿನಲ್ ಗಳಿಗೆ ಮಹತ್ವ ಸ್ಥಾನ ಸಿಕ್ಕಿತು. ಇದರಿಂದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದರು ಪಕ್ಷದಲ್ಲಿನ ಅನೇಕ ವಿಚಾರಗಳಲ್ಲಿ ಕುಮಾರಣ್ಣನ ಮನಸ್ಸಿಗೆ ನೋವಾಗುವಂತೆ ನಡೆದಿದೆ ಎಂದು ನುಡಿದರು.

   ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿರುವುದು ಪಕ್ಷದಲ್ಲಿನ ಅನೇಕ ವಿಚಾರಗಳ ಬಗ್ಗೆ ಖುದ್ದು ಕುಮಾರಸ್ವಾಮಿ ಅವರಿಗೇ ಹೇಳಿದರೂ ಅವರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ನಾನು ಕೆಲವೇ ಮತಗಳ ಅಂತರಿಂದ ಸೋಲು ಕಂಡೆ, ಹಾಗಂತ ನಾನು ಸಂಕಟ ಪಡಲಿಲ್ಲ ನನ್ನ ಸೋಲಿನಿಂದ ಕಾರ್ಯಕರ್ತರಿಗೆ ನೋವಾಗಿದೆ. ಆದರೆ, ನಾನು ನನ್ನ ತಂದೆಯಿಂದ ಸಾಕಷ್ಟು ಕಲಿತಿದ್ದೇನೆ. ಸೋಲು ಗೆಲುವು ತಂದೆಯಿಂದ ಕಲಿತಿದ್ದೇನೆ ಎಂದು ಹೇಳಿದರು.

   ಶಾಸಕರಾಗಿದ್ದ ಹೆಚ್.ವಿಶ್ವನಾಥ್, ಗೋಪಾಲಯ್ಯ ಸೇರಿ ಮತ್ತೊಬ್ಬ ನಾಯಕ ಪಕ್ಷ ಬಿಟ್ಟು ಹೋಗಲು ನಾಯಕರ ಪಾಲು ದೊಡ್ಡದಿದೆ. ಮೂರು ನಾಯಕರು ಬಿಟ್ಟು ಹೋಗುವ ವೇಳೆ ಸಾಕಷ್ಟು ಗೊಂದಲಗಳು ಉಂಟಾದವು. ಈ ಕಾರಣದಿಂದ ಮೂವರು ಪಕ್ಷ ತೊರೆದರು. ಈ ವೇಳೆ ಕುಮಾರಸ್ವಾಮಿ ವಿದೇಶದಲ್ಲಿ ಇದ್ದರು,ಜೊತೆಗೆ ಈ ದೊಡ್ಡಗೌಡರು ಮೌನವಹಿಸಿದ್ದು ನಿಗೂಢವಾಗಿತ್ತು ಎಂದು ತಿಳಿಸಿದರು.

    53ನೇ ವಸಂತಕ್ಕೆ ಕಾಲಿಟ್ಟ ಮಧು ಬಂಗಾರಪ್ಪ ಅವರಿಗೆ ನಟ ಡಾ. ಶಿವರಾಜ್ ಕುಮಾರ್ ಹೂಗುಚ್ಚ ನೀಡಿ ಶುಭ ಕೋರಿದರು. ಈ ವೇಳೆ ಕೇಕ್ ಕತ್ತರಿಸಿ ಅಭಿಮಾನಿಗಳು, ಕಾರ್ಯಕರ್ತರು ಸಂಭ್ರಮಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link