ಹಾವೇರಿ
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ” ಮುಂದಿನ ದಿನಳಲ್ಲಿ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಎಲ್ಲರೂ ಈ ಖಾತೆಯನ್ನು ಹೊಂದಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳು “ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ” ಖಾತೆಯನ್ನು ತೆರೆಯುವದರ ಕಾರ್ಯಕ್ರಮಕ್ಕೆ ಅಧೀಕೃತ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಸಾಮಾಜಿಕ ಭದ್ರತಾ ಪಿಂಚಣಿಯನ್ನು “ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ” ಖಾತೆಯ ಮೂಲಕವೇ ಬಟವಡೆ ಮಾಡಲು ಉನ್ನತ ಅಧಿಕಾರಿಗಳಿಂದ ಒಪ್ಪಿಗೆ ಪಡೆದು ಹಾವೇರಿ ಜಿಲ್ಲೆಯಾದ್ಯಂತ ಜಾರಿಗೊಳಿಸಲು ಚಿಂತನೆ ಮಾಡಲಾಗುತ್ತಿದೆ. ಜಿಲ್ಲೆಯ ಜನತೆ ಇದರ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಅದೇ ರೀತಿ “ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ” ಅಡಿಯಲ್ಲಿ ಜಾರಿಗೊಂಡಿದೆ. ಅದರಲ್ಲಿ ಸಾರ್ವಜನಿಕರು ಯಾವುದೇ ಬ್ಯಾಂಕಗಳಲ್ಲಿ ತಮ್ಮ ಖಾತೆ ಹೊಂದಿದ್ದರೂ ತಕ್ಷಣ ತಾವಿದ್ದ ಸ್ಥಳದಲ್ಲಿಯೇ ಅಂಚೆಯಣ್ಣನ ಮೂಲಕ ಯಾವುದೇ ಖರ್ಚಿಲ್ಲದೇ ಹಣ ಪಡೆಯಬಹುದು ಎಂದು ಹೇಳಿದರು.
ಹಾವೇರಿ ವಿಭಾಗದ ಅಂಚೆ ಅಧೀಕ್ಷಕರಾದ ರಮೇಶ ಪ್ರಭು ಅವರು ಮಾತನಾಡಿ, ರಾಜ್ಯಾದ್ಯಂತ “ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ” ಮಹಾ ಲಾಗಿನ ಡ್ರೈವ್ ಮಾರ್ಚ್ 1 ರಿಂದ 10 ರ ವರೆಗೆ ನಡೆಸಲಾಗುತ್ತಿದೆ. ಈ ಸಮಯದಲ್ಲಿ ಹಾವೇರಿ ಅಂಚೆ ವಿಭಾಗದಾದ್ಯಂತ ಅಂಚೆ ಇಲಾಖೆಯ “ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ” ಖಾತೆಯ ಮಹತ್ವವನ್ನು ಜನಜಾಗೃತಿಯ ಮೂಲಕ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಈ ಆರ್ಥಿಕ ಸೇರ್ಪಡೆ ಶಿಬಿರವನ್ನು ಪ್ರಚಾರ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಈ ಖಾತೆಯಿಂದಾಗುವ ಲಾಭದ ಬಗ್ಗೆ ಅರಿವು ಮೂಡಿಸಿ ಸ್ಥಳದಲ್ಲಿಯೇ ಖಾತೆಯನ್ನು ಕೇವಲ ಆಧಾರ ಸಂಖ್ಯೆ ಸಹಾಯದಿಂದ ತೆರೆಯಲಾಗುತ್ತಿದೆ ಎಂದು ತಿಳಿಸಿದರು.
ಹಾವೇರಿ ಅಂಚೆ ವಿಭಾಗದಲ್ಲಿ ಒಟ್ಟು 37 ಅಂಚೆ ಹಾಗೂ 221 ಶಾಖಾ ಅಂಚೆ ಕಚೇರಿಗಳಿವೆ. ಅದರಲ್ಲಿ ಶೇಕಡಾ 90 ರಷ್ಟು ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶದಲ್ಲಿವೆ. “ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ” ಖಾತೆ ತೆರೆಯುವುದರ ಮೂಲಕ ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಆಃಖಿ ಮುಖಾಂತರ ಬರುವ ಲಾಭಗಳಾದ ಕಿಸಾನ್ ಸಮ್ಮಾನ್, ಮಾತೃವಂದನ, ಬೆಳೆ ವಿಮೆ, ನೆರೆ ಪರಿಹಾರ, ಗ್ಯಾಸ್ ಸಬ್ಸಿಡಿ, ಪಿಂಚಣಿ ಮತ್ತು ವಿದ್ಯಾರ್ಥಿವೇತನಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೇ ಬಿಲ್ ಪಾವತಿ, ಹಣ ವರ್ಗಾವಣೆ ಇತ್ಯಾದಿ ಬ್ಯಾಂಕಿಂಗ್ ಸೇವೆಯನ್ನೂ ಈ ಖಾತೆ ತೆರೆಯುವದರ ಮೂಲಕ ಪಡೆಯಬಹುದು. ಖಾತೆ ತೆರೆಯಲು ಯಾವದೇ ದಾಖಲೆಗಳ ಅವಶ್ಯಕತೆಯಿರುವದಿಲ್ಲ, ಕೇವಲ ಆಧಾರ ಸಂಖ್ಯೆ ಹಾಗೂ ಮೋಬೈಲ್ ಇದ್ದರೆ ಸಾಕು ಕೇವಲ ಕೆಲವೇ ನಿಮಿಷಗಳಲ್ಲಿ ಖಾತೆ ತೆರೆಯಬಹುದು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ “ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ” ಖಾತೆಗಳನ್ನು ತೆರೆದು ಈ ಆರ್ಥಿಕ ಸೇರ್ಪಡೆಯ ಲಾಭ ಪಡೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗೆ ಅಥವಾ ನಿಮ್ಮೂರಿನ ಅಂಚೆಯಣ್ಣನನ್ನು ಭೇಟಿ ಮಾಡಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ